»   » ಸಿಂಗಪುರ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಮುಖಪುಟ

ಸಿಂಗಪುರ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಮುಖಪುಟ

Posted By:
Subscribe to Filmibeat Kannada

ರೂಪಾ ಅಯ್ಯರ್ ನಿರ್ದೇಶನದ ಎಚ್ ಐವಿ, ಏಡ್ಸ್ ಪೀಡಿತ ಮಕ್ಕಳ ಚಿತ್ರ 'ಮುಖಪುಟ' (The Cover Page) ಈಗಾಗಲೆ ಹಲವಾರು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡಿದೆ. ವಿಮರ್ಶಕರ ಮೆಚ್ಚುಗೆಗೂ ಪಾತ್ರವಾಗಿರುವ ಈ ಚಿತ್ರ ಹಲವಾರು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಇದೀಗ ಸಿಂಗಪುರ ಚಿತ್ರೋತ್ಸವದಕ್ಕೆ ಪಯಣ ಬೆಳೆಸಿದೆ.

ದಕ್ಷಿಣ ಆಫ್ರಿಕಾ, ಐರ್ಲೆಂಡ್, ಕ್ಯಾಲಿಫೋರ್ನಿಯಾ, ವಾಷಿಂಗ್ಟನ್, ಕೈರೋ ಹೀಗೆ ಹಲವಾರು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಮುಖಪುಟ ಪ್ರದರ್ಶನ ಕಂಡಿದೆ. ಏ.20ರಂದು ಸಿಂಗಪುರ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪಾಲ್ಗೊಂಡಿರುವ ಈ ಚಿತ್ರ ಅಲ್ಲಿನ ಆರ್ಚಿಡ್ ರಸ್ತೆಯ ಲಿಡೋ ಚಿತ್ರಮಂದಿರದಲ್ಲಿ ಪ್ರದರ್ಶನ ಕಾಣಲಿದೆ.

ಬೋಸ್ಟನ್ ಅಂತಾರಾಷ್ಟ್ರೀಯ ಚಿತ್ರೋತ್ಸವದ ಆಸ್ಕರ್ ಬೂಸ್ಟರ್ ವಿಭಾಗದಲ್ಲಿ ಆಯ್ಕೆಯಾಗಿರುವ ಏಳು ಚಿತ್ರಗಳಲ್ಲಿ ತಮ್ಮ 'ಮುಖಪುಟ'ವೂ ಸೇರಿರುವ ಬಗ್ಗೆ ರೂಪಾ ಅಯ್ಯರ್ ಹರ್ಷ ವ್ಯಕ್ತಪಡಿಸಿದ್ದಾರೆ. ನಿರ್ಮಾಪಕರಾದ ಪ್ರೊ. ನಾರಾಯಣ್ ಹೊಸಮನೆ ಮತ್ತು ಸುಬ್ರಾಯ ಹೊಸಮನೆ ಅವರು ಖುಷಿಯಾಗಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada