Just In
Don't Miss!
- Lifestyle
ಬುಧವಾರದ ರಾಶಿಫಲ: ಈ ದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ
- News
ಭಾರತದಲ್ಲಿ 20.29 ಲಕ್ಷ ಜನರಿಗೆ ಕೊರೊನಾವೈರಸ್ ಲಸಿಕೆ
- Sports
ಸಯ್ಯದ್ ಮುಷ್ತಾಕ್ ಅಲಿ: ಹಿಮಾಚಲ ಪ್ರದೇಶ ಮಣಿಸಿದ ತಮಿಳುನಾಡು
- Education
ECIL Recruitment 2021: 3 ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ನೇರ ಸಂದರ್ಶನ
- Automobiles
ವಿನೂತನ ಫೀಚರ್ಸ್ಗಳೊಂದಿಗೆ ನ್ಯೂ ಜನರೇಷನ್ ಟಾಟಾ ಸಫಾರಿ ಎಸ್ಯುವಿ ಅನಾವರಣ
- Finance
ಗಣರಾಜ್ಯೋತ್ಸವಕ್ಕೆ ಬಿಎಸ್ಎನ್ಎಲ್ನಿಂದ ವಿಶೇಷ ಆಫರ್
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮಂಗಳೂರಿನಲ್ಲಿ ಅಪ್ರಾಪ್ತರಿಗೆ ಅಶ್ಲೀಲ ಚಿತ್ರ ವೀಕ್ಷಣೆಗೆ ಮುಕ್ತ ಮುಕ್ತ
ಒಂದು ವೇಳೆ ಚಿತ್ರದ ಬಗ್ಗೆ ಸರಿಯಾದ ಮಾಹಿತಿ ಇಲ್ಲದೇ ಕುಟುಂಬ ಸಮೇತರಾಗಿ ಹೋದರೆ ಮುಜುಗರ ಪಡಬೇಕಾಗುತ್ತದೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.
ಸಿನಿಮಾ ಎಂಬುದು ಇತ್ತೀಚಿನ ದಿನಗಳಲ್ಲಿ ತನ್ನ ಎಲ್ಲೆ ಮೀರುತ್ತಿದೆ. ಕುಟುಂಬ ಸಮೇತರಾಗಿ ಯಾವುದಾದರೊಂದು ಸಿನಿಮಾ ನೋಡಲು ಹೋದರೆ ಹತ್ತೇ ನಿಮಿಷದಲ್ಲಿ ಚಿತ್ರಮಂದಿರದಿಂದ ಹೊರನಡೆಯ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಕಾರಣ ಚಿತ್ರದಲ್ಲಿರುವ ಮಿತಿಮೀರಿದ ಅಶ್ಲೀಲತೆ. ನಗರದಲ್ಲಿ ಹಲವಾರು ಥಿಯೇ ಟರ್‌ಗಳಿವೆ. ಅದರಲ್ಲಿ ಹೈಕ್ಲಾಸ್ ಜನರಿಗೆಂದೇ ನಗರದ ಬಜೈ ಬಳಿಯ ಶಾಪಿಂಗ್ ಮಾಲ್ ಒಂದರಲ್ಲಿ ಮಲ್ಟಿಫ್ಲೆಕ್ಸ್ ಸಿನಿಮಾ ಮಂದಿರವೊಂದಿದೆ.
ಕುಟುಂಬ ಸಮೇತರಾಗಿ ಚಿತ್ರ ವೀಕ್ಷಿಸಲು ಬಂದವರು ಮಾತ್ರ ಈಗ ಚಿತ್ರ ಮಂದಿರದ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಶ್ಲೀಲ ಚಿತ್ರಗಳನ್ನು ಪ್ರದರ್ಶಿಸಲೆಂದೇ ನಗರದಲ್ಲಿ ಕೆಲವೊಂದು ಚಿತ್ರಮಂ ದಿರಗಳಿವೆ. ಆದರೆ ಇಲ್ಲಿ ವಿಪರೀತ ಅಶ್ಲೀಲತೆಯಿಂದ ಕೂಡಿದ ಹಿಂದಿ ಚಿತ್ರವೊಂದು ತೆರೆಕಂಡಿದೆ.
