»   »  ರಾಕ್ ಲೈನ್ ಮಗ ಮತ್ತು ಮುನಿರತ್ನ ಮಗಳ ಮದುವೆ

ರಾಕ್ ಲೈನ್ ಮಗ ಮತ್ತು ಮುನಿರತ್ನ ಮಗಳ ಮದುವೆ

Posted By:
Subscribe to Filmibeat Kannada
Rockline Venkatesh
ಕನ್ನಡ ಚಿತ್ರರಂಗದ ಎರಡು ರಾಯಲ್ ಚಾಲೆಂಜರ್ಸ್ ಕುಟುಂಬಗಳು ಮದುವೆ ಮೂಲಕ ಒಂದಾಗುತ್ತಿವೆ! ನಿರ್ಮಾಪಕರಾದ ರಾಕ್ ಲೈನ್ ವೆಂಕಟೇಶ್ ಮಗ ವಿ ಯತೀಶ್ ಮತ್ತು ಮುನಿರತ್ನ ನಾಯ್ಡು ಮಗಳು ಸಿಂಧೂರಿ ಏಪ್ರಿಲ್ 30ರಂದು ಹಸೆಮಣೆ ಏರಲಿದ್ದಾರೆ.

ಏಪ್ರಿಲ್ 29ರಂದು ವರಪೂಜೆ. ಏಪ್ರಿಲ್ 30ರ 10.46 ಮತ್ತು 11.05 ಗಂಟೆಗೆ ಸಲ್ಲುವ ಶುಭ ಮುಹೂರ್ತದಲ್ಲಿ ಇವರ ಮದುವೆ ನೆರವೇರಲಿವೆ. ಆರತಕ್ಷತೆ ಅಂದೇ ಸಂಜೆ 7 ಗಂಟೆಗೆ ನಡೆಯಲಿದೆ ಎಂಬ ಸಂದೇಶ ಹೊತ್ತ ಆಹ್ವಾನ ಪತ್ರಿಕೆಗಳು ಈಗಾಗಲೇ ಸಾವಿರಾರು ಮಂದಿಯ ಕೈ ಸೇರಿದೆ. ಇವರಿಬ್ಬರ ಮದುವೆ ಬೆಂಗಳೂರು ಅರಮನೆಯಲ್ಲಿ ಅದ್ದೂರಿಯಾಗಿ ನಡೆಯಲಿದೆ.

ಕನ್ನಡ ಚಿತ್ರರಂಗದಲ್ಲಿ ರಾಕ್ ಲೈನ್ ಮತ್ತು ಮುನಿರತ್ನ ನಾಯ್ಡು ಕಳೆದ 25 ವರ್ಷಗಳಿಂದ ದೋಸ್ತಿಗಳಾಗಿದ್ದವರು. ಈಗ ಮದುವೆ ಮೂಲಕ ಸಂಬಂಧಿಗಳಾಗುತ್ತಿದ್ದಾರೆ. ಸೊಸೆ ರೂಪದಲ್ಲಿ ಮಗಳನ್ನು ಮನೆ ತುಂಬಿಸಿಕೊಳ್ಳುತ್ತಿದ್ದೇನೆ ಎಂದು ರಾಕ್ ಲೈನ್ ಹೇಳಿದರೆ, ನನಗೆ ಮಗ ಸಿಕ್ಕಿದ್ದಾನೆ ಎಂಬ ಖುಷಿ ಮುನಿರತ್ನ ಅವರದು.

ಯತೀಶ್ ಮತ್ತು ಸಿಂಧೂರಿ ಮದುವೆಗೆ ಸರಿಸುಮಾರು ಹತ್ತು ಸಾವಿರ ಮಂದಿ ಆಗಮಿಸುವ ನಿರೀಕ್ಷೆ ಇದೆ. ಆಸ್ಟ್ರೇಲಿಯಾದಲ್ಲಿ ಎಂಬಿಎ ಶಿಕ್ಷಣ ಪಡೆದಿರುವ ಯತೀಶ್ ತಂದೆಯ ಏಕೈಕ ವಾರಸುದಾರ. ಪದವೀಧರೆಯಾದ ಸಿಂಧೂರಿ ಓದಿದ್ದು ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ. ಅಂದಹಾಗೆ ಯಾವುದೇ ವರದಕ್ಷಿಣೆ ಬೇಡ ಎಂದು ಎರಡು ಕುಟುಂಬಗಳು ಅಂಗೀಕರಿಸಿವೆ!

(ದಟ್ಸ್ ಕನ್ನಡ ಚಿತ್ರವಾರ್ತೆ)

ಸದ್ದಿಲ್ಲದಂತೆ ರಾಕ್ ಲೈನ್ ಪುತ್ರನ ನಿಶ್ಚಿತಾರ್ಥ!
ರಾಕ್ ಲೈನ್ ನಿರ್ಮಾಣದಲ್ಲಿ ಮೂರು ಚಿತ್ರಗಳು
ಬಾಕ್ಸಾಫೀಸ್ ಗಳಿಕೆಯಲ್ಲಿ ದಾಖಲೆ ಬರೆದ ಜಂಗ್ಲಿ
ನಟಿ ನಿರ್ಮಲಾ ಜತೆ ಗುಂಡ್ರಗೋವಿ ಸತ್ಯನ ಮದುವೆ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada