»   »  ಟೆಲಿ ಬ್ರಹ್ಮ ಎಂಬ ಸಿನಿಮಾ ಪ್ರಚಾರದ ಹೊಸ ಅಸ್ತ್ರ

ಟೆಲಿ ಬ್ರಹ್ಮ ಎಂಬ ಸಿನಿಮಾ ಪ್ರಚಾರದ ಹೊಸ ಅಸ್ತ್ರ

Subscribe to Filmibeat Kannada

ಮೊಬೈಲ್ ಫೋನ್ ಮೂಲಕ ಸಿನಿಮಾಗಳಿಗೆ ಪ್ರಚಾರ ನೀಡುವ 'ಟೆಲಿ ಬ್ರಹ್ಮ' ಹೆಸರಿನ ಹೊಸ ಪ್ರಚಾರ ಕಂಪನಿ ಆರಂಭವಾಗಿದೆ. 'ಬ್ಲೂಫೀ' ಎಂಬ ಕಾರ್ಪೊರೇಟ್ ಕಂಪನಿ ಈ ಪ್ರಾಜೆಕ್ಟನ್ನು ಕೈಗೆತ್ತಿಕೊಂಡಿದ್ದು ಈಗಾಗಲೇ ಪ್ರಾಯೋಗಿಕವಾಗಿ 'ಮುಸ್ಸಂಜೆಯ ಮಾತು' ಇನ್ನಿತರೆ ಚಿತ್ರಗಳಿಗೆ ಪ್ರಚಾರ ನೀಡಿದೆ.

ಬಸ್ ನಿಲ್ದಾಣ, ಶಾಫಿಂಗ್ ಮಾಲ್ ಗಳು, ಥಿಯೇಟರ್ ಗಳು ಮತ್ತಿತರೆ ಸಾರ್ವಜನಿಕ ಪ್ರದೇಶಗಳಲ್ಲಿ 'ಟೆಲಿ ಬ್ರಹ್ಮ' ಕಾರ್ಯನಿರ್ವಹಿಸುತ್ತದೆ. ಮೊಬೈಲ್ ಗಳಲ್ಲಿ ಬ್ಲೂಟೂತ್ ಸೌಲಭ್ಯ ಇದ್ದು, ಅದನ್ನು ಚಾಲನೆಯಲ್ಲಿಟ್ಟರೆ ಸಿನಿಮಾದ ಟ್ರೈಲರ್ ಗಳನ್ನು ಉಚಿತವಾಗಿ ಪಡೆಯಬಹುದು. ಡೌನ್ ಲೋಡ್ ಸಮಯದಲ್ಲಿ ವೈರಸ್ ಸಮಸ್ಯೆ ಉದ್ಭವಿಸದಂತೆ 'ಬ್ಲೂಫಿ' ಸಂಸ್ಥೆ ಎಚ್ಚರ ವಹಿಸುತ್ತದೆ.

ಸಿನಿಮಾ ಟ್ರೈಲರ್ ಗಳನ್ನು ಡೌನ್ ಲೋಡ್ ಮಾಡಿಕೊಳ್ಳುವುದರೊಂದಿಗೆ, ಈ ಚಿತ್ರದ ಮಾಹಿತಿಯನ್ನು ಸ್ನೇಹಿತರು, ಹಿತೈಷಿಗಳಿಗೆ ಒದಗಿಸಬಹುದು.ಸಂಪರ್ಕ ಕ್ಷೇತ್ರದಲ್ಲಿ ಮೊಬೈಲ್ ಫೋನ್ ಗಳು ಕ್ರಾಂತಿಯನ್ನೇ ಉಂಟು ಮಾಡಿವೆ. ಪ್ರತಿಯೊಬ್ಬರಿಗೂ ಮೊಬೈಲ್ ಇಂದು ಅನಿವಾರ್ಯವಾಗಿದೆ. ಮೊಬೈಲ್ ಗಲ ಮೂಲಕ ಕನ್ನಡ ಸಿನಿಮಾಗಳಿಗೆ ಪ್ರಚಾರ ನೀಡುವ ಮೂಲಕ ಹೆಚ್ಚು ಹೆಚ್ಚು ಜನರನ್ನು ತಲುಪಬಹುದು. ಕನ್ನಡ ನಿರ್ಮಾಪಕರಿಗೆ ಇದರಿಂದ ಹೆಚ್ಚು ಅನುಕೂಲವಾಗಲಿದೆ ಎನ್ನುತ್ತಾರೆ ಕಂಪನಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಸುರೇಶ್.

(ದಟ್ಸ್ ಕನ್ನಡ ಚಿತ್ರವಾರ್ತೆ)

ಇದೂ ಓದಿ
ಓಂ ಪ್ರಕಾಶ್ ರಾವ್ ಎಂಬ ಮಾಸ್ಟರ್ ಮೈಂಡ್
ಮುಂಗಾರು ಮಳೆ ಛಾಯಾಗ್ರಾಹಕ ಕೃಷ್ಣ ತೆಲುಗಿಗೆ
ದರ್ಶನ್ ಪಶ್ಚಾತ್ತಾಪ ಜಯಮಾಲಾ ಅಯ್ಯೋ ಪಾಪ!
ಅನಂತ್ ಬಿಚ್ಚಿಟ್ಟ ಶಂಕರ್ ನಾಗ್ ಸಾವಿನ ರಹಸ್ಯ!

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada