»   » ಬಿಚ್ಚು ಮನಸಿನ ದಿಟ್ಟ ಚೆಲುವೆ ಸೋನಲ್

ಬಿಚ್ಚು ಮನಸಿನ ದಿಟ್ಟ ಚೆಲುವೆ ಸೋನಲ್

Posted By:
Subscribe to Filmibeat Kannada

ಚಿತ್ರರಸಿಕರು ನನ್ನನ್ನು ನನ್ನ ರೂಪರಾಶಿಗಿಂತ ಉತ್ತಮ ನಟಿಯಾಗಿ ಗುರುತಿಸಬೇಕು ಎಂದು ಮಾಡೆಲಿಂಗ್ ಲೋಕದಿಂದ ಬಣ್ಣದ ಲೋಕಕ್ಕೆ ಜಿಗಿದಿರುವ 'ಜನ್ನತ್' ಬೆಡಗಿ ಸೋನಲ್ ಚೌಹಾಣ್ 'ದಿ ಮ್ಯಾನ್' ಎಂಬ ಮ್ಯಾಗಝೀನಿಗೆ ಬೆಚ್ಚಿಬೀಳಿಸುವಂಥ ಪೋಸ್ ನೀಡಿ ಚಿತ್ರಪಂಡಿತರ ಹುಬ್ಬೇರುವಂತೆ ಮಾಡಿದ್ದಾರೆ. ಚೆಲುವೆ ಸೋನಲ್ ಚೆಲುವು, ದಿಟ್ಟತನ ನೋಡಿ ಮಾತುಗಳು ಬರದಂತಾಗಿವೆ.

ಈ ನಟಿಯರೇ ಹೀಗೆ, ಹೇಳುವುದೇ ಒಂದು ಮಾಡುವುದೇ ಇನ್ನೊಂದು. ಚೆಲುವೆಯೇ ನಿನ್ನ ನೋಡಲು ಚಿತ್ರದ ಮುಖಾಂತರ ಕನ್ನಡಕ್ಕೂ ಕಾಲಿಟ್ಟಿರುವ ಪಾಂಡ್ಸ್ ಪರಿಮಳ ಸೂಸುವ ಸೋನಲ್ ತಾನು ಉತ್ತಮ ಪಾತ್ರವಿರುವ ಚಿತ್ರಗಳಲ್ಲಿ ಮಾತ್ರ ಅಭಿನಯಿಸುತ್ತೇನೆ, ಚಿತ್ರಗಳಲ್ಲಿ ಸೆಕ್ಸಿಯಾಗಿ ಕಾಣಿಸಿಕೊಳ್ಳಲು ಬಯಸುವುದಿಲ್ಲ ಎಂದು ಹೇಳುತ್ತಲೇ ಬಂದಿದ್ದಾರೆ. ಚೆಲುವೆಯೇ ನಿನ್ನ ನೋಡಲು ಮುಹೂರ್ತದ ಸಂದರ್ಭದಲ್ಲಿ ಕೂಡ ಇದೇ ಮಾತನ್ನು ಉಲಿದಿದ್ದರು.

ಶಿವರಾಜ್ ಕುಮಾರ್ ಅಭಿನಯದ ಚೆಲುವೆಯೇ ನಿನ್ನ ನೋಡಲು ಚಿತ್ರದ ಬಗ್ಗೆ ಸೋನಲ್ ಚೌಹಾಣ್ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಚಿತ್ರ ವಿಶ್ವದ ಏಳು ಅದ್ಭುತಗಳಿರುವ ತಾಣಗಳಲ್ಲಿ ಚಿತ್ರಿತವಾಗಿದೆ.

ದಕ್ಷಿಣದ ಚಿತ್ರಗಳಲ್ಲಿಯೂ ತೊಡಗಿಸಿಕೊಂಡಿರುವ ಸೋನಲ್ ಖ್ಯಾತ ಚಿತ್ರಕಾರ ಎಂಎಫ್ ಹುಸೇನ್ ಅವರ ಮಗ ಓವೈಸ್ ಹುಸೇನ್ ಪ್ರಥಮ ಬಾರಿಗೆ ನಿರ್ದೇಶಿಸುತ್ತಿರುವ 'ಪಂಜಾಬ್ 69' ಚಿತ್ರಕ್ಕಾಗಿ ತಮ್ಮನ್ನು ಅರ್ಪಿಸಿಕೊಂಡಿದ್ದಾರೆ.

ದಿ ಮ್ಯಾನ್ ಮ್ಯಾಗಝೀನಿನಲ್ಲಿ ಬಿಸಿಬಿಸಿ ಪೋಸುಗಳಲ್ಲಿ ಕಾಣಿಸಿಕೊಂಡಿರುವ ಸೋನಲ್, ಜೀವನದಲ್ಲಿ ಬರುವ ಮ್ಯಾನ್ ಬಗ್ಗೆಯೂ ಸಾಕಷ್ಟು ಕನಸುಗಳನ್ನು ಕಟ್ಟಿಕೊಂಡಿದ್ದಾರೆ. ಅವರಿಗೆ ಪುರುಷರ ವಾಸನೆಯೆಂದರೆ ಬಲು ಇಷ್ಟವಂತೆ. ನೋಡಲು ಥೇಟ್ ಮಿಲಿಟರಿ ಆಫೀಸರಂತೆ ಶಿಸ್ತಿನಂತೆ ಇರಬೇಕಂತೆ. ಪ್ರೀತಿಸಿದರೆ ಸೈಫ್ ಅಲಿ ಖಾನ್ ನಂತೆ ಪ್ರೀತಿಸಬೇಕಂತೆ. ಜೀವನಕ್ಕೆ ಭದ್ರತೆ ನೀಡುವ ತಾಕತ್ ಅವನಲ್ಲಿ ಇರಬೇಕಂತೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada