»   »  ಜಸ್ಟ್ ಮಾತ್ ಮಾತಲ್ಲಿ ಒಂದಾದ ಸುದೀಪ್, ರಮ್ಯಾ!

ಜಸ್ಟ್ ಮಾತ್ ಮಾತಲ್ಲಿ ಒಂದಾದ ಸುದೀಪ್, ರಮ್ಯಾ!

Subscribe to Filmibeat Kannada
Sudeep and Ramya
'ಜಸ್ಟ್ ಮಾತ್ ಮಾತಲ್ಲಿ' ಎಂಬ ಹೊಸ ಚಿತ್ರದ ಮೂಲಕ ಸುದೀಪ್ ಮತ್ತು ರಮ್ಯಾ ಮತ್ತೆ ಜತೆಯಾಗಿ ನಟಿಸಲಿದ್ದಾರೆ. ಇವರಿಬ್ಬರೂ ಈ ಹಿಂದೆ 'ರಂಗ ಎಸ್ ಎಸ್ ಎಲ್ ಸಿ' ಮತ್ತು 'ಮುಸ್ಸಂಜೆ ಮಾತು' ಚಿತ್ರಗಳಲ್ಲಿ ನಟಿಸಿದ್ದರು. ಇವರಿಬ್ಬರ ಕಾಂಬಿನೇಷನಲ್ಲಿ ಬಂದ ಮುಸ್ಸಂಜೆ ಮಾತು ಬಾಕ್ಸಾಫೀಸಲ್ಲಿ ಗೆದ್ದಿತ್ತು.

ಈಗಾಗಲೇ 'ಯಜ್ಞ' ಚಿತ್ರವನ್ನು ನಿರ್ಮಿಸಿ ಬಿಡುಗಡೆ ಮಾಡಿರುವ ಆರ್.ಶಂಕರ್(ಶಂಕರೇಗೌಡ) ಈ ಚಿತ್ರದ ನಿರ್ಮಾಪಕರು. ಮೇ ತಿಂಗಳ ಅಂತ್ಯಕ್ಕೆ ಚಿತ್ರೀಕರಣ ಆರಂಭವಾಗಲಿದೆ. ಜಸ್ಟ್ ಮಾತ್ ಮಾತಲ್ಲಿ ಚಿತ್ರವನ್ನು ತಾವೇ ನಿರ್ಮಿಸುವುದಾಗಿ ಸುದೀಪ್ ಈ ಹಿಂದೆ ಘೋಷಿಸಿದ್ದರು. ಆದರೆ ಶಂಕರೇಗೌಡರ ವಿನಂತಿ ಮೇರೆಗೆ ಈ ಪ್ರಾಜೆಕ್ಟ್ ಅವರ ಕೈಗೆ ಹೋಗಿದೆ.

ಜಸ್ಟ್ ಮಾತ್ ಮಾತಲ್ಲಿ ಚಿತ್ರಕ್ಕೆ ಸುದೀಪ್ ಅವರೇ ಆಕ್ಷನ್, ಕಟ್ ಹೇಳಲಿದ್ದಾರೆ. ಸಂಗೀತ ಸಂಯೋಜನೆ ರಘು ದೀಕ್ಷಿತ್ ಅವರದು. ವೀರ ಮದಕರಿ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದ ಶ್ರೀ ವೆಂಕಟ್ ಅವರು ಈ ಚಿತ್ರಕ್ಕೆ ಕ್ಯಾಮೆರಾ ಹಿಡಿಯಲಿದ್ದಾರೆ. ಈಗಾಗಲೇ ಎರಡು ಹಾಡುಗಳ ಸಂಯೋಜನೆ ಸಹ ಮುಗಿದಿದೆ. ಬೆಳ್ಳಿಪರದೆ ಮೇಲೆ ಮತ್ತೆ ಸುದೀಪ್, ರಮ್ಯಾ ಜೋಡಿ ಮೋಡಿ ಮುಂದುವರಿಯಲಿದೆಯೇ?

(ದಟ್ಸ್ ಕನ್ನಡ ಚಿತ್ರವಾರ್ತೆ)

ಸುