»   »  ಬೆಳ್ಳಿತೆರೆಗೆ ರವಿಚಂದ್ರನ್ ಮಗನ ಪಾದಾರ್ಪಣೆ

ಬೆಳ್ಳಿತೆರೆಗೆ ರವಿಚಂದ್ರನ್ ಮಗನ ಪಾದಾರ್ಪಣೆ

Posted By:
Subscribe to Filmibeat Kannada
Crazy star Ravichandran
ಇನ್ನು ಮುಂದೆ ತಮ್ಮ ಚಿತ್ರಗಳಲ್ಲಿ ನಾಯಕ ನಟನಾಗಿ ಅಭಿನಯಿಸುವುದಿಲ್ಲ ಎಂದು ಕ್ರೇಜಿ ಸ್ಟಾರ್ ರವಿಚಂದ್ರನ್ ಸ್ವಯಂ ನಿವೃತ್ತಿ ಘೋಷಿಸಿಕೊಂಡಿದ್ದಾರೆ. ''ಉದಯೋನ್ಮುಖ ನಟರೊಂದಿಗೆ ಚಿತ್ರ ಮಾಡುತ್ತೇನೆ'' ಎಂದು ಟಿ ವಿ ವಾಹಿನಿಯೊಂದರಲ್ಲಿ ಅವರು ಹೇಳಿದ್ದರು.

ಕಡೆಗೂ ರವಿಚಂದ್ರನ್ ತಮ್ಮ ಮಾತನ್ನು ಉಳಿಸಿಕೊಂಡಿದ್ದಾರೆ. ಹೇಳಿದಂತೆಯೇ ಮಾಡಿದ್ದಾರೆ. ಯುವ ನಾಯಕನೊಬ್ಬ ಅವರ ಮುಂದಿನ ಚಿತ್ರದಲ್ಲಿ ಬೆಳ್ಳಿತೆರೆಗೆ ಪಾದರ್ಪಣೆ ಮಾಡುತ್ತಿದ್ದಾರೆ. ಆ ಯುವ ನಟ ಮತ್ತ್ಯಾರು ಅಲ್ಲ ರವಿಚಂದ್ರನ್ ಅವರ ಮಗ ಮನೋಜ್ ! ಚಿತ್ರಕ್ಕೆ 'ಅಂತರ್ಯಾಮಿ' ಎಂದು ಹೆಸರಿಡಲಾಗಿದೆ. ರವಿಚಂದ್ರನ್ ಅಭಿನಯಿಸುತ್ತಿರುವ 'ಮಂಜಿನ ಹನಿ'ಚಿತ್ರದೊಂದಿಗೆ ಅಂತರ್ಯಾಮಿ ಚಿತ್ರೀಕರಣವೂ ನಡೆಯಲಿದೆ.

ರವಿಚಂದ್ರನ್ ಅವರ ಸಹೋದರ ಬಾಲಾಜಿಯ ಚಿತ್ರಗಳು ಒಂದಾದ ನಂತರ ಒಂದು ಬಾಕ್ಸಾಫೀಸ್ ನಲ್ಲಿ ಮಕಾಡೆ ಮಲಗುತ್ತಿವೆ. ಈ ಕಾರಣಕ್ಕೆ ರವಿಚಂದ್ರನ್ ತಮ್ಮ ಮಗ ಮನೋಜ್ ಅವರನ್ನು ಚಿತ್ರರಂಗಕ್ಕೆ ತರುತ್ತಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ಕನ್ನಡ ಚಿತ್ರರಂಗಕ್ಕೆ ಜೂನಿಯರ್ ರವಿಚಂದ್ರನ್ ರ ಪ್ರವೇಶವಾಗುತ್ತಿದೆ. ಕನ್ನಡ ಚಿತ್ರರಂಗದಲ್ಲಿ ಅಪ್ಪನ ದಾಖಲೆಗಳನ್ನು ಮಗ ಮುರಿಯಲಿ ಎಂದು ಆಶಿಸೋಣವೆ?

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada