»   » 2015ರ ಮೊಟ್ಟಮೊದಲ ಕನ್ನಡ ಸಿನಿಮಾ ಯಾವುದು?

2015ರ ಮೊಟ್ಟಮೊದಲ ಕನ್ನಡ ಸಿನಿಮಾ ಯಾವುದು?

Posted By:
Subscribe to Filmibeat Kannada

2014ನೇ ವರ್ಷಕ್ಕೆ ಗುಡ್ ಬೈ ಹೇಳುವ ಸಮಯ ಸಮೀಪಿಸುತ್ತಿದೆ. ಕನ್ನಡ ಚಿತ್ರೋದ್ಯಮ ಸಾಕಷ್ಟು ಏಳುಬೀಳುಗಳನ್ನು ಕಂಡಂತಹ ವರ್ಷವಿದು. ಹಲವರ ಸಾವು ನೋವು, ವಾದ ವಿವಾದಗಳನ್ನು ಈ ವರ್ಷ ದಾಖಲಿಸಿದೆ. ಅವೆಲ್ಲಾ ಕಹಿ ಘಟನೆಗಳನ್ನು ಮರೆದು ಹೊಸ ವರ್ಷವನ್ನು ಸ್ವಾಗತಿಸುವ ಸಮಯ ಹತ್ತಿರವಾಗಿದೆ.

2015ನೇ ವರ್ಷದಲ್ಲಿ ಬಿಡುಗಡೆಯಾಗುತ್ತಿರುವ ಮೊಟ್ಟ ಮೊದಲ ಸಿನಿಮಾ ಯಾವುದು? ಈ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ. ಸಾಹಸ ಸಿನಿಮಾಗಳ ಸರದಾರ, ಹಾಸ್ಯ ಹಾಗೂ ಭಾವನಾತ್ಮಕ ಸಿನಿಮಗಳಿಗೂ ಫೇಮಸ್ ದುನಿಯಾ ವಿಜಯ್ ಅವರ 'ಜಾಕ್ಸನ್' ಕನ್ನಡ ಸಿನಿಮಾ 2015ರ ಜನವರಿ 1 ರಂದು ಬಿಡುಗಡೆ ಆಗಲಿದೆ.

2015 first Kannada movie Jackson1

'ಜಾಕ್ಸನ್' ಕನ್ನಡ ಸಿನೆಮಾ ವಿಜಯ್ ಹಾಗೂ ವೃಂದ (ಪಾವನಿ) ಮುಖ್ಯ ತಾರಾಗಣದ ಚಿತ್ರಕ್ಕೆ 35 ದಿವಸಗಳ ಮಾತಿನ ಭಾಗದ ಚಿತ್ರೀಕರಣ ಮಾಡಲಾಗಿದೆ. ಅರ್ಜುನ್ ಜನ್ಯ ಅವರ ಹಾಡುಗಳು ಇತ್ತೀಚಿಗೆ ಬಿಡುಗಡೆ ಆಗಿ ಅಪಾರ ಕೇಳುಗರನ್ನು ಸಂಪಾದಿಸಿಕೊಂಡಿದೆ. ದುನಿಯ ಟಾಕೀಸ್ ಅರ್ಪಿಸುವ, ಕೆ ಪಿ ಎಸ್ ಕಂಬೈನ್ಸ್ ಚಿತ್ರವಿದು.

ಜನಪ್ರಿಯ ನಾಯಕ ನಟ ವಿಜಯ್ ಅವರ ಅಭಿಮಾನಿಯಾದ ಸುಂದರ್ ಗೌಡ್ರು 'ಜಾಕ್ಸನ್' ಚಿತ್ರದ ನಿರ್ಮಾಪಕರು. ತಮಿಳಿನ 'ಇದಕುತಾನ ಆಸೈ ಪಟ್ಟೈ ಬಾಲಕುಮರ' ಚಿತ್ರದ ರೀಮೇಕ್ ಇದು. ಪಕ್ಕಾ ಕಾಮಿಡಿ ತುಂಬಿದ ಮನರಂಜನಾತ್ಮಕ ಸಿನಿಮಾ. ಒಂದು ಸಂದೇಶ ಸಹ ಚಿತ್ರ ಒಳಗೊಂಡಿದೆ. [ಸ್ಯಾಂಡಲ್ ವುಡ್ ಮಹಾಚುನಾವಣೆ 2014 - ನಿಮ್ಮ ಮತ ಯಾರಿಗೆ?]

2015 first Kannada movie Jackson2

ಚಿತ್ರದ ನಿರ್ದೇಶಕ ಈ ಮೊದಲು ಸಂಕಲನಕರ ಆಗಿದ್ದ ಸನತ್ ಕುಮಾರ್. ಇವರು ಸಹ ಯೋಗರಾಜ್ ಭಟ್ ಗರಡಿಯ ಪ್ರತಿಭೆ. ರೀಮೇಕ್ ಚಿತ್ರ ಮಾಡುವಾಗ ಅವರು 12 ನಿಮಿಷ ತುಂಡರಿಸಿ ಕನ್ನಡಕ್ಕೆ ತರುತ್ತಿದ್ದಾರೆ. ಕಿರಣ್ ಅವರ ಸಂಭಾಷಣೆ, ಸೆಲ್ವಮ್ ಅವರ ಛಾಯಾಗ್ರಹಣ ಈ ಚಿತ್ರಕ್ಕೆ ಇದೆ. ಯೋಗರಾಜ್ ಭಟ್, ಚೇತನ್ ಕುಮಾರ್, ಅವರ ಹಾಡುಗಳು ಒದಗಿಸಿದ್ದಾರೆ. (ಫಿಲ್ಮಿಬೀಟ್ ಕನ್ನಡ)

English summary
Which is the first Kananda movie to release on 1st 2015? It is none other than Duniya Vijya's action packed 'Jackson' is all set to release on 1st January, 2015. It's a remake of 'Idukathana Aasai Patteya Balakumara'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada