»   » ಅದ್ಭುತ ಚಿತ್ರ ಕಾಕನ ಕೋಟೆ ನೋಡೋಣ ಬನ್ನಿ

ಅದ್ಭುತ ಚಿತ್ರ ಕಾಕನ ಕೋಟೆ ನೋಡೋಣ ಬನ್ನಿ

Posted By:
Subscribe to Filmibeat Kannada
Actor Lokesh
ಜನಪ್ರಿಯ ಹಳೆಯ ಕನ್ನಡ ಚಲನಚಿತ್ರಗಳನ್ನು ನೋಡಬೇಕು ಎಂಬ ಕುತೂಹಲ ಮತ್ತು ಉತ್ಕಟ ಬಯಕೆ ಚಿತ್ರಪ್ರೇಮಿಗಳನ್ನು ಸದಾ ಕಾಡುತ್ತಲೆ ಇರುತ್ತದೆ. ಆದರೆ ಈ ಚಿತ್ರಗಳನ್ನು ನೋಡುವ ಸೌಭಾಗ್ಯ ಎಲ್ಲಿ ಸಿಗುತ್ತದೆ ಎಂಬ ಪ್ರಶ್ನೆಗೆ ಉತ್ತರ ಹುಡುಕುವುದು ಕಷ್ಟ. ಈಗ ಅಂತಹ ಒಂದು ಸದಾವಕಾಶವನ್ನು ಕಲ್ಪಿಸುತ್ತಿದೆ ಕೆ ವಿ ಸುಬ್ಬಣ್ಣ ಆಪ್ತ ಸಮೂಹ ಹಾಗೂ ಕನ್ನಡ ವಾರ್ತಾ ಇಲಾಖೆ.

ಇಂದಿನ ರೀಮೇಕ್, ಸ್ವಮೇಕ್ ಚಿತ್ರಗಳ ಭರಾಟೆಯಲ್ಲಿ ಕಾದಂಬರಿ ಆಧಾರಿತ ಚಿತ್ರಗಳನ್ನು ಪ್ರೇಕ್ಷಕ ನಿರೀಕ್ಷಿಸುವುದು ತಿರುಕನ ಕನಸಿನಂತೆಯೇ ಸರಿ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕನ್ನಡ ಚಲನಚಿತ್ರ ಇತಿಹಾಸದಲ್ಲಿ ತನ್ನದೇ ಆದಂತಹ ವಿಶಿಷ್ಟತೆಯನ್ನು ಮೆರೆದ 'ಕಾಕನ ಕೋಟೆ' ಚಿತ್ರ ಪ್ರದರ್ಶನ ಏರ್ಪಡಿಸಲಾಗಿದೆ.

ಶನಿವಾರ (ಜು.23)ಸಂಜೆ 3.30ಕ್ಕೆ ಸರಿಯಾಗಿ ಕೆ ವಿ ಸುಬ್ಬಣ್ಣ ಆಪ್ತ ರಂಗಮಂದಿರಕ್ಕೆ ನೀವು ಅರ್ಧ ಗಂಟೆ ಮುಂಚೆ ಬಂದರೆ ಸೀಟು ಸಿಗುತ್ತದೆ. ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರ ಜನಪ್ರಿಯ ನಾಟಕ 'ಕಾಕನ ಕೋಟೆ'.ಈ ಚಿತ್ರ ಹಲವು ವಿಶೇಷಗಳಿಂದ ಕೂಡಿದೆ.

