»   » ಪುನೀತ್ ಪರಮಾತ್ಮ ಅಪ್ಪಿಕೊಂಡ ಐಂದ್ರಿತಾ ರೇ, ರಮ್ಯಾ

ಪುನೀತ್ ಪರಮಾತ್ಮ ಅಪ್ಪಿಕೊಂಡ ಐಂದ್ರಿತಾ ರೇ, ರಮ್ಯಾ

Posted By:
Subscribe to Filmibeat Kannada

ಕಡೆಗೂ ಯೋಗರಾಜ್ ಭಟ್ಟರ 'ಪರಮಾತ್ಮ' ಚಿತ್ರಕ್ಕೆ ಇನ್ನಿಬ್ಬರು ನಾಯಕಿಯರ ಪ್ರವೇಶವಾಗಿದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜತೆ ಚಿಗರೆ ಕಂಗಳ ಬೆಡಗಿ ಐಂದ್ರಿತಾ ರೇ ಹಾಗೂ ರಮ್ಯಾ ಬಾರ್ನಾ ಹೆಜ್ಜೆ ಹಾಕಲಿದ್ದಾರೆ.ಈ ಮೂಲಕ ದೀಪಾ ಸೇರಿದಂತೆ 'ಪರಮಾತ್ಮ' ಚಿತ್ರಕ್ಕೆ ಮೂವರು ನಾಯಕಿಯರು ಸೇರ್ಪಡೆಯಾದಂತಾಗಿದೆ.

'ಪರಮಾತ್ಮ' ಚಿತ್ರಕ್ಕೆ ಭಟ್ಟರು ಕನ್ನಡದ ನಟಿಯರಿಗೆ ಮಣೆ ಹಾಕಿರುವುದು ವಿಶೇಷ.ಇವರಿಬ್ಬರೂ ಭಟ್ಟರ ಚಿತ್ರಗಳಲ್ಲಿ ಅಭಿನಯಿಸಿರುವವರೆ. 'ಮನಸಾರೆ' ಚಿತ್ರದಲ್ಲಿ ಐಂದ್ರಿತಾ ರೇ ಹಾಗೂ ಪಂಚರಂಗಿ ಚಿತ್ರದಲ್ಲಿ ರಮ್ಯಾ ಬಾರ್ನಾ ಸ್ಥಾನ ಗಿಟ್ಟಿಸಿದ್ದರು. ಈಗ ಇಬ್ಬರಿಗೂ ಒಂದೇ ಚಿತ್ರಕ್ಕೆ ಕಾಲ್ ಶೀಟ್ ಸಿಕ್ಕಂತಾಗಿದೆ.

ಯೋಗರಾಜ್ ಭಟ್ಟರ ಚಿತ್ರ ಎಂದರೆ ಹಾಡುಗಳಿಗೆ ವಿಶೇಷ ಮಹತ್ವವಿರುತ್ತದೆ. 'ಪರಮಾತ್ಮ' ಚಿತ್ರದಲ್ಲೂ ಭಟ್ಟರ ಕೈಚಳಕ ಮುಂದುವರಿಯಲಿದೆಯಂತೆ. ಸದ್ಯಕ್ಕೆ ಭಟ್ಟರು ಈ ಹಿಂದಿನ ತಮ್ಮ ಎಲ್ಲಾ ಚಿತ್ರಗಳನ್ನು ಮೀರಿಸುವಂತಹ ಹಾಡುಗಳನ್ನು ಹೆಣೆಯುತ್ತಿದ್ದಾರಂತೆ. ಮಾರ್ಚ್ 3ರಿಂದ 'ಪರಮಾತ್ಮ' ಚಿತ್ರ ಸೆಟ್ಟೇರಲಿದೆ.

English summary
At finally Yograj Bhat has finalised two more actresses for his up coming film Paramathma. Actress Aindrita Ray and Ramya Barna are finalised to act with Power Star Puneet Rajkumar in Paramathma. Including Deepa Sannidhi the movie has three heroines. The movie will start rolling form 3rd March.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada