»   »  ಕನ್ನಡಕ್ಕೆ ತಮಿಳಿನ ದಿಂಡಿಗಲ್ ಸಾರಥಿ ರೀಮೇಕ್

ಕನ್ನಡಕ್ಕೆ ತಮಿಳಿನ ದಿಂಡಿಗಲ್ ಸಾರಥಿ ರೀಮೇಕ್

Subscribe to Filmibeat Kannada
Ravishankar
ಸಿಲ್ಲಿ ಲಲ್ಲಿ ಖ್ಯಾತಿಯ ರವಿಶಂಕರ್ ಮತ್ತೆ ಬ್ಯುಸಿ. ಅವರ ಕೈಲೀಗ ಎರಡು ಸಿನಿಮಾಗಳಿವೆ. ಟಾಯ್ಲೆಟ್ ಕ್ಲೀನರ್ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವ ಅವಕಾಶವನ್ನೂ ಒಪ್ಪಿಕೊಂಡಿದ್ದ ಅವರ ಮುದುಡಿದ ಮುಖವೀಗ ಅರಳಿದೆ.

ಮೊದಲ ಸಿನಿಮಾ ಮಿಸ್ಟರ್ ಪೇಂಟರ್. ದಿನೇಶ್ ಬಾಬು ಈ ಚಿತ್ರದ ನಿರ್ದೇಶಕ. ಸಕಲೇಶಪುರದಲ್ಲಿ ಹತ್ತೇ ದಿನ ಚಿತ್ರೀಕರಣ ನಡೆಸಿ ಸಿನಿಮಾ ಮುಗಿಸಿಕೊಡುವುದು ದಿನೇಶ್ ಬಾಬು ಸಂಕಲ್ಪ. ಎಂಟು ದಿನ ರವಿಶಂಕರ್ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಾರೆ. ರಂಗಾಯಣ ರಘು, ತಾರಾ, ಶರಣ್, ಜೈಜಗದೀಶ್ ತಾರಾಗಣವಿದೆ. ಯೋಗೀಶ್ ಕೂಡ ಮಧ್ಯಂತರದ ನಂತರದ ಭಾಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

'ನಂಜನಗೂಡು ನಂಜುಂಡ', ರವಿಶಂಕರ್ ಸಹಿ ಹಾಕಿರುವ ಇನ್ನೊಂದು ಚಿತ್ರ. ಇದು ತಮಿಳಿನ ದಿಂಡಿಗಲ್ ಸಾರಥಿ ಸಿನಿಮಾದ ರೀಮೇಕ್. ಮೇ 10 ಅಥವಾ 15ರಿಂದ ಈ ಚಿತ್ರ ಸೆಟ್ಟೇರುವ ನಿರೀಕ್ಷೆ ಇದೆ. ಪ್ರಚಂಡ ರಾವಣ ನಿರ್ದೇಶಿಸಿದ್ದ ಶ್ರೀನಿವಾಸ ಪ್ರಸಾದ್ ಈ ಸಿನಿಮಾ ನಿರ್ದೇಶಕ. ನಂಜನಗೂಡಿನ ದೇವಸ್ಥಾನದ ಸುತ್ತಮುತ್ತಲೇ ಚಿತ್ರದ ಬಹುಪಾಲು ಚಿತ್ರೀಕರಣ ನಡೆಯಲಿದ್ದು, ನಾಯಕಿಗಾಗಿ ತಲಾಷು ನಡೆದಿದೆ. ಮೂಲ ಚಿತ್ರದ ನಾಯಕಿ ಕಾರ್ತಿಕಾ ಅವರೇ ಈ ಸಿನಿಮಾದಲ್ಲೂ ನಟಿಸಿದರೆ ಚೆನ್ನ ಎಂಬ ಕಾರಣಕ್ಕೆ ಅವರನ್ನು ಸಂಪರ್ಕಿಸುವ ಯತ್ನ ನಡೆದಿದೆ. ಆದರೆ ಇನ್ನೂ ಅವರು ಒಪ್ಪಿಲ್ಲ.

ಅದು ಸರಿ, ರವಿಶಂಕರ್‌ಗೆ ಒಂದಾದ ಮೇಲೊಂದರಂತೆ ಸಿನಿಮಾ ಸಿಗಲು ಕಾರಣವೇನು? ಅವರ ಮೊದಲ ಚಿತ್ರ ಪಯಣ 45 ಲಕ್ಷ ರೂ. ಲಾಭ ಮಾಡಿದೆಯಂತೆ. ಚಿತ್ರಮಂದಿರದಲ್ಲಿ ಜನ ನೋಡದೇ ಇದ್ದರೂ ಇಷ್ಟು ಲಾಭ ಮಾಡಿದ್ದು ಹೇಗೆ ಎಂಬುದು ಮಾತ್ರ ಗುಟ್ಟು. ನಿರ್ದೇಶಕ ಕಿರಣ್ ಗೋವಿ ಹಾಗೂ ರವಿಶಂಕರ್ ಹೀಗೆ ಹೇಳಿಕೊಂಡು ಗಾಂಧಿನಗರದಲ್ಲಿ ಓಡಾಡಿಕೊಂಡಿರುವುದಂತೂ ಸುಳ್ಳಲ್ಲ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಹಿರಿತೆರೆಯಲ್ಲಿ ರವಿಶಂಕರ್ ಪಯಣ ಹೀಗಿದೆ
ರಜನಿ ಚಿತ್ರಕ್ಕೆ ಮೈಸೂರಿನಲ್ಲಿ ಅದ್ದೂರಿ ಕ್ಲೈಮ್ಯಾಕ್ಸ್
ಜಸ್ಟ್ ಮಾತ್ ಮಾತಲ್ಲಿ ಒಂದಾದ ಸುದೀಪ್, ರಮ್ಯಾ!
ರಾಕ್ ಲೈನ್ ಮಗ ಮತ್ತು ಮುನಿ ಮಗಳ ಮದುವೆ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada