ಬ್ಯಾಂಕ್ ನೌಕರರಿಗೆ ಪುನೀತ್ ಹೇಳಿದ ನಲ್ನುಡಿ
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಇದೇ ಮೊದಲ ಬಾರಿಗೆ ಬ್ಯಾಂಕ್ ಶಾಖೆಯೊಂದನ್ನು ಉದ್ಘಾಟಿಸಿದ್ದಾರೆ. ಕೆಂಗೇರಿ ಹೋಬಳಿಯ ಮರಿಯಪ್ಪನಪಾಳ್ಯದಲ್ಲಿ ಸುಧಾ ಕೋ ಆಪರೇಟಿವ್ ಬ್ಯಾಂಕ್‌ನ 5ನೇ ಶಾಖೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕನ್ನಡ ಭಾಷೆ ಮತ್ತು ಚಿತ್ರರಂಗವನ್ನು ಎಂದೂ ಮರೆಯಬೇಡಿ ಎಂದು ಅವರು ಈ ಸಂದರ್ಭದಲ್ಲಿ ನೌಕರರನ್ನು ಉದ್ದೇಶಿಸಿ ಹೇಳಿದರು. ಮಾತೃ ಭಾಷೆಯನ್ನು ಪ್ರೀತಿಸಿ, ಗೌರವಿಸಿ. ನಮಗೆ ಜನ್ಮ ನೀಡಿದ ಮಾತೃಭೂಮಿಯನ್ನು ಮರೆಯಬಾರದು ಎಂದರು. ಇದೇ ಮೊದಲ ಬಾರಿಗೆ ನಾನು ಬ್ಯಾಂಕ್ ಶಾಖೆಯನ್ನು ಉದ್ಘಾಟಿಸುತ್ತಿದ್ದು. ಈ ಅವಕಾಶ ಕೊಟ್ಟಿದ್ದಕ್ಕೆ ಬ್ಯಾಂಕ್ ಆಡಳಿತ ಮಂಡಳಿಗೆ ಧನ್ಯವಾದಗಳನ್ನು ತಿಳಿಸಿದರು.
ಬ್ಯಾಂಕ್‌ನ ಅಧ್ಯಕ್ಷ ಜೆ ಪಿ ನಾರಾಯಣಸ್ವಾಮಿ ಮಾತನಾಡುತ್ತಾ, ಬಡವರಿಗೆ ಸುಲಭವಾಗಿ ಸಾಲ ಸೌಲಭ್ಯ ಒದಗಿಸುವ ಉದ್ದೇಶದಿಂದ ಬ್ಯಾಂಕ್ ಸ್ಥಾಪನೆಯಾಗಿದೆ. ಹಲವು ವರ್ಷಗಳಿಂದ ನ್ಯಾಯಯುತವಾಗಿ ಮತ್ತು ಪಾರದರ್ಶಕವಾಗಿ ಬ್ಯಾಂಕ್ ಆಡಳಿತ ನಡೆಸಿಕೊಂಡು ಬರುತ್ತಿದೆ ಎಂದರು.
More from Filmibeat
ಪುನೀತ್ ರಾಜ್ ಕುಮಾರ್ ಸುಧಾ ಕೋ ಆಪರೇಟಿವ್ ಬ್ಯಾಂಕ್ ಕೆಂಗೇರಿ ಜಾಕಿ ಪವರ್ ಸ್ಟಾರ್ puneeth rajkumar sudha co operative bank kengeri jacike


Click it and Unblock the Notifications