ಸಿ.ಆರ್.ಸಿಂಹ ನಿರ್ದೇಶನದ ಚೊಚ್ಚಲ ಚಿತ್ರ ಎಂಬುದು ಒಂದು ವಿಶೇಷವಾದರೆ. ಸುಗಮ ಸಂಗೀತ ಗಾರುಡಿಗ ಸಿ ಅಶ್ವತ್ಥ್ ಸಂಗೀತ ಸಂಯೋಜಿಸಿದ ಮೊದಲ ಚಿತ್ರವೂ ಹೌದು. 1976ರಲ್ಲಿ ತೆರೆಕಂಡ ಈ ಚಿತ್ರದಲ್ಲಿ ಲೋಕೇಶ್, ಶ್ರೀನಾಥ್, ಲೋಕನಾಥ್, ವೆಂಕಟಾಚಲಂ, ರಾಜ್‌ಕುಮಾರ್, ಗಿರಿಜಾ ಲೋಕೇಶ್ ಮುಂತಾದವರು ಅದ್ಭುತವಾಗಿ ಅಭಿನಯಿಸಿದ್ದರು.

ಗಿರೀಶ್ ಕಾಸರವಳ್ಳಿ ಈ ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಎಂ ಎಸ್ ಸತ್ಯು ಅವರು ಚಿತ್ರದ ತಾಂತ್ರಿಕ ಬಳಗದಲ್ಲಿದ್ದರು. ಎಂ ಆರ್ ಜಯರಾಜ್ ಮತ್ತು ಎಂ ಸಿ ಸತ್ಯನಾರಾಯಣ ಚಿತ್ರದ ನಿರ್ಮಾಪಕರು. ಈ ಚಿತ್ರದ "ಕರಿಹೈದನೆಂಬೋರು ಮಾದೇಶ್ವರಾ..." ಹಾಗೂ "ನೇಸಾರ ನೋಡು ನೇಸರ ನೋಡು..."  ಹಾಡುಗಳು ಇಂದಿಗೂ ಅಜರಾಮರ.

ಮೈಸೂರಿನಿಂದ ಸುಮಾರು 73 ಕಿ.ಮೀ ದೂರದಲ್ಲಿದೆ ಕಾಕನ ಕೋಟೆ. ಹೆಗ್ಗಡದೇವನ ಕೋಟೆ ತಾಲೂಕಿಗೆ ಸೇರಿದ ಸ್ಥಳ. ದಶಕಗಳಿಗೂ ಹಿಂದೆ ಅಲ್ಲಿ  ಕಾಡುಕುರುಬರೇ ಹೆಚ್ಚಾಗಿ ವಾಸಿಸುತ್ತಿದ್ದರಂತೆ. ಇವರೆಲ್ಲಾ ಹೆಗ್ಗಡದೇವನ ಕೋಟೆಯಲ್ಲಿದ್ದ ಹೆಗಡೆಯವರಿಗೆ ಕಪ್ಪ ಕೊಡಬೇಕಿತ್ತಂತೆ.

ಈ ವಿಚಾರವಾಗಿ ಕಾಡುಕುರುಬರ ನಾಯಕ ಕಾಕನಿಗೂ ಹೆಗಡೆಯವರಿಗೂ ವೈಮನಸ್ಸು ಉಂಟಾಯಿತಂತೆ. ಆಗ ಮೈಸೂರನ್ನು ಪರಿಪಾಲಿಸುತ್ತಿದ್ದ ರಾಜ ರಣಧೀರ ಕಂಠೀರವ ನರಸರಾಜ ಒಡೆಯರ್ ಅವರನ್ನು ಕಾಕ ಪ್ರಾಣಾಪಯದಿಂದ ಕಾಪಾಡುತ್ತಾನೆ. ಈ ಮೂಲಕ ಮಹಾರಾಜರ ಒಲವು ಗಳಿಸುತ್ತಾನೆ ಕಾಕ. ಇದಿಷ್ಟು ಚಿತ್ರದ ಕಥಾವಸ್ತು. ಚಿತ್ರ ನೋಡವ ಆನಂದ ನಿಮ್ಮದಾಗಲಿ. (ದಟ್ಸ್‌ಕನ್ನಡ ಸಿನಿವಾರ್ತೆ)

English summary
K V Subbana Aptha, Samuha and Kannada Vartha Ilake will present the screening of a Kannada feature film titled Kakana kote, followed by a discussion with the cast and other crew members on July 23.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada