For Quick Alerts
ALLOW NOTIFICATIONS  
For Daily Alerts

ಪುಟ್ಟಣ್ಣ ಕಣಗಾಲ್ ಪುತ್ರ ರಾಮು ಅಳಲು ಕೇಳುವವರಾರು

By Rajendra
|

ಬೆಳ್ಳಿಮೋಡ ದಿಂದ ಮಸಣದ ಹೂವು ಚಿತ್ರದ ತನಕ ತನ್ನ ವೃತ್ತಿ ಜೀವನದಲ್ಲಿ ವಿಭಿನ್ನ ಚಿತ್ರಗಳನ್ನು ನೀಡಿದ ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ ಅವರ ಹೆಸರು ಇಂದಿಗೂ ಅಜರಾಮರ.ದಿ. ವಿಷ್ಣುವರ್ಧನ್, ಅಂಬರೀಷ್, ಶ್ರೀನಾಥ್, ರಾಮಕೃಷ್ಣ, ಶ್ರೀಧರ್, ಪದ್ಮಾವಸಂತಿ ಮುಂತಾದ ಹಲವಾರು ನಟ ನಟಿಯರ ಬಣ್ಣದ ಬದುಕಿಗೆ ದಾರಿದೀಪವಾದ ಪುಟ್ಟಣ್ಣ ಅವರ ನೆನಪು ಚಿತ್ರೋದ್ಯಮಕ್ಕೆ ಇದೆಯೇ? ಇಲ್ಲ ಎನ್ನುತ್ತಾರೆ ಪುಟ್ಟಣ್ಣ ಪುತ್ರ ರಾಮು ಕಣಗಾಲ್.

ಖಾಸಗಿ ಟಿವಿ ವಾಹಿನಿಯ ಸಂದರ್ಶನದಲ್ಲಿ ಬೇಸರ ವ್ಯಕ್ತ ಪಡಿಸಿದ ರಾಮು, ಕಳೆದ 20 ವರ್ಷಗಳಿಂದ "ಕಣಗಾಲ್ ನೃತ್ಯಾಲಯ" ಎನ್ನುವ ಹೆಸರಿನಲ್ಲಿ ನಾಟ್ಯ ಶಾಲೆ ನಡೆಸುತ್ತಿದ್ದಾರೆ. ಮದರಾಸಿನಲ್ಲಿ ಓದಿ ಬೆಳೆದಿದ್ದ ನನಗೆ ತಂದೆ ಶಿಸ್ತು ಮತ್ತು ಗೌರವಯುತವಾಗಿ ಬದುಕಲು ಹೇಳಿ ಕೊಟ್ಟಿದ್ದರು. ಅವರು ಹಾಕಿ ಕೊಟ್ಟ ಗೆರೆಯಲ್ಲೇ ಇಂದು ನಾವು ಬಾಳುತ್ತಿದ್ದೇವೆ. ನಮ್ಮ ತಂದೆಗೆ ಅಭಿಮಾನಿಗಳಿದ್ದಾರೆ. ಈಗಲೂ ಅಭಿಮಾನಿಗಳು ನನ್ನಲ್ಲಿ ನನ್ನ ತಂದೆಯನ್ನು ಕಾಣುತ್ತಾರೆ. ಆದರೆ ಚಿತ್ರೋದ್ಯಮದವರಲ್ಲ ಎಂದು ಅಳಲು ವ್ಯಕ್ತ ಪಡಿಸಿದ್ದಾರೆ.

ಪುಟ್ಟಣ್ಣ ಹೆಸರಿನಲ್ಲಿ ಪ್ರಶಸ್ತಿ ನೀಡಲಾಗುತ್ತಿದೆ. ಶಿಷ್ಟಾಚಾರಕ್ಕಾದರೂ ಪುಟ್ಟಣ್ಣ ಕುಡಿಗಳಾದ ನಮಗೆ ಆಹ್ವಾನ ನೀಡುವುದಿಲ್ಲ. ಚಿತ್ರರಂಗ 75 ವರ್ಷದ ಸಂಭ್ರಮದಲ್ಲಿ ಈ ರಾಜ್ಯ ಕಂಡ ಯಶಸ್ವೀ ನಿರ್ದೇಶಕ ಪುಟ್ಟಣ್ಣ ಅವರ ಕುಟುಂಬದವರಾದ ನಮಗೆ ಆಹ್ವಾನ ಪತ್ರಿಕೆ ಕಳುಹಿಸುವ ಸೌಜನ್ಯತೆ ಈ ಚಿತ್ರರಂಗದವರಿಗಿಲ್ಲ. ಮಾತು ಮಾತಿಗೆ ನಾವು ಪುಟ್ಟಣ್ಣ ಶಿಷ್ಯರೆಂದು ಹೇಳುತ್ತಾರೆಯೆ ಹೊರತು ಅವರಿಗೆ ನಮ್ಮ ತಂದೆಯ ಮೇಲೆ ಗೌರವವಿಲ್ಲ ಎಂದು ರಾಮು ಬೇಸರ ವ್ಯಕ್ತ ಪಡಿಸಿದ್ದಾರೆ.

ನಮ್ಮ ತಂದೆ ಶಕ್ತಿ ದೇವತೆಯ ಆರಾಧಕರು. ಅವರ ಚಿತ್ರದಲ್ಲಿ ಮಹಿಳೆಯರಿಗೆ ಪ್ರಾಧಾನ್ಯತೆ ಇರುತ್ತಿತ್ತು. ಇತ್ತೇಚೆಗೆ ನಡೆದ ವಿಶ್ವ ಕನ್ನಡ ಸಮ್ಮೇಳನದಲ್ಲಿ ನಮ್ಮ ತಂದೆಯ ಒಂದು ಭಾವಚಿತ್ರದ ಸುಳಿವೇ ಇಲ್ಲ. ನನ್ನ ತಂದೆ ಕನ್ನಡ ಚಿತ್ರರಂಗಕ್ಕೆ ನೀಡಿದ ಕೊಡುಗೆ ನಗಣ್ಯವೆ? ಮಾತನಾಡಲು ಹೋದರೆ ಸರಿಯಾಗಿ ಮಾತನಾಡದೇ ಕಳುಹಿಸುತ್ತಾರೆ. ಅಭಿಮಾನಿಗಳಿಗೆ ಇರುವ ಪ್ರೀತಿ ವಿಶ್ವಾಸ ಈ ನಮ್ಮ ಉದ್ಯಮದವರಿಗಿಲ್ಲ ಎನ್ನುವ ನೋವು ನಮ್ಮ ಕುಟುಂಬದವರನ್ನು ಕಾಡುತ್ತಿದೆ ಎಂದು ರಾಮು ಕಣಗಾಲ್ ಬೇಸರ ವ್ಯಕ್ತ ಪಡಿಸಿದ್ದಾರೆ. (ದಟ್ಸ್‌ಕನ್ನಡ ಸಿನಿವಾರ್ತೆ)

English summary
Puttanna Kanagal (1933–1985) was one of the most prominent Kannada film directors of the 1960s and the 70s. Recently his son Ramu Kanagal, fedup with Kannada film industry's contempt against his father, expressed deep sorrow over the ingratitude.

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more