For Quick Alerts
  ALLOW NOTIFICATIONS  
  For Daily Alerts

  ಗೆಳೆಯನ ಜೊತೆ ಮದುವೆ; ಸುದ್ದಿ ತಳ್ಳಿಹಾಕಿದ ರಮ್ಯಾ

  By Rajendra
  |

  ಕನ್ನಡ ಚಿತ್ರರಂಗದಲ್ಲೂ ಗಾಸಿಪ್‌ಗಳಿಗೆ ಬರವಿಲ್ಲವೇನೋ ಅನ್ನಿಸುತ್ತಿದೆ.ಈಗಾಗಲೆ ದಂಡಂ ದಶಗುಣಂ ಚಿತ್ರದವಿವಾದಲ್ಲಿ ಸಿಲುಕಿರುವ ನಟಿ ರಮ್ಯಾಗೆ ಮತ್ತೊಂದು ಗಾಳಿಸುದ್ದಿ ಕಿವಿಗೆ ಅಪ್ಪಳಿಸಿದೆ. ಅದೇನಪ್ಪಾ ಅಂದರೆ, ಗೆಳೆಯನೊಬ್ಬನನ್ನು ರಮ್ಯಾ ವರಿಸಲಿದ್ದಾರಂತೆ ಎಂಬುದು ಆ ಸುದ್ದಿ.

  ಈ ಸುದ್ದಿ ಹರಡಿದ್ದೇ ತಡ ರಮ್ಯಾ ತಕ್ಷಣ ಪ್ರತಿಕ್ರಿಯಿಸಿದ್ದು, ಮದುವೆಯಾಗುತ್ತಿರುವ ಕಾರಣವೇ ನಾನು ಸ್ವಯಂ ನಿವೃತ್ತಿ ಘೋಷಿಸಿದ್ದೇನೆ ಎಂದು ಕೆಲವು ಮಾಧ್ಯಮಗಳಲ್ಲಿ ಬರೆದಿದ್ದಾರೆ. ಹಾಗೇಕೆ ಇವರು ಅಂದುಕೊಳ್ಳಬೇಕು. ನನ್ನ ಗೆಳೆಯನಿಗೆ ಈಗಾಗಲೆ ಮದುವೆಯಾಗಿದ್ದು ಇಬ್ಬರು ಮಕ್ಕಳು ಇದ್ದಾರೆ ಎಂದು ರಮ್ಯಾ ತಿಳಿಸಿದ್ದಾರೆ.

  ಈ ಹಿಂದೊಮ್ಮೆ ರಮ್ಯಾ ಮದುವೆ ಸುದ್ದಿ ಟ್ವಿಟ್ಟರ್‌ನಲ್ಲಿ ಹರಡಿತ್ತು. ಆದರೆ ಅದು ನಿಜವಾದ ಮದುವೆಯಲ್ಲ ಸಿನಿಮಾ ಮದುವೆ ಎಂಬುದನ್ನು ಬಳಿಕ ಸ್ವತಃ ರಮ್ಯಾ ಅವರೇ ಸ್ಪಷ್ಟಪಡಿಸಿದ್ದರು. ಏತನ್ಮಧ್ಯೆ ದಂಡಂ ದಶಗುಣಂ ಚಿತ್ರದ ವಿವಾದ ಮಾರ್ಚ್ 22ರಂದು ಬಗೆಹರಿಯಲಿದೆ ಎಂಬ ವಿಶ್ವಾಸವನ್ನು ಫಿಲಂ ಚೇಂಬರ್ ಅಧ್ಯಕ್ಷ ಬಸಂತ್ ಕುಮಾರ್ ಪಾಟೀಲ್ ಹುಬ್ಬಳ್ಳಿಯಲ್ಲಿ ಸ್ಪಷ್ಟಪಡಿಸಿದ್ದಾರೆ.

  English summary
  Actress Ramya denies marriage rumours circulated in a section of media. She asks like, how can they write that I am taking voluntary retirement mainly because I am getting married to a friend. He is already married and has two kids' said Ramya in a press conference.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X