»   » ಗಾಡ್ ಫಾದರ್ ಜೊತೆ ಕುಣಿಯಲು ಬಂದ ಭೂಮಿಕಾ

ಗಾಡ್ ಫಾದರ್ ಜೊತೆ ಕುಣಿಯಲು ಬಂದ ಭೂಮಿಕಾ

Posted By:
Subscribe to Filmibeat Kannada

ಸುದೀಪ್ ಮುಖ್ಯಭೂಮಿಕೆಯಲ್ಲಿರುವ 'ವರದನಾಯಕ' ಚಿತ್ರಕ್ಕೆ ಕೈ ಎತ್ತಿದ್ದ ಬಾಲಿವುಡ್ ನಟಿ ಭೂಮಿಕಾ ಚಾವ್ಲಾ ಈಗ ಮತ್ತೆ ಕನ್ನಡಕ್ಕೆ ಆಗಮಿಸಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ ಜೊತೆ 'ಗಾಡ್ ಫಾದರ್' ಚಿತ್ರದಲ್ಲಿ ಹೆಜ್ಜೆ ಮೇಲೆ ಹೆಜ್ಜೆ ಹಾಕಲಿದ್ದಾರೆ. ಕೆ.ಮಂಜು ನಿರ್ಮಿಸುತ್ತಿರುವ ಅದ್ದೂರಿ ಚಿತ್ರ ಇದಾಗಿದೆ.

ಛಾಯಾಗ್ರಾಹಕರಾಗಿದ್ದ ಶ್ರೀರಾಮ್ ಮೊಟ್ಟ ಮೊದಲ ಬಾರಿಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇತ್ತೀಚೆಗೆ ಗೋವಾದಲ್ಲಿ ಎರಡು ಹಾಡುಗಳ ಚಿತ್ರೀಕರಣ ನಡೆಯಿತು. ಒಂದು ಹಾಡು ಚಿತ್ರಕ್ಕೆ ಪೀಠಿಕೆ ಹಾಕಿದರೆ, ಇನ್ನೊಂದು ಹಾಡು ಸೌಂದರ್ಯ ಹಾಗೂ ಉಪ್ಪಿ ನಡುವಿನ ಡ್ಯುಯೆಟ್ ಹಾಡು.

ಪೀಠಿಕೆ ಹಾಡಿಗೆ ಉಪೇಂದ್ರ ಜೊತೆ ಭೂಮಿಕಾ ಹೆಜ್ಜೆ ಹಾಕಿದ್ದಾರೆ. ಇದೊಂದು ತರಹಾ ಐಟಂ ಸಾಂಗು ಎನ್ನಲಾಗಿದೆ. ತಮಿಳಿನ ಯಶಸ್ವಿ 'ವರಲಾರು' (ಇತಿಹಾಸ) ಚಿತ್ರದ ರೀಮೇಕ್ ಇದಾಗಿದೆ. ಮೂಲ ಚಿತ್ರಕ್ಕೆ ಎ ಆರ್ ರೆಹಮಾನ್ ಸಂಗೀತ ಸಂಯೋಜಿಸಿದ್ದು ಅದೇ ಟ್ಯೂನ್‌ಗಳನ್ನೂ ಯಥಾವತ್ತಾಗಿ ಕನ್ನಡಕ್ಕೆ ಭಟ್ಟಿ ಇಳಿಸಲಾಗುತ್ತಿದೆ.

ಈ ಚಿತ್ರದಲ್ಲಿ ಉಪೇಂದ್ರ ತ್ರಿಪಾತ್ರಾಭಿನಯ ಪೋಷಿಸಿದ್ದಾರೆ. ಚಿತ್ರದಲ್ಲಿ ಮತ್ತೊಬ್ಬ ನಾಯಕಿ ಕ್ಯಾಥರಿನ್ ಅವರದು ಗಮನಾರ್ಹ ಪಾತ್ರ. ಉಪೇಂದ್ರ, ಕವಿರಾಜ್, ಯೋಗರಾಜ್ ಭಟ್, ಜಯಂತ್ ಕಾಯ್ಕಿಣಿ, ಡಾ. ನಾಗೇಂದ್ರ ಪ್ರಸಾದ್ ಹಾಗೂ ಕಲ್ಯಾಣ್ ತಲಾ ಒಂದೊಂದು ಗೀತೆ ಬರೆಯಲಿದ್ದಾರೆ. ಉಪೇಂದ್ರ ಅವರೇ ಸಂಭಾಷಣೆ ಬರೆದಿದ್ದಾರೆ. (ಏಜೆನ್ಸೀಸ್)

English summary
Bollywood actress Bhoomika Chawla is making a special appearance in Upendra lead Kannada movie God Father. The movie is being directing by P C Sriram starring Upendra and Soundarya Jayamala in the lead roles. Music by A R Rahman.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X