For Quick Alerts
  ALLOW NOTIFICATIONS  
  For Daily Alerts

  ರಾಜಕೀಯ ಎಂಟ್ರಿ ಬಗ್ಗೆ ಮೌನ ಮುರಿದ ಉಪೇಂದ್ರ

  |

  'ಸೂಪರ್' ಚಿತ್ರದಲ್ಲಿ ಮುಖ್ಯಮಂತ್ರಿಯಾಗಿ ಅವತರಿಸಿದ್ದ ಉಪೇಂದ್ರ ನಿಜ ಅವತಾರದಲ್ಲಿ ರಾಜಕೀಯಕ್ಕೆ ಎಂಟ್ರಿಯಾಗಲು ಇನ್ನೂ ಸಮಯ ಪಕ್ವವಾಗಿಲ್ಲ ಎಂದಿದ್ದಾರೆ. ತನ್ನ ಕಮಿಟ್ಮೆಂಟ್ ಮುಗಿದ ಮೇಲೆ ರಾಜಕೀಯದ ಬಗ್ಗೆ ನೋಡೋಣ ಎಂದು ಅಡ್ಡಗೋಡೆಯ ಮೇಲೆ ದೀಪ ಇಟ್ಟಿದ್ದಾರೆ.

  ಯಾವುದೇ ವ್ಯಕ್ತಿ ರಾಜಕೀಯ ಸೇರುವ ಮುಂಚೆ ಆತನಿಗೆ ನಿರ್ದಿಷ್ಟವಾದ ಪ್ಲಾನ್ ಅಗತ್ಯ. ಜನರಿಗೆ ಒಳ್ಳೇದು ಮಾಡಬೇಕು ಎನ್ನುವುದು ಆತನ ಮುಖ್ಯ ಗುರಿಯಾಗಿರಬೇಕು. ಸುಳ್ಳು ಆಶ್ವಾಸನೆ ನೀಡಿ ಓಟು ಗಿಟ್ಟಿಸುವುದು ಈಗಿನ ರಾಜಕೀಯದ ಸ್ಟೈಲ್. ಟಿವಿ ಕೊಡ್ತೀವಿ, ಲ್ಯಾಪ್ ಟಾಪ್ ಕೊಡ್ತೀವಿ ಎಂದು ಚುನಾವಣೆಯ ಸಮಯದಲ್ಲಿ ಜನರಿಗೆ ಭರವಸೆ ನೀಡಿ ವೋಟ್ ಗಿಟ್ಟಿಸುವುದಷ್ಟೇ ಈಗಿನ ರಾಜಕೀಯ ತಂತ್ರ ಎಂದು ಉಪೇಂದ್ರ ಡೈಲಾಗ್ ಹೊಡೆದಿದ್ದಾರೆ.

  ಎಲ್ಲರಿಗಿಂತ ಮಿಗಿಲಾದದ್ದು ದೇವ್ರು. ಅವನೇ ಇಡೀ ಜಗತ್ತಿಗೆ ದೊಡ್ಡ ಅಡ್ಮಿನಿಸ್ಟ್ರೆಟರ್. ಅವನೇ ಸೂಪರ್ ಪವರ್. ಅವನ ಮುಂದೆ ಯಾವುದೂ ಇಲ್ಲ. ರಾಜಕೀಯದಲ್ಲಿ ಎಲ್ಲರೂ ಭ್ರಷ್ಟರೆಂದು ಹೇಳಲಾಗದು. ಒಳ್ಳೆಯವರೂ ಇದ್ದಾರೆ. ಅಮೆರಿಕಾದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವವರು ತಾನು ಅಧಿಕಾರಕ್ಕೆ ಬಂದರೆ ದೇಶವನ್ನು ಬದಲಾವಣೆಯ ಹಾದಿಯಲ್ಲಿ ಮುನ್ನಡೆಸಲು ತಮ್ಮ ದೂರಾಲೋಚನೆ ಏನೆನ್ನುವುದನ್ನು ಜನರ ಮುಂದಿಡುತ್ತಾರೆ. ಜನ ಅದನ್ನೆಲ್ಲಾ ಗಮನಿಸಿ ವೋಟ್ ನೀಡುತ್ತಾರೆ ಎಂದು ಉಪ್ಪಿ ಟಿವಿ ಮಾಧ್ಯಮಗಳಲ್ಲಿ ಹೇಳಿದ್ದಾರೆ.

  ಪಾಲಿಟಿಕ್ಸ್ ಸೇರುವ ಬಗ್ಗೆ ಈಗಲೇ ಏನನ್ನೂ ಹೇಳಲಾಗದು. ನನ್ನ ಈಗಿನ ವೃತ್ತಿ ಜೀವನದಲ್ಲಿ ಮಾಡಬೇಕಾದಂತ, ಮುಗಿಸ ಬೇಕಾದಂತ ಕೆಲಸಗಳು ಬಹಳಷ್ಟಿವೆ. ನೋಡೋಣ, ಏನೇನು ಆಗಬೇಕೆಂದು ದೇವರ ಇಚ್ಛೆ ಇದೆಯೋ ಹಾಗೆ ಆಗಲಿ ಎಂದು ಪಕ್ಕಾ ಸಿನಿಮಾ ಡೈಲಾಗ್ ಹೊಡಿದಿದ್ದಾರೆ.

  ಉಪ್ಪಿಗೇನೋ ರಾಜಕೀಯಕ್ಕೆ ಎಂಟ್ರಿ ಕೊಡಬೇಕೆಂದು ಬೆಟ್ಟದಷ್ಟು ಆಸೆ ಇದೆ. ಆದರೆ ಅವರ ಧರ್ಮಪತ್ನಿ ಪ್ರಿಯಾಂಕಾ ಅವರಿಗೆ ಉಪ್ಪಿ ರಾಜಕೀಯಕ್ಕೆ ಬರುವುದು ಇಷ್ಟವಿಲ್ಲ. ತಮ್ಮ ಪತಿ ರಾಜಕೀಯಕ್ಕೆ ಎಂಟ್ರಿ ಕೊಡುತ್ತಿರುವುದು ತಮಗೆ ಅಷ್ಟಾಗಿ ಒಪ್ಪಿಗೆ ಇಲ್ಲ ಎಂದಿದ್ದಾರೆ. ಮನೆಯಲ್ಲಿ ಗ್ರೀನ್ ಸಿಗ್ನಲ್ ಸಿಗಲಿಲ್ಲ ಎಂದರೆ ಉಪ್ಪಿ ರಾಜಕೀಯ ಎಂಟ್ರಿ ಕೊಂಚ ಕಷ್ಟಾನೆ. (ದಟ್ಸ್‌ಕನ್ನಡ ಸಿನಿವಾರ್ತೆ)

  English summary
  Kannada actor Real Star Upendra has not made it clear that whether he will enter into politics or not. At the same he is not ruled out also. He will think about entering the politics once he completes his present commitment. However his wife Priyanka Upendra is not showing interest about his hubbies political entry.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X