ಚಿತ್ರ ನೋಡುವ ಪ್ರೇಕ್ಷಕ ಹೆಚ್ಚಾಗಿ ಅದಕ್ಕೆ ನೀಡಿರುವ ಪ್ರಮಾಣ ಪತ್ರಗಳನ್ನು ಗಮನಿಸುವುದಿಲ್ಲ. ಹಾಗಾಗಿ ಮನೋರಂಜನೆಯ ದೃಷ್ಟಿಯಿಂದ ಚಿತ್ರ ವೀಕ್ಷಿಸಲು ಕುಟುಂಬ ಸಮೇತರಾಗಿ ಹೋಗುತ್ತಾರೆ. ಇದೇ ರೀತಿ ಚಿತ್ರ ವೀಕ್ಷಿಸಲು ಹೋದ ಕುಟುಂಬವೊಂದು ಪತ್ರಿಕೆಯ ಬಳಿ ತನ್ನ ಅಸಮಾಧಾನ ವ್ಯಕ್ತಪಡಿಸಿದೆ.
'ನಮಗೆ ಅಲ್ಲಿ ಪ್ರದರ್ಶನವಾಗುತ್ತಿದ್ದದ್ದು ಹಿಂದಿ ಚಿತ್ರವೆಂದು ಗೊತ್ತಿತ್ತು, ಆದರೆ ಅದರಲ್ಲಿ ಅತಿಯಾದ ಅಶ್ಲೀಲತೆ ಇತ್ತೆಂದು ಖಂಡಿತಾ ಗೊತ್ತಿರಲಿಲ್ಲ. ಹಾಗಾಗಿ ನಾವು ನಮ್ಮ ಇಬ್ಬರು ಸಣ್ಣ ವಯಸ್ಸಿನ ಮಕ್ಕಳೊಂದಿಗೆ ಸಿನಿಮಾ ನೋಡಲು ಹೋದೆವು.
ಒಂದು ವೇಳೆ ಅದು ವಯಸ್ಕರ ಚಿತ್ರವೇ ಆಗಿದ್ದರೆ, ಮಕ್ಕಳೊಂದಿಗೆ ಹೋಗುವಾಗ ಚಿತ್ರಮಂದಿರದ ಸಿಬ್ಬಂದಿ ತಡೆಯಬೇಕಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ. ಗೊತ್ತಿಲ್ಲದೆ ಹೋದ ತಪ್ಪಿಗೆ ನಾವೇ ಮುಜುಗರದಿಂದ ಹತ್ತೇ ನಿಮಿಷದಲ್ಲಿ ಹೊರ ಬಂದೆವು ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಇಲ್ಲಿ ಡೆಲ್ಲಿ ಬೆಲ್ಲಿ ಎಂಬ ಹಿಂದಿ ಸಿನಿಮಾವೊಂದು ಬಿಡುಗಡೆಯಾಗಿತ್ತು. ಆದರೆ ಈ ಚಿತ್ರ ಮಾತ್ರ ಕುಟುಂಬ ಸಮೇತರಾಗಿ ನೋಡುವ ಚಿತ್ರವಲ್ಲ.
ಸೆನ್ಸಾರ್ ಬೋರ್ಡ್ ಕೂಡ ಈ ಚಿತ್ರಕ್ಕೆ ಎ(ವಯಸ್ಕರಿಗೆ ಮಾತ್ರ) ಪ್ರಮಾಣಪತ್ರ ನೀಡಿದೆ. ಈ ರೀತಿಯ ಚಿತ್ರಗಳ ಬಗ್ಗೆ ಇರುವ ಕಟ್ಟುನಿಟ್ಟಿನ ನಿಯಮಾವಳಿಯನ್ನಾದರೂ ಚಿತ್ರಮಂದಿರಗಳು ಸರಿಯಾಗಿ ಪಾಲಿಸಲಿ ಎಂಬುದು ಸಾರ್ವಜನಿಕರ ಆಗ್ರಹ.
ಈ ರೀತಿಯ ಚಿತ್ರಗಳಿಗೆ ಸಣ್ಣ ವಯಸ್ಸಿನ ಮಕ್ಕಳಿಗೆ ಪ್ರವೇಶವಿಲ್ಲದಿದ್ದರೂ ಇಲ್ಲಿನ ಸಿಬ್ಬಂದಿ ಈ ಬಗ್ಗೆ ಗಮನ ಹರಿಸುವುದೇ ಇಲ್ಲ ಎಂಬ ಆರೋಪ ಜನರಿಂದ ಕೇಳಿಬಂದಿದೆ. ಇನ್ನಾದರೂ ಈ ಬಗ್ಗೆ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳು ಚಿತ್ರ ಮಂದಿರದ ಮಾಲಕ ರನ್ನು ಎಚ್ಚರಿಸುವ ಕೆಲಸ ಮಾಡಲಿ ಎಂಬುದು ಚಿತ್ರಪ್ರೇಮಿಗಳ ಆಗ್ರಹ.