»   »  ಬೆಟ್ಟದಪುರದ ದಿಟ್ಟ ಮಕ್ಕಳು ಪ್ರಬಂಧ ಸ್ಪರ್ಧೆ

ಬೆಟ್ಟದಪುರದ ದಿಟ್ಟ ಮಕ್ಕಳು ಪ್ರಬಂಧ ಸ್ಪರ್ಧೆ

Subscribe to Filmibeat Kannada
Bettadapurada Ditta Makkalu
ಅಮೆರಿಕನ್ನಡಿಗ ಹರ್ಷರಾಮ್ ಅವರು ಸೃಷ್ಟಿ ಆರ್ಟ್ಸ್ ಬ್ಯಾನರ್ ಅಡಿ ನಿರ್ಮಿಸಿ, ಕೋಡ್ಲು ರಾಮಕೃಷ್ಣ ನಿರ್ದೇಶಿಸಿರುವ ಮಕ್ಕಳ ಚಲನಚಿತ್ರ 'ಬೆಟ್ಟದಪುರದ ದಿಟ್ಟ ಮಕ್ಕಳು' ಅಮೆರಿಕಾದಲ್ಲಿ ಅಕ್ಟೋಬರ್ 23ರಿಂದ ಡಿಸೆಂಬರ್ 6ರವರೆಗೆ ವಿವಿಧ ಪ್ರದೇಶಗಳಲ್ಲಿ ಪ್ರದರ್ಶಿಸಲಾಗುತ್ತದೆ. ನಾ.ಡಿಸೋಜಾ ಅವರ ಕಾದಂಬರಿ ಆಧಾರಿತ ಚಿತ್ರ ಇದಾಗಿದೆ.

ಅಮೆರಿಕಾದ ಮಕ್ಕಳಿಗಾಗಿ ಚಿತ್ರತಂಡ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಿದೆ. ವಿಷಯ ''ಗಣಿ ಉದ್ಯಮ ಮತ್ತು ಪರಿಸರ''. ಇಪ್ಪತ್ತು ವರ್ಷದೊಳಗಿನವರು ಈ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಪ್ರಬಂಧವನ್ನು ಸ್ಫುಟವಾಗಿ ಬರೆದು ಕಳುಹಿಸಬಹುದು.

ಬೆಟ್ಟದಪುರದ ದಿಟ್ಟ ಮಕ್ಕಳು ಚಿತ್ರ ವೀಕ್ಷಿಸಿದ ಟಿಕೆಟ್, ಚಿತ್ರಮಂದಿರದ ಹೆಸರು, ಸ್ಥಳ, ದಿನಾಂಕ ಮತ್ತು ಸಮಯವನ್ನು ಪ್ರಬಂಧದ ಜತೆಗೆ ಲಗತ್ತಿಸಿ ಕಳುಹಿಸಬೇಕು. ಎಂ ಎಸ್ ವರ್ಡ್ ಫಾರ್ಮ್ಯಾಟ್ ನಲ್ಲಿ ಪ್ರಬಂಧವನ್ನು ಬರೆದು ಅಥವಾ ಸ್ಕಾನ್ ಮಾಡಿದ ಕೈಬರಹದ ಕಾಪಿಯನ್ನು bettadapura.children@gmail.com ಗೆ ಕಳುಹಿಸಲು ಕೋರಲಾಗಿದೆ.

ಸ್ಪಷ್ಟವಾಗಿ ಹೆಸರು, ವಯಸ್ಸು, ವಿಳಾಸ ಮತ್ತು ಶಾಲೆಯ ಹೆಸರನ್ನು ಪ್ರಬಂಧದ ಜತೆಗೆ ಕಳುಹಿಸಬೇಕು. ಪ್ರಬಂಧವನ್ನು ಕಳುಹಿಸಲು ಕೊನೆಯ ದಿನಾಂಕ 25 ಏಪ್ರಿಲ್, 2010. ಪ್ರಬಂಧ ಸ್ಪರ್ಧೆಯಲ್ಲಿ ಗೆದ್ದವರಿಗೆ ಬಹುಮಾನಗಳನ್ನು ವಿತರಿಸಲಾಗುತ್ತದೆ. ಮೊದಲ ಬಹುಮಾನವಾಗಿ ಐ ಪಾಡ್ ನೀಡಲಾಗುತ್ತದೆ. ದ್ವಿತೀಯ, ತೃತೀಯ ಮತ್ತು ಸಮಾಧಾನಕರ ಬಹುಮಾನಗಳನ್ನು ನೀಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಬೆಟ್ಟದಪುರದ ದಿಟ್ಟ ಮಕ್ಕಳು ಪ್ರದರ್ಶನದ ವೇಳಾಪಟ್ಟಿ:
ಅಕ್ಟೋಬರ್ 23-25: ಸ್ಯಾನ್ ಜೋಶ್, ಸಿಎ
ಅಕ್ಟೋಬರ್ 30-ನವೆಂಬರ್ 1: ಲಾಸ್ ಏಂಜಲ್ಸ್, ಸಿಎ
ನವೆಂಬರ್ 6-8: ಡೆಟ್ರಾಯಿಟ್, ಎಂಐ
ನವೆಂಬರ್ 13-15: ಎಡಿಸನ್, ಎನ್ ಜೆ
ನವೆಂಬರ್ 20-22: ಚಿಕಾಗೋ, ಐಎಲ್
ನವೆಂಬರ್27-29: ವಾಷಿಂಗ್ಟನ್, ಡಿಸಿ
ಡಿಸೆಂಬರ್ 4-6: ಅಟ್ಲಾಂಟ, ಜಿಎ

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada