»   » 'ಬಳೆಗಾರ' ನಾಯಕಿ ನವ್ಯಾ ನಾಯರ್ ದಾಂಪತ್ಯಕ್ಕೆ

'ಬಳೆಗಾರ' ನಾಯಕಿ ನವ್ಯಾ ನಾಯರ್ ದಾಂಪತ್ಯಕ್ಕೆ

Posted By:
Subscribe to Filmibeat Kannada

ಮಲಯಾಳಂ ನಟಿ ನವ್ಯಾ ನಾಯರ್ ಗುರುವಾರ(ಜ.21)ದಾಂಪತ್ಯ ಜೀವನಕ್ಕೆ ಅಡಿಯಿಟ್ಟರು. ಹಿಂದು ಸಂಪ್ರದಾಯದ ಪ್ರಕಾರ ತನ್ನ ತವರು ಜಿಲ್ಲೆ ಅಲೆಪ್ಪಿಯ ಚೆಪ್ಪಾಡ್ ನಲ್ಲಿ ನವ್ಯಾ ನಾಯರ್ ಮದುವೆಗೆ ಮಂಗಳವಾದ್ಯಗಳು ಮೊಳಗಿದವು. ಮುಂಬೈಯಲ್ಲಿ ನೆಲೆಸಿರುವ ಸಂತೋಷ್ ಮೆನನ್ ಎಂಬುವವರೊಂದಿಗೆ ನವ್ಯಾ ವಿವಾಹ ನೆರವೇರಿತು.

ಸಂತೋಷ್ ಮೂಲತಃ ಕೇರಳದ ಕೊಟ್ಟಾಯಂ ಜಿಲ್ಲೆಯರು. ಪ್ರಸ್ತುತ ಅವರು ಬಹುರಾಷ್ಟ್ರೀಯ ಕಂಪನಿಯೊಂದರೆ ಉದ್ಯೋಗಿ. ನವ್ಯಾ ಮದುವೆ ಸಮಾರಂಭಕ್ಕೆ ದಕ್ಷಿಣ ಭಾರತದ ಹಲವಾರು ಸಿನಿಮಾ ಕಲಾವಿದರು ಆಗಮಿಸಿದ್ದರು. ಮಧ್ಯಾಹ್ನ 2 ಗಂಟೆಯ ಶುಭ ಮುಹೂರ್ತದಲ್ಲಿ ನವ್ಯಾರನ್ನು ಸಂತೋಷ್ ವಿವಾಹವಾದರು.

ಗುರುವಾರ ಸಂಜೆ ನಡೆಯುವ ಆರತಕ್ಷತೆ ಕಾರ್ಯಕ್ರಮಕ್ಕೆ 5000 ಮಂದಿ ಅತಿಥಿ ಅಭ್ಯಾಗತರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಮಲಯಾಳಂನ ಖ್ಯಾತ ನಟ ಮೋಹನ್ ಲಾಲ್ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮಕ್ಕೆ ಭಾಗವಹಿಸಲಿದ್ದಾರೆ.

'ಗಜ' ಚಿತ್ರದ ಮೂಲಕ ಕನ್ನಡಕ್ಕೆ ಪಾದಾರ್ಪಣೆ ಮಾಡಿದ ನವ್ಯಾ ನಾಯರ್ ನಂತರ ವಿಷ್ಣುವರ್ಧನ್ ಜತೆ 'ನಂ ಯಜಮಾನ್ರು', ಶಿವರಾಜ್ ಕುಮಾರ್ ಜತೆ 'ಭಾಗ್ಯದ ಬಳೆಗಾರ', ಚಾಲೆಂಜಿಂಗ್ ಸ್ಟಾರ್ ದರ್ಶನ್ ಜತೆ 'ಬಾಸ್' ಚಿತ್ರದಲ್ಲೂ ಅಭಿನಯಿಸುತ್ತಿದ್ದಾರೆ.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X