»   »  ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಅ. 21ಕ್ಕೆ

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಅ. 21ಕ್ಕೆ

Posted By:
Subscribe to Filmibeat Kannada

55ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ ಅಕ್ಟೋಬರ್ 21ರಂದು ದೆಹಲಿಯ ವಿಜ್ಞಾನ್ ಭವನದಲ್ಲಿ ನಡೆಯಲಿದೆ. ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ಪ್ರಶಸ್ತಿ ಪ್ರದಾನಮಾಡುತ್ತಾರೆ. ಹಿರಿಯ ನಿರ್ದೇಶಕ ಅಡೂರು ಗೋಪಾಲಕೃಷ್ಣನ್ , ಗಾಯಕ ಮನ್ನಾ ಡೇ ಮುಂತಾದ ದಿಗ್ಗಜರು ಹಾಜರಿರಲಿದ್ದಾರೆ. ಮನ್ನಾ ಡೇ ಅವರು ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸ್ವೀಕರಿಸಲಿದ್ದಾರೆ.

ಕನ್ನಡದ ಉಮಾಶ್ರೀ ಅವರು ಗುಲಾಬಿ ಟಾಕೀಸ್' ನಲ್ಲಿ ನೀಡಿದ ಮನೋಜ್ಞ ಅಭಿನಯಕ್ಕಾಗಿ ಉತ್ತಮ ನಟಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ತಮಿಳಿನ ಉತ್ತಮ ಚಿತ್ರ'ಕಾಂಜಿವರಂ'ನಲ್ಲಿನ ನಟನೆಗಾಗಿ ಪ್ರಕಾಶ್ ರಾಜ್ ಅವರು ಪ್ರಶಸ್ತಿ ಗಳಿಸಿದ್ದಾರೆ. ಒಟ್ಟು 31 ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು. ಅತ್ಯುತ್ತಮ ಚಲನಚಿತ್ರ, ಅತ್ಯುತ್ತಮ ನಿರ್ದೇಶಕರಿಗೆ ಇಂದಿರಾಗಾಂಧಿ ಪ್ರಶಸ್ತಿ, ಅತ್ಯುತ್ತಮ ಜನಪ್ರಿಯ ಚಿತ್ರ, ಉತ್ತಮ ನಟ, ನಟಿ, ಸಂಕಲನ, ಸಾಹಿತ್ಯ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಸಾಧನೆ ಮಾಡಿದವರಿಗೆ ಪ್ರಶಸ್ತಿ ನೀಡಲಾಗುತ್ತಿದೆ. ಸಾಕ್ಷ್ಯ ಚಿತ್ರ ವಿಭಾಗದಲ್ಲಿ ಒಟ್ಟು 22 ವಿಭಾಗಗಳಲ್ಲಿ ಆಯ್ಕೆಯಾದವರಿಗೆ ಪ್ರಶಸ್ತಿ ಸಲ್ಲಲಿದೆ. ಉತ್ತಮ ಸಿನಿಮಾ ವಿಮರ್ಶಕರಿಗೂ ಪ್ರಶಸ್ತಿ ಲಭಿಸುತ್ತಿರುವುದು ವಿಶೇಷ.

(ಏಜೆನ್ಸೀಸ್)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada