»   » ಕನ್ನಡ ದ್ರೋಹಿಗಳಿಗೆ ಸೆಡ್ಡು ಹೊಡೆದ ಜೋಗಯ್ಯ

ಕನ್ನಡ ದ್ರೋಹಿಗಳಿಗೆ ಸೆಡ್ಡು ಹೊಡೆದ ಜೋಗಯ್ಯ

Posted By: * ಅಮರನಾಥ್ ಶಿವಶಂಕರ್, ಬೆಂಗಳೂರು
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಶಿವರಾಜಕುಮಾರ್ ಅಭಿನಯದ 100ನೇ ಚಿತ್ರ ಜೋಗಯ್ಯ ನಿನ್ನೆ ಬಿಡುಗಡೆಯಾಗಿ ಎಲ್ಲೆಡೆ ಅಭೂತಪೂರ್ವ ಓಪನಿಂಗ್ ಸಿಕ್ಕಿದೆ. ಈ ಸಂತಸದ ಸುದ್ದಿ ಬರುತ್ತಿರುವಾಗ ಕೆಲವು ಜನ ಜೋಗಯ್ಯನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ.

  ಫೇಸ್ಬುಕ್ ಮತ್ತು ಕೆಲವು ಚರ್ಚಾ ವೇದಿಕೆಗಳಲ್ಲಿ ಜನ ನಿರ್ದೇಶಕ ಪ್ರೇಮ್ ಮಾಡಿರೋ ಪ್ರಚಾರವನ್ನೇ ದೊಡ್ಡಹೈಪ್ ಅನ್ನೋ ಹಾಗೆ ಹಗುರವಾಗಿ ಮಾತನಾಡುತ್ತಿದ್ದಾರೆ.

  ಇದೇ ಜನ ತಮಿಳಿನ ಎಂಧಿರನ್, ಶಿವಾಜಿ, ಹಿಂದಿಯ ದಬಾಂಗ್, ಡೆಲ್ಲಿ ಬೆಲ್ಲಿ, ತೆಲುಗಿನ ಮಗಧೀರ, ಅರುಂಧತಿ ಬಂದಾಗ ಆ ಚಿತ್ರಗಳ ಪ್ರಚಾರವನ್ನ ಹಾಡಿಹೊಗಳಿದ್ದು ನಾವು ನೋಡಿಲ್ವಾ?

  ಚಿತ್ರರಂಗವೂ ಒಂದು ಉದ್ಯಮವಲ್ಲವಾ? ಎಲ್ಲ ಉದ್ಯಮಗಳ ರೀತಿಯಲ್ಲೆ ತಮ್ಮ ಪ್ರಾಡಕ್ಟ್ ಅನ್ನು ಜನರಿಗೆ ತಲುಪಿಸಿ ಆ ಪ್ರಾಡಕ್ಟ್ ಉತ್ತಮವಾಗಿ ಮಾರಾಟವಾದಾಗಲೇ ಅದನ್ನ ಮಾಡಿದ್ದು ಸಾರ್ಥಕವಾಗುತ್ತದೆ.

  ಪ್ರೇಮ್ ಈ ವಿಷಯದಲ್ಲಿ 100% ಗೆದ್ದಿದ್ದಾರೆ. ಜೋಗಯ್ಯನ ಶತಾಯ ಗತಾಯ ಸೋಲಿಸಬೇಕು ಅಂತ ಈ ಜನ ಪಣ ತೊಟ್ಟಿದ್ದಾರೆ. ಕಾರಣ, ಜೋಗಯ್ಯ ಕರ್ನಾಟಕದಾದ್ಯಂತ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ. ಹೀಗಿರುವಾಗ ತೆಲುಗು, ತಮಿಳು ಮತ್ತು ಹಿಂದಿ ಚಿತ್ರಗಳ ಬಿಡುಗಡೆಗೆ ಚಿತ್ರಮಂದಿರಗಳ ಕೊರತೆ ಎದ್ದು ಕಾಣುತ್ತಿದೆ.

  ಆ ಕಾರಣದಿಂದ ಒಂದು ಕನ್ನಡದ ಚಿತ್ರವನ್ನು ಕರ್ನಾಟಕದಲ್ಲಿ ಸೋಲುವಂತೆ ಬಯಸುತ್ತಿದ್ದಾರೆ. ಈ ಹುನ್ನಾರದಲ್ಲಿ ಹಲವು ಕನ್ನಡಿಗರು ಸಹ ಭಾಗಿಯಾಗಿರೋದು ವಿಪರ್ಯಾಸ.

  ತಮಿಳು, ತೆಲುಗು ಹಿಂದಿ ಚಿತ್ರಗಳನ್ನು ಜೊಲ್ಲು ಸುರಿಸಿಕೊಂಡು ನೋಡಿ ಆನಂದಿಸೋ ಈ ಜನ ಕನ್ನಡದ ಚಿತ್ರದ ವಿಷಯಕ್ಕೆ ಬಂದಾಗ ಮಾತ್ರ ಅತ್ಯದ್ಭುತ ವಿಮರ್ಶಕರಾಗಿರೋದು ಅವರ ಮನಸ್ಥಿತಿಯನ್ನ ತೋರಿಸುತ್ತದೆ.

