»   »  ಚುನಾವಣೆಗೆ ಸ್ಪರ್ಧಿಸುತ್ತಿಲ್ಲ: ಲೀಲಾವತಿ ಸ್ಪಷ್ಟನೆ

ಚುನಾವಣೆಗೆ ಸ್ಪರ್ಧಿಸುತ್ತಿಲ್ಲ: ಲೀಲಾವತಿ ಸ್ಪಷ್ಟನೆ

Subscribe to Filmibeat Kannada
I'm not contesting any election: Actress Leelavathi
ನಾನು ಲೋಕಸಭೆ ಚುನಾವಣೆ ಸ್ಪರ್ಧಿಸುವುದಾಗಿ ಬಂದಿರುವ ಸುದ್ದಿ ಸುಳ್ಳು ಎಂದು ಹಿರಿಯ ನಟಿ ಡಾ.ಲೀಲಾವತಿ ಸ್ಪಷ್ಟಪಡಿಸಿದ್ದಾರೆ. ಚುನಾವಣೆಗೆ ಸ್ಪರ್ಧಿಸುವಂತೆ ಕೋರಿ ನನ್ನ ಬಳಿಗೆ ಯಾರೂ ಬಂದಿಲ್ಲ. ಈ ಬಗ್ಗೆ ಯೋಚಿಸಲೂ ನನಗೆ ಸಮಯವಿಲ್ಲ ಎಂದು ಅವರು ಹೇಳಿದರು.

ಹೊಟ್ಟೆಪಕ್ಷ ರಂಗಸ್ವಾಮಿ ಅವರ ಪುತ್ರ ಹಾಗೂ ಕರ್ನಾಟಕ ಜನತಾ ಪಕ್ಷದರಾಜ್ಯಾಧ್ಯಕ್ಷ ಪ್ರಸನ್ನ ಕುಮಾರ್ ಧಾರವಾಡಲ್ಲಿ ಪತ್ರಿಕಾಗೋಷ್ಠಿ ನಡೆಸಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಲೀಲಾವತಿ ಒಪ್ಪಿದ್ದಾರೆ ಎಂದು ಹೇಳಿದ್ದರು. ಲೀಲಾವತಿ ಅವರೊಂದಿಗೆ ಈಗಾಗಲೇ ಮಾತುಕತೆಯೂ ನಡೆಸಿರುವುದಾಗಿ ಅವರು ತಿಳಿಸಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಲೀಲಾವತಿ ಅವರು, ತಾವು ಚುನಾವಣೆಗೆ ಸ್ಪರ್ಧಿಸುವುದನ್ನು ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಹಾಗೆಯೇ ಇಂತಹ ಯಾವುದೇ ವ್ಯಕ್ತಿಯೂ ತಮ್ಮನ್ನು ಸಂಪರ್ಕಿಸಿಲ್ಲ. ಚುನಾವಣೆಗೆ ಸ್ಪರ್ಧಿಸುವ ಕುರಿತು ತಾವು ಯೋಚಿಸಿಯೂ ಇಲ್ಲ ಎಂದು ಲೀಲಾವತಿ ಸ್ಪಷ್ಟಪಡಿಸಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಲೀಲಾವತಿ ಮತ್ತು ವಿನೋದ್ ರಾಜ್ ಕೊಲೆಗೆ ಯತ್ನ
ಸದ್ದಿಲ್ಲದ ಸಮಾಜ ಸೇವಕಿ ನಟಿ ಲೀಲಾವತಿ
ಯಾರದು ಚಿತ್ರದಲ್ಲಿ ಮೇರಿಯಾಗಿ ಲೀಲಾವತಿ
ವಿನೋದ್ ಮೇಲೆ ಗುಂಡಿನ ದಾಳಿ ನಡೆದಿಲ್ಲ : ಬಿದರಿ

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada