»   »  ಟಪೋರಿ ಅಡ್ಡಾದಲ್ಲಿ ದುಬೈ ಬಾಬು ಮಿರ್ಚಿ

ಟಪೋರಿ ಅಡ್ಡಾದಲ್ಲಿ ದುಬೈ ಬಾಬು ಮಿರ್ಚಿ

By: * ಮಹೇಶ್ ಮಲ್ನಾಡ್
Subscribe to Filmibeat Kannada
ಬುದ್ಧಿವಂತ ಉಪ್ಪಿಯ ಚಿನಕುರಳಿ ಮಾತಿಗೆ ಇಂದು ಮುಂಜಾನೆ ಬೆಂಗ್ಳೂರು ಮರಳಾಗಿದ್ದಂತೂ ನಿಜ. ಪಟಪಟನೆ ಮಾತಾಡುವ ಪೋರಿ ಟಪೋರಿ ಆರ್ ಜೆ ರಚನಾ ಕೂಡ ಉಪ್ಪಿಯ ಸ್ಟೈಲ್ ಗೆ ,ಸ್ಮೈಲ್ ಗೆ ಮಾರು ಹೋಗಿದ್ದು ಸುಳ್ಳಲ್ಲ. ಹೌದು. ರೇಡಿಯೋ ಮಿರ್ಚಿ 98.3 ಎಫ್ ಎಂನ 'ಹೈ ಬೆಂಗಳೂರು" ಕಾರ್ಯಕ್ರಮವನ್ನು ಉಪ್ಪಿ ತಮ್ಮತನದಿಂದ ಚಿಂದಿ ಉಡಾಯಿಸಿದರು. ದುಬೈ ಬಾಬು ಚಿತ್ರದ ಪ್ರಚಾರಕ್ಕೆ ಬಂದಿದ್ದ ಉಪ್ಪಿ. ಸಾದಾ ನೀಲಿ ಬಣ್ಣದ ಉಡುಪಿನಲ್ಲಿ ಕಂಗೊಳಿಸುತ್ತಿದ್ದರು.

"ದುಬೈಬಾಬು ಚಿತ್ರದಲ್ಲಿ ಸುಮಾರು 17 ಕ್ಕೂ ಹೆಚ್ಚು ವೇಷ ಭೂಷಣಗಳಲ್ಲಿ ಕಾಣಿಸಿಕೊಂಡಿದ್ದೀನಿ. ಅವೆಲ್ಲಾ ಹೀಗೆ ಬಂದು ಹಾಗೆ ಹೋಯ್ತು ಅಂತಾ ಜನ ಮರೆಯೋ ರೀತಿ ಇಲ್ಲ. ಒಂದೊಂದು ನೆನಪಲ್ಲಿ ಉಳಿಯೋ ರೀತಿ ಇದೆ. ನಿಖಿತಾ ಕೂಡ ಸಕತ್ತಾಗಿ ಆಕ್ಟೀಂಗ್ ಮಾಡಿದ್ದಾರೆ. ರೇಡಿಯೋ ಮಿರ್ಚಿ ನಂಗೆ ಇಷ್ಟ ಆಗೋದು ಅದರ ಬಿಂದಾಸ್ ಆಟ್ಟಿಟ್ಯೂಡ್ ನಿಂದ. ಹಾಸ್ಯ ಮನರಂಜನೆ ಎಲ್ಲದರ ಸರಿ ಮಿಶ್ರಣ ನಿಮ್ಮಲ್ಲಿ ಇದೆ. ದುಬೈ ಬಾಬು ಚಿತ್ರದ ಥರಾ ಹಹಾಹಹ್ಹಹಾ...."

"ಬೆಳಗ್ಗೆ ಬೆಳಗ್ಗೆ ಅಭಿಮಾನಿಗಳ ಜೊತೆ ಹರಟೆ ಹೊಡೆಯೋ ಲಕ್ ಯಾರಿಗುಂಟು ಯಾರಿಗಿಲ್ಲ. ನಾನು ಕೇಳೋದು ಇಷ್ಟೆ. ದುಬೈ ಬಾಬು ಚಿತ್ರ ನೋಡಿ. ನಿಮ್ಮ ಮನರಂಜನೆಗೆ ಖಂಡಿತಾ ಮೋಸ ಆಗೋಲ್ಲ" ಎಂದು ಎಂದಿನಂತೆ ಕಣ್ಣಾಲಿಗಳನ್ನು ಗಿರಗಿರ ತಿರುಗಿಸುತ್ತಾ ನಗುತ್ತಲಿದ್ದ ಉಪ್ಪಿ, ಮೊದಲೇ ಹಾಟ್ ಆದ ರೇಡಿಯೋ ಸ್ಟೇಷನ್ ಅನ್ನು ಇನ್ನಷ್ಟು ಹಾಟ್ ಮಾಡಿದ್ದಂತೂ ನಿಜ.

ದುಬೈ ಬಾಬು ಚಿತ್ರದ ಪ್ರಚಾರಕ್ಕಾಗಿ ಹೈ ಬೆಂಗಳೂರು ಕಾರ್ಯಕ್ರಮದಲ್ಲಿ ಉಪ್ಪಿ ಜತೆ ಮಾತಾಡಿದ ಅಭಿಮಾನಿಗಳಲ್ಲಿ ಅದೃಷ್ಟವಂತರಾದವರಿಗೆ ಉಪ್ಪಿ ಹಾಗೂ ದುಬೈ ಬಾಬು ತಂಡದೊಡನೆ ಭೋಜನ ಮಾಡುವ ಅವಕಾಶವನ್ನು ರೇಡಿಯೋ ಮಿರ್ಚಿ ಕಲ್ಪಿಸಿತ್ತು. ಶೈಲೇಂದ್ರ ಬಾಬು , ನಾಗಣ್ಣ ಹಾಗೂ ಉಪ್ಪಿ ಜೋಡಿಯಲ್ಲಿ ಈಗಾಗಲೇ ಕುಟುಂಬ, ಗೌರಮ್ಮ ಚಿತ್ರಗಳು ಬಾಕ್ಸಾಫೀಸ್ ನಲ್ಲಿ ಯಶಸ್ವಿ ಚಿತ್ರಗಳೆನಿಸಿದ ಕೀರ್ತಿ ಗಳಿಸಿವೆ. ಈಗ ದುಬೈ ಬಾಬುವಿನ ಸರದಿ.

Please Wait while comments are loading...