  ಇನ್ನು ಕನ್ನಡದ ಕೆಲವು ಮಾಧ್ಯಮಗಳು ಜೋಗಯ್ಯ ಚಿತ್ರದ ಬಗ್ಗೆ ಅಪಪ್ರಚಾರ ಮಾಡುತ್ತಿದ್ದು ಜೋಗಯ್ಯ ಚಿತ್ರದ ಟಿಕೆಟ್ಗಳು ವ್ಯಾಪಾರ ಆಗಿಲ್ಲ ಅನ್ನೋ ಮಾತುಗಳಲ್ಲ ಹೇಳುತ್ತಿದ್ದಾರೆ.

  ಇದೇ ಜನ ಚಿರಂಜೀವಿ, ಅವನ ಮಗ, ರಜನಿಕಾಂತ್ ಮುಂತಾದ ಪರಭಾಷ ನಟರ ಚಿತ್ರಗಳ ಬಿಡುಗಡೆಗೆ ಮುನ್ನವೆ ಆ ಚಿತ್ರಗಳ ಪರವಾಗಿ ಪ್ರಚಾರವನ್ನ ಮಾಡಲು ಹಾತೊರೆಯುತ್ತಿರುತ್ತಾರೆ. ಇವರ ಕನ್ನಡದ ಬಗ್ಗೆ ಇರೋ ಬದ್ಧತೆ ಎಷ್ಟು ಪೊಳ್ಳು ಅಂತ ನಿರೂಪಿಸುತ್ತದೆ.

  ಶಿವಣ್ಣನೇ ಕಿಂಗ್: ಈ ಚಿತ್ರದಲ್ಲಿ ಹಲವಾರು ವಿಶೇಷತೆಗಳಿದೆ. ಮೊಟ್ಟಮೊದಲ ಬಾರಿಗೆ ಕನ್ನಡದಲ್ಲಿ ಒಂದು ಫೈಟ್ ಮತ್ತೆ ಒಂದು ಹಾಡನ್ನ ಸಂಪೂರ್ಣ 3Dಕ್ಯಾಮರಾದಲ್ಲಿ ಅತ್ಯದ್ಭುತವಾಗಿ ಚಿತ್ರಿಸಿದ್ದಾರೆ. ನಿಜಕ್ಕು ಕನ್ನಡ ಚಿತ್ರರಂಗದಲ್ಲಿ ಇಂತಹ ಒಳ್ಳೆಯ ಗ್ರಾಫಿಕ್ಸ್ ಬಳಸಿರೋದು ಹೆಮ್ಮೆಯ ವಿಷಯ.

  ಶಿವಣ್ಣ ಅಭಿನಯದ ಬಗ್ಗೆ ಅಂತು ಕೆಮ್ಮಂಗಿಲ್ಲ. 100ನೇ ಚಿತ್ರದಲ್ಲಿ ನಟಿಸುತ್ತಿರೋ ಶಿವಣ್ಣ ತಮ್ಮ ಅಭಿನಯದ ಪ್ರೌಢಿಮೆಯನ್ನು ತೋರಿಸಿದ್ದಾರೆ. ಪ್ರೇಮ್ ತಮ್ಮ ನಿರ್ದೇಶನದಲ್ಲಿ ಇನ್ನಷ್ಟು ಮೆಚೂರ್ ಆಗಿರೋದು ಎದ್ದು ಕಾಣುತ್ತದೆ. ಜೊತೆಗೆ ಪ್ರೇಮ್ ಕನ್ನಡ ಚಿತ್ರರಂಗದ ಒಬ್ಬ ಅತ್ಯದ್ಭುತ ತಂತ್ರಜ್ಞ ಅನ್ನೋದನ್ನು ಸಾಬೀತುಪಡಿಸಿದ್ದಾರೆ.

  ಒಟ್ಟಾರೆ, ಇದು ಕನ್ನಡಿಗರೆಲ್ಲರೂ ನೋಡಲೇಬೇಕಾದ ಚಿತ್ರ. ಇದನ್ನ ಸೋಲಿಸಲು ಯಾರು ಏನೇ ಹುನ್ನಾರ ಮಾಡಿದರು ಸ್ವಾಭಿಮಾನಿ ಕನ್ನಡಿಗರು ಇದನ್ನ ಗೆಲ್ಲಿಸಬೇಕಿದೆ.

  ಮುಂದಿನ ದಿನಗಳಲ್ಲಿ ಕನ್ನಡದ ಚಿತ್ರಗಳು 200-300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಕರ್ನಾಟಕದಲ್ಲಿ ಮಾರುಕಟ್ಟೆಯನ್ನ ಸ್ಥಾಪಿಸಿರುವ ತೆಲುಗು, ತಮಿಳು, ಹಿಂದಿ ಚಿತ್ರಗಳನ್ನ ಕಿತ್ತೆಸೆದು ಕನ್ನಡದ ಸಾರ್ವಭೌಮತ್ವವನ್ನು ಸೃಷ್ಟಿಸುವಂತಾಗಲಿ.

  English summary
  Movie Jogayya has gained initial success with grand opening across Karnataka. This hype is only through publicity and gimmick by Director Prem. Public has differenceof opinion with some media reports that Prem's tactics and skills are not reflected in Shivaraj's 100th movie.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more