»   »  ದೀನನಿಗೆ ಸೆನ್ಸಾರ್ ನಿಂದ ಎ ಪ್ರಮಾಣ ಪತ್ರ

ದೀನನಿಗೆ ಸೆನ್ಸಾರ್ ನಿಂದ ಎ ಪ್ರಮಾಣ ಪತ್ರ

Subscribe to Filmibeat Kannada
Deena clears censor
ಲಕ್ಷ್ಮಿಶ್ರೀ ಕಂಬೈನ್ಸ್ ಲಾಂಛನದಲ್ಲಿ ತಯಾರಾಗುತ್ತಿರುವ ಸಾಹಸಿ ಯುವಕನ ಸಾಹಸಗಾಥೆಯಾದ 'ದೀನ' ಚಿತ್ರ ಅಂದುಕೊಂಡ ಹಾಗೆ ಮುಗಿದಿದ್ದರೆ ಈಗಾಗಲೇ ತೆರೆ ಕಾಣಬೇಕಿತ್ತು. ಉತ್ತಮ ಕೆಲಸಕ್ಕೆ ನೂರಾರು ಅಡ್ಡಿ ಆತಂಕಗಳು ಎನ್ನುವ ಹಾಗೆ ಈ ಚಿತ್ರ ತಂಡಕ್ಕೂ ಹಲವಾರು ವಿಘ್ನಗಳು ಬಂದೊದಗಿದರೂ ಅದೆಲ್ಲವನ್ನೂ ನಿವಾರಿಸಿಕೊಂಡು ದೀನ ತಂಡ ಈಗ ಚಿತ್ರವನ್ನು ಸಂಪೂರ್ಣಗೊಳಿಸಿ ಕೊನೆಯ ಹಂತಕ್ಕೆ ಬಂದಿದೆ.

ಕಳೆದ ವಾರ ಸೆನ್ಸಾರ್ ಮಂಡಳಿ ಮುಂದೆ ಪ್ರದರ್ಶನಗೊಂಡು 'ಎ' ಪ್ರಮಾಣ ಪತ್ರವನ್ನು ಪಡೆದುಕೊಂಡಿದೆ. ಚಿತ್ರದಲ್ಲಿ ಸ್ವಲ್ಪ ಹಿಂಸೆ, ಹೊಡೆದಾಟ ಸನ್ನಿವೇಶಗಳು ಇರುವುದರಿಂದ ಎ ದೊರಕಿದೆ ಎಂದು ನಿರ್ದೇಶಕರಾದ ಸಹನಾ ಮೂರ್ತಿ ಅವರು ತಿಳಿಸಿದ್ದಾರೆ. ಆರ್.ಸುನೀಲ್, ಎಸ್.ಟಿ.ಜಗದೀಶ್ ಹಾಗೂ ಮೈಕೋ ನಾಗರಾಜ್ ಸೇರಿ ನಿರ್ಮಿಸಿರುವ ಈ ಚಿತ್ರಕ್ಕೆ ಸುಂದರನಾಥ ಸುವರ್ಣರ ಛಾಯಾಗ್ರಹಣ, ಅರ್ಜುನ್‌ರ ಸಂಗೀತ ಸಂಯೋಜನೆ, ರವಿವರ್ಮ ಹಾಗೂ ಡಿಫರೆಂಟ್ ಡ್ಯಾನಿ ಅವರ ಸಾಹಸ ಸಂಯೋಜನೆ ಇದೆ.

ಅತ್ಯುತ್ತಮ ಅಭಿನಯ ನೀಡಿರುವ ದೀಪಕ್ ಈ ಚಿತ್ರದಲ್ಲಿ ಗಮನ ಸೆಳೆವ ನಾಯಕನ ಪಾತ್ರ ಮಾಡಿದ್ದಾರೆ. ಈ ಪಾತ್ರ ನನಗೆ ಒಂದು ಚಾಲೆಂಜಿಂಗ್ ಆಗಿದೆ ಎನ್ನುತ್ತಾರವರು. ಗ್ಲಾಮರ್ ಬೆಡಗಿ ಸ್ಮಿತಾ, ಮೈಕೋ ನಾಗರಾಜ್, ಸಾಧುಕೋಕಿಲ, ರಮೇಶ್‌ಭಟ್, ಪ್ರಕಾಶ್ ಹೆಗ್ಗೋಡು, ಮುನಿ, ಕರಿವಸವಯ್ಯ, ಪದ್ಮಾ ವಾಸಂತಿ, ಚಿತ್ರಾ ಶೆಣೈ, ಯತಿರಾಜ್ ಪ್ರಮುಖ ತಾರಾಗಣದಲ್ಲಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಇದನ್ನೂ ಓದಿ
ನವರಸನಾಯಕನ ಅದೃಷ್ಟ ಮೀಮಾಂಸೆ
ರಾಕ್ ಲೈನ್ ಮಗ ಮತ್ತು ಮುನಿ ಮಗಳ ಮದುವೆ
ಶಿವಣ್ಣ, ಪ್ರೇಮ್ ಕಾಂಬಿನೇಷನಲ್ಲಿ 'ಜೋಗಿ ಭಾಗ 2'
ಸ್ಲಂಡಾಗ್ ಮಿಲಿಯನೇರ್ ಬಾಲನಟಿ ಮಾರಾಟಕ್ಕೆ?
ವಾಯ್ಸ್ ಆಫ್ ಬೆಂಗಳೂರಿಗೆ ಅಮೀರ್ ಖಾನ್?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada