For Quick Alerts
  ALLOW NOTIFICATIONS  
  For Daily Alerts

  ತೆಲುಗು ಚಿತ್ರದಲ್ಲಿ ಜಂಭದ ಹುಡುಗಿ ಪ್ರಿಯಾ ಹಾಸನ್

  By Rajendra
  |

  'ಜಂಭದ ಹುಡುಗಿ' ಹಾಗೂ 'ಬಿಂದಾಸ ಹುಡುಗಿ' ಚಿತ್ರಗಳ ಬಳಿಕ ಪ್ರಿಯಾ ಹಾಸನ್ ನಾಪತ್ತೆಯಾಗಿದ್ದರು. ಈ ಮಧ್ಯೆ ಆಕೆಯ ಮತ್ತೆರಡು 'ರೌಡಿ ರಾಣಿ' ಹಾಗೂ 'ಗಂಡುಬೀರಿ' ಚಿತ್ರಗಳು ಸುದ್ದಿಯಲ್ಲಿ ಸದ್ದು ಮಾಡಿದ್ದವು. ಬಳಿಕ ಪ್ರಿಯಾ ಸುಳಿವಿಲ್ಲ. ಪ್ರಿಯಾ ಹಾಸನ್ ಎಲ್ಲಿ ಹೋದರು ಎಂದು ಅಭಿಮಾನಿಗಳು ಹುಡುಕುತ್ತಿದ್ದರೆ ಸುಮನ್ ಜೊತೆ ಆಂಧ್ರದಲ್ಲಿ ಪ್ರತ್ಯಕ್ಷರಾಗಿದ್ದಾರೆ.

  ತೆಲುಗಿನ 'ಶ್ರೀ ವಾಸವಿ ವೈಭವಮ್' ಎಂಬ ಚಿತ್ರಕ್ಕೆ ಪ್ರಿಯಾ ಹಾಸನ್ ಸಹಿ ಹಾಕಿದ್ದಾರೆ. ಈ ಚಿತ್ರ ಶುಕ್ರವಾರ (ಜ.20) ಸೆಟ್ಟೇರಿದೆ. ಹೆಸರೇ ಹೇಳುವಂತೆ ಇದೊಂದು ಭಕ್ತಿ ಪ್ರಧಾನ ಚಿತ್ರ. ವಿ ದೊರೆಸ್ವಾಮಿ ನಾಯ್ಡು ನಿರ್ಮಿಸುತ್ತಿರುವ ಚಿತ್ರವನ್ನು ಉದಯ ಭಾಸ್ಕರ್ ಎಂಬುವವರ ನಿರ್ದೇಶಿಸುತ್ತಿದ್ದಾರೆ.

  ಆರ್ಯ ವೈಶ್ಯ ಸಮುದಾಯದ ಆರಾಧ್ಯ ದೈವ ವಾಸವಿ ಕನ್ಯಕಾ ಪರಮೇಶ್ವರಿ. ಕೇವಲ ವೈಶ್ಯರಿಗಷ್ಟೇ ಅಲ್ಲದೆ ಇಡೀ ಭಾರತೀಯರಿಗೆ ಆಕೆ ಶಕ್ತಿ ಪ್ರಧಾಯಿನಿ. ಪೌರಾಣಿಕ ಕತೆಯನ್ನು ವಾಸ್ತವಿಕ ನೆಲೆಗಟ್ಟಿನಲ್ಲಿ ತೆರೆಗೆ ತರಲಾಗುತ್ತಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ. ವಿಶೇಷ ಎಂದರೆ ಈ ಚಿತ್ರದಲ್ಲಿ ಮೀನಾ ಕೂಡ ಅಭಿನಯಿಸುತ್ತಿರುವುದು. (ಏಜೆನ್ಸೀಸ್)

  English summary
  Kannada actress Priya Hasan signed for a Telugu movie titled as Sri Vasavi Vaibbhavam. The movie is based on Vasavi, the goddess or kula devatha of the Arya Vysya community as mentioned in the Vasavi Puranamulu written in telugu during the 10th century AD

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X