»   » ಶ್ರೀನಗರದಲ್ಲಿ ಲಿಂಗ ಕಳೆದುಕೊಂಡ ಭಗ್ನ ಪ್ರೇಮಿಯ ಕತೆ

ಶ್ರೀನಗರದಲ್ಲಿ ಲಿಂಗ ಕಳೆದುಕೊಂಡ ಭಗ್ನ ಪ್ರೇಮಿಯ ಕತೆ

Posted By:
Subscribe to Filmibeat Kannada

ಪ್ರೀತಿಗಾಗಿ ಪ್ರಾಣ ಕೊಟ್ಟ ದುರಂತ ಪ್ರೇಮಿಗಳನ್ನು ನೋಡಿರುತ್ತೀರಿ. ಎಷ್ಟೋ ಮಂದಿ ದೇವದಾಸರನ್ನು ಕಂಡಿರುತ್ತೀರಿ. ಪ್ರೀತಿಸಿದವರು ಕೈಗೆಸಿಗದೆ ಹತಾಶರಾದ ಭಗ್ನ ಪ್ರೇಮಿಗಳನ್ನು ನೋಡಿರುತ್ತೀರಿ. ರೋಮಿಯೋ ಜೂಲಿಯಟ್, ಸಲೀಂ ಅನಾರ್ಕಲಿಯಂತ ಅಮರ ಪ್ರೇಮಿಗಳ ಬಗ್ಗೆ ಗೊತ್ತಿಲ್ಲದವರಿಲ್ಲ. ಆದರೆ ತನ್ನ ಲಿಂಗವನ್ನೇ ಬದಲಾಯಿಸಿಕೊಂಡ ಸಲಿಂಗ ಪ್ರೇಮಿಯ ವಿಚಿತ್ರ ಕತೆ ಕೇಳಿದ್ದೀರಾ?

ಇಂಥ ಅಪರೂಪದ ಘಟನೆ ಶ್ರೀನಗರದಲ್ಲಿ ನಡೆದಿದೆ. ಜರ್ಮನಿಯ ಯುವಕನೊಬ್ಬನ್ನ ಲಿಂಗ ಕಳೆದುಕೊಂಡ ಭಗ್ನ ಕತೆಯಿದು. ಈತ ಭಾರತಕ್ಕೆ ಸುತ್ತಾಡಲು ಬಂದು ಕಡೆಗೆ ಕಾಶ್ಮೀರದ ಶ್ರೀನಗರ ಸೌಂದರ್ಯಕ್ಕೆ ಮಾರುಹೋಗಿ ಅಲ್ಲೇ ನೆಲೆನಿಂತ. ಯುವಕನ ಹೆಸರು ಸರವೈತ್ ಪಟರಚೋಕಚ್ಚೆ. ವಯಸ್ಸು ನಲವತ್ತು.

ಶ್ರೀನಗರದ ಬೆಟ್ಟ ಗುಡ್ಡ ಮರಗಿಡ ನೋಡಿಕೊಂಡು ಹಾಯಾಗಿದ್ದ ಈತನ ಕಣ್ಣಿಗೆ ಮೊಹ್ಸಿನ್ ಶಾ (25) ಎಂಬ ಮತ್ತೊಬ್ಬ ಯುವಕ ಕಣ್ಣಿಗೆ ಬಿದ್ದ. ವಿಶ್ವಾಮಿತ್ರನ ತಪಸ್ಸು ಭಂಗವಾದಂತೆ ಈತ ಮನಸ್ಸನ್ನು ಬದಲಾಯಿಸಿಕೊಂಡು ಮೊಹ್ಸಿನ್ ಹಿಂದೆ ಬಿದ್ದ. ಇಬ್ಬರಲ್ಲೂ ಪ್ರೇಮ ಅಂಕುರಿಸಿದೆ. ಕೇವಲ ಪ್ರೀತಿಸಿದರಷ್ಟೆ ಸಾಲದು ಮದುವೆಯಾಗಲು ಇಬ್ಬರೂ ನಿರ್ಧರಿಸಿದ್ದಾರೆ.

ಕಡೆಗೆ ಇಬ್ಬರೂ ಒಂದು ಒಪ್ಪಂದಕ್ಕೆ ಬಂದು ಸರವೈತ್ ಲಿಂಗ ಬದಲಾಯಿಸಿಕೊಂಡು ಹುಡುಗಿಯಾಗಿ ಬದಲಾಗಲು ಒಪ್ಪಿದ್ದಾನೆ. ಕಡೆಗೆ ಲಿಂಗ ಬದಲಾಯಿಸಿಕೊಂಡ ಸರವೈತ್ ಹುಡುಗಿಯಾಗಿ ಬದಲಾಗಿದ್ದಾಳೆ. ಮೊಹ್ಸಿನ್ ಮನೆ ಕಟ್ಟುವ ಸಲುವಾಗಿ ಸರವೈತ್ ಳಿಂದ ಹಂತ ಹಂತವಾಗಿ ಸುಮಾರು ರು. 15 ಲಕ್ಷ ಪಡೆದುಕೊಂಡಿದ್ದಾನೆ. ಬಳಿಕ ಜರ್ಮನಿಗೆ ಹೋಗಿದ್ದ ಸರವೈತ್ ನನ್ನು ಶಾ ತಿರಸ್ಕರಿಸತೊಡಗಿದ್ದಾನೆ.

ಬಳಿಕ ಶಾನನ್ನು ಹುಡುಕಿಕೊಂಡು ಶ್ರೀನಗರದಕ್ಕೆ ಸರವೈತ್ ಬಂದಿದ್ದಾ'ಳೆ'. ಶಾ ಬಗ್ಗೆ ವಿಚಾರಿಸಿದರೆ ಆತ ನಾಪತ್ತೆಯಾಗಿರುವ ವಿಷಯ ಗೊತ್ತಾಗಿದೆ. ಇದರಿಂದ ಬೇಸತ್ತ 'ಆಕೆ' ಪೊಲೀಸರಿಗೆ ದೂರು ಕೊಟ್ಟಿದ್ದಾ'ಳೆ'. ಈ ಮೂಲಕ ಲಿಂಗ ಕಳೆದುಕೊಂಡ ಪ್ರಕರಣ ಬಹಿರಂಗವಾಗಿದೆ. ಒಂದು ಬಾಲಿವುಡ್ ಸಿನಿಮಾಕತೆಗೆ ವಸ್ತುವಾಗಬಹುದಾದ ಎಲ್ಲ ಲಕ್ಷಣಗಳೂ ಇವೆ ಎನ್ನಿಸುವುದಿಲ್ಲವೆ?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada