»   » ಕನಸುಗಾರನ ಮತ್ತೊಂದು ಕನಸು 'ಕ್ರೇಜಿ ಸ್ಟಾರ್'

ಕನಸುಗಾರನ ಮತ್ತೊಂದು ಕನಸು 'ಕ್ರೇಜಿ ಸ್ಟಾರ್'

Posted By:
Subscribe to Filmibeat Kannada

ಕ್ರೇಜಿಸ್ಟಾರ್ ರವಿಚಂದ್ರನ್ ಮುಖ್ಯಭೂಮಿಕೆಯಲ್ಲಿರುವ 'ಕ್ರೇಜಿ ಲೋಕ' ಚಿತ್ರ ಯುಗಾದಿ (ಮಾ.23) ಹಬ್ಬಕ್ಕೆ ತೆರೆಕಾಣುತ್ತಿದೆ. ಇದೇ ಹುಮ್ಮಸ್ಸಿನಲ್ಲಿ ಕನಸುಗಾರ ರವಿಚಂದ್ರನ್ ಮತ್ತೆ ಆಕ್ಷನ್ ಕಟ್‌ಗೆ ಮರಳಿದ್ದಾರೆ. ಅವರ ಹೊಸ ಚಿತ್ರಕ್ಕೆ 'ಕ್ರೇಜಿ ಸ್ಟಾರ್' ಎಂದು ಹೆಸರಿಡಲಾಗಿದೆ.

ಎನ್ ಎಸ್ ರಾಜಶೇಖರ್ ನಿರ್ಮಿಸುತ್ತಿರುವ ಚಿತ್ರಕ್ಕೆ ರವಿ ಅವರೇ ಸಂಗೀತ ನಿರ್ದೇಶನವನ್ನೂ ಮಾಡಲಿದ್ದಾರೆ. ಆದರೆ ಚಿತ್ರದಲ್ಲಿ ಅವರೇ ಅಭಿನಯಿಸುತ್ತಾರೋ ಇಲ್ಲವೋ ಎಂಬುದು ಇನ್ನೂ ಗೊತ್ತಾಗಿಲ್ಲ. ಚಿತ್ರದ ತಾರಾಬಳಗ ಆಯ್ಕೆ ಭರದಿಂದ ಸಾಗಿದೆ.

ಮೂಲಗಳ ಪ್ರಕಾರ ಇದು ಮಲಯಾಳಂನ ಯಶಸ್ವಿ ಚಿತ್ರ 'ಟ್ರಾಫಿಕ್' ರೀಮೇಕ್ ಎನ್ನಲಾಗಿದೆ. ಆದರೆ ರವಿಚಂದ್ರನ್ ಮೂಲ ಚಿತ್ರವನ್ನು ಯಥಾವತ್ತಾಗಿ ಕನ್ನಡಕ್ಕೆ ತರದೆ ಅಲ್ಪಸ್ವಲ್ಪ ಬದಲಾವಣೆಗಳನ್ನೂ ಮಾಡಿಕೊಂಡು ತರಲಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್)

English summary
Kannada films dream merchant Ravichandran is all set to take the role of a director and he would be directing a film titled as Crazy Star. This would be produced by N S Rajkumar.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada