For Quick Alerts
  ALLOW NOTIFICATIONS  
  For Daily Alerts

  ಒಟ್ಟು 120 ಚಿತ್ರಮಂದಿರಗಳಲ್ಲಿ ಮೈಲಾರಿ ಮಹಾತ್ಮೆ!

  By Rajendra
  |

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ಮೈಲಾರಿ' ಚಿತ್ರ ಇದೇ ಡಿಸೆಂಬರ್ 24ರಂದು ತೆರೆಕಾಣುತ್ತಿದೆ. ರಾಜ್ಯದಾದ್ಯಂತ ಒಟ್ಟು 120 ಚಿತ್ರಮಂದಿರಗಳಲ್ಲಿ 'ಮೈಲಾರಿ' ಬಿಡುಗಡೆಯಾಗುತ್ತಿರುವುದಾಗಿ ಚಿತ್ರದ ನಿರ್ಮಾಪಕ ಕನಕಪುರ ಶ್ರೀನಿವಾಸ್ ತಿಳಿಸಿದ್ದಾರೆ.

  ಚಿತ್ರ ಬಿಡುಗಡೆ ಹೊತ್ತಿಗೆ ಚಿತ್ರಮಂದಿರಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳನ್ನೂ ತಳ್ಳಿಹಾಕುವಂತಿಲ್ಲ. ಏಕೆಂದರೆ 'ಮೈಲಾರಿ' ಚಿತ್ರಕ್ಕೆ ರಾಜ್ಯದದ್ಯಂತ ಡಿಮ್ಯಾಂಡಪ್ಪೋ ಡಿಮ್ಯಾಂಡು! ಚಿತ್ರದಲ್ಲಿನ ಶಿವಣ್ಣನ ವಿಶೇಷ ಗೆಟಪ್‌ಗಳು ಪ್ರೇಕ್ಷಕರನ್ನು ಖಂಡಿತ ಸೆಳೆಯುತ್ತವೆ ಎಂಬ ವಿಶ್ವಾಸದಲ್ಲಿ ಚಿತ್ರತಂಡವಿದೆ.

  ಕನ್ನಡ ಚಿತ್ರಗಳು : ಆರಿಸಿನೋಡು ಬೀಳಿಸಿನೋಡು

  'ಮೈಲಾರಿ' ಚಿತ್ರದಲ್ಲಿನ ಸಾಹಸ ಸನ್ನಿವೇಶಗಳು ಮೈನವಿರೇಳಿಸುವಂತಿವೆ. ಚಿತ್ರದ ಛಾಯಾಗ್ರಹಣವೂ ಕಣ್ಸೆಳೆಯುತ್ತದೆ ಎಂದು ಶಿವಣ್ಣ ಚಿತ್ರದ ಬಗ್ಗೆ ಮಾಹಿತಿ ನೀಡಿದ್ದಾರೆ. ಚಿತ್ರದಲ್ಲಿ ಒಂದು ಸಾಹಸ ಸನ್ನಿವೇಶದ ಕಾರಣ 'ಮೈಲಾರಿ'ಗೆ 'ಎ' ಪ್ರಮಾಣಪತ್ರ ಸಿಕ್ಕಿರಬಹುದು. ಉಳಿದಂತೆ ನಮ್ಮ ಚಿತ್ರವನ್ನು ಮನೆಮಂದಿಯೆಲ್ಲಾ ಕುಳಿತು ನೋಡಬಹುದು ಎಂದಿದ್ದಾರೆ ಹ್ಯಾಟ್ರಿಕ್ ಹೀರೋ.

  'ತಾಜ್ ಮಹಲ್' ಚಿತ್ರ ಯಶಸ್ವಿಯಾದಂತೆ 'ಮೈಲಾರಿ'ಯೂ ಖಂಡಿತ ಹಿಟ್ ಆಗುತ್ತದೆ. ಚಿತ್ರವನ್ನು ವೀಕ್ಷಿಸಿರುವ ಪ್ರಾದೇಶಿಕ ಸೆನ್ಸಾರ್ ಮಂಡಳಿ ಮೆಚ್ಚುಗೆ ಸೂಚಿಸಿದೆ. 'ತಾಜ್ ಮಹಲ್' ಚಿತ್ರದ ದಿನಗಳು ಮತ್ತೊಮ್ಮೆ ಎದುರಾದಂತಾಗಿದೆ ಎಂದಿದ್ದಾರೆ ಆರ್ ಚಂದ್ರು. ಸದಾ, ಸಂಜನಾ ಮತ್ತು ಜಾನ್ ಕುಕಿನ್ ಚಿತ್ರದ ಪಾತ್ರವರ್ಗದಲ್ಲಿದ್ದು, ಕೆ ಎಸ್ ಚಂದ್ರಶೇಖರ್ ಅವರ ಛಾಯಾಗ್ರಹಣ ಹಾಗೂ ಗುರುಕಿರಣ್ ಅವರ ಸಂಗೀತ ಚಿತ್ರಕ್ಕಿದೆ. [ಮೈಲಾರಿ]

  English summary
  Hat Trick Hero Shivarajakumar"s 99th movie Mylari releasing in 120 theaters on 24th December. Mylari gets U/A certificate from regional censor board. Sada, Sanjana, Ravi Kale and Raju Talikote lead movie is directed by R Chandru.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X