»   »  ರಜನಿ ಚಿತ್ರಕ್ಕೆ ಮೈಸೂರಿನಲ್ಲಿ ಅದ್ದೂರಿ ಕ್ಲೈಮ್ಯಾಕ್ಸ್

ರಜನಿ ಚಿತ್ರಕ್ಕೆ ಮೈಸೂರಿನಲ್ಲಿ ಅದ್ದೂರಿ ಕ್ಲೈಮ್ಯಾಕ್ಸ್

Subscribe to Filmibeat Kannada
Upendra
ರಾಮು ಎಂಟರ್ ಪ್ರೈಸಸ್ ನ 27ನೇ ಚಿತ್ರ 'ರಜನಿ'. ತೆಲುಗಿನ ಕೃಷ್ಣ ಚಿತ್ರದ ರೀಮೇಕ್ ಇದಾಗಿದ್ದು ಉಪೇಂದ್ರ ಮತ್ತು ಆರ್ತಿ ಛಾಬ್ರಿಯಾ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಈ ಚಿತ್ರದ ವಿಭಿನ್ನ ಕ್ಲೈಮ್ಯಾಕ್ಸ್ ಸನ್ನಿವೇಶವನ್ನು ಮೈಸೂರಿನಲ್ಲಿ ಚಿತ್ರೀಕರಿಸಿಕೊಳ್ಳಲಾಯಿತು.

ಮುಂಬೈನ ನಟ ಮುಕುಲ್ ದೇವ್ ಮತ್ತು ಸಾವಿರಕ್ಕೂ ಅಧಿಕ ಸಹ ಕಲಾವಿದರು ಕ್ಲೈಮ್ಯಾಕ್ಸ್ ಸನ್ನಿವೇಶದಲ್ಲಿ ಭಾಗವಹಿಸಿದ್ದರು. 50 ಲಾರಿಗಳು, 25 ಸ್ಕಾರ್ಪಿಯೋ ವಾಹನಗಳು ಮತ್ತು 100 ಟಾಟಾ ಸುಮೋಗಳನ್ನು ಚಿತ್ರೀಕರಣಕ್ಕೆ ಬಳಸಲಾಗಿತ್ತು. ಥ್ರಿಲ್ಲರ್ ಮಂಜು ನಿರ್ದೇಶನದಲ್ಲಿ ಈ ಸಾಹಸ ದೃಶ್ಯಗಳನ್ನು ಕ್ಯಾಮೆರಾದಲ್ಲಿ ಬಂಧಿಸಲಾಯಿತು.

ರಜನಿ ಚಿತ್ರಕ್ಕೆ ಸಂಭಾಷಣೆ ರಾಮ್ ನಾರಾಯಣ್ ಮತ್ತು ಹಂಸಲೇಖ ಸಂಗೀತ ಸಂಯೋಜಿಸಿದ್ದಾರೆ. ನಿರ್ದೇಶನದ ಜತೆಗೆ ಥ್ರಿಲ್ಲರ್ ಮಂಜು ಸಾಹಸ ನಿರ್ದೇಶಕನ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಕೋಮಲ್ ಕುಮಾರ್, ಶರತ್ ಲೋಹಿತಾಶ್ವ, ದೊಡ್ಡಣ್ಣ, ಅವಿನಾಶ್, ರಮೇಶ್ ಭಟ್, ರಂಗಾಯಣ ರಘು, ಸಾಧು ಕೋಕಿಲ, ಬುಲ್ಲೆಟ್ ಪ್ರಕಾಶ್, ಸತ್ಯಜಿತ್, ಪ್ರವಿತ್ರಾ ಲೋಕೇಶ್, ಚೈತ್ರಾ ಶೆಣೈ, ತುಳಸಿ, ಮುಖುಲ್ ದೇವ್, ದಂಡಪಾಣಿ ತಾರಗಣದಲ್ಲಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ರಜನಿ ಚಿತ್ರದ ನಾಯಕಿಯಾಗಿ ಆರತಿ ಛಾಬ್ರಿಯಾ
ಏಪ್ರಿಲ್ 3 ರಿಂದ ರಾಮು ನಿರ್ಮಾಣದಲ್ಲಿ ರಜನಿ
ಥ್ರಿಲ್ಲರ್ ಮಂಜು ನಿರ್ದೇಶನದಲ್ಲಿ ಉಪೇಂದ್ರ
ಲಂಡನ್ ಗೌಡನಿಗೆ ಜತೆಯಾದ ಉಲ್ಲಾಳದ ಸ್ನೇಹ!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada