»   » ಐವರು ನಾಯಕಿಯರ ಮಧ್ಯೆ ಉಪ್ಪಿ ಎಂಬ ಬುದ್ಧಿವಂತ!

ಐವರು ನಾಯಕಿಯರ ಮಧ್ಯೆ ಉಪ್ಪಿ ಎಂಬ ಬುದ್ಧಿವಂತ!

Posted By: Super Admin
Subscribe to Filmibeat Kannada


ಬುದ್ದಿವಂತರಿಗಾಗಿ 'ಎ'ಚಿತ್ರ ತೆಗೆದ ಉಪೇಂದ್ರ, ಈಗ ಬುದ್ಧಿವಂತ ಚಿತ್ರದ ನಾಯಕ. ಅವರೊಟ್ಟಿಗೆ ಈ ಚಿತ್ರದಲ್ಲಿ ಐವರು ನಾಯಕಿಯರು ನಟಿಸಲಿದ್ದಾರೆ. ಹೀಗಾಗಿ ಇದು ಫೈವ್ ಸ್ಟಾರ್ ಚಿತ್ರ! ನಾಯಕಿಯರ ಆಯ್ಕೆಗೆ ಬಹಳ ಕಸರತ್ತು ನಡೆಯುತ್ತಿದೆ. ಮುಂಬೈ ಹುಡುಗಿಯರ ಜೊತೆಗೆ, ಕನ್ನಡದ ಹುಡುಗಿಯರ ಬೆರೆಸುವ ಯೋಚನೆಯೂ ಇದೆ.

ಇತ್ತೀಚೆಗಷ್ಟೇ ಮುಹೂರ್ತ ನಡೆದಿದ್ದು, ಮುಂಗಾರು ಮಳೆ ಹುಡುಗಿ ಪೂಜಾಗಾಂಧಿ ಮತ್ತು ಉಪೇಂದ್ರ ಅಭಿನಯದ ಕೆಲವು ತುಣುಕುಗಳನ್ನು ಚಿತ್ರೀಕರಿಸಲಾಯಿತು. ರಮಾನಾಥ್ ಋಗ್ವೇದಿ ನಿರ್ದೇಶನದ ಹೊಣೆ ಹೊತ್ತಿದ್ದು, ಉಪ್ಪಿಯ ಇಮೇಜ್ ಬದಲಿಸಲು ನಿರ್ಧರಿಸಿದ್ದಾರೆ.

ಶಂಕರೇ ಗೌಡ, ಮೋಹನ್ ಮತ್ತು ಎಸ್.ವಿ.ರಾಜೇಂದ್ರ ಸಿಂಗ್ ಬಾಬು ನಿರ್ಮಾಣದ ಹೊಣೆ ಹೊತ್ತಿದ್ದಾರೆ. ಚಿತ್ರದ ಹೆಸರೇ ಬುದ್ಧಿವಂತ! ಇನ್ನೆಷ್ಟು ಗಿಮಿಕ್ ಗಳಿವೆಯೋ ಗೊತ್ತಿಲ್ಲ.

ಮೊನ್ನೆಯಷ್ಟೇ ತಮ್ಮ ಪತ್ನಿ ಪ್ರಿಯಾಂಕ, ಮಗಳು ಐಶ್ವರ್ಯ, ಮಗ ಆಯುಷ್ಮಾನ್ ಮತ್ತು ಆಭಿಮಾನಿಗಳೊಂದಿಗೆ 40ನೇ ಹುಟ್ಟುಹಬ್ಬ ಆಚರಿಸಿಕೊಂಡು ಉಪ್ಪಿ ಖುಷಿಯಲ್ಲಿದ್ದಾರೆ. ಅನಾಥ ಚಿತ್ರದ ಯಶಸ್ಸು ಅವರಿಗೆ ಖುಷಿ ತಂದಿದೆ. ಈ ಮಧ್ಯೆ ಅಭಿಮಾನಿಗಳ ಬಹುದಿನದ ಒತ್ತಾಯಕ್ಕೆ ಉಪ್ಪಿ ಮಣಿದಿದ್ದಾರೆ. ಸದ್ಯದಲ್ಲೇ ತಮ್ಮ ನಿರ್ದೇಶನದ ಹೊಸ ಚಿತ್ರವನ್ನು ಆರಂಭಿಸಲಿದ್ದಾರೆ. ಚಿತ್ರದ ಕತೆ ಮತ್ತು ಚಿತ್ರಕತೆ ಅಂತಿಮ ರೂಪಕ್ಕೆ ಬಂದಿದೆ ಎಂದು ಉಪ್ಪಿ ನಿಕಟವರ್ತಿಗಳು ಹೇಳಿದ್ದಾರೆ.

ಉಪ್ಪಿಗೆ '40':  ನೋಡಿ ಹುಟ್ಟುಹಬ್ಬದ ಫೋಟೋ ಆಲ್ಬಮ್ 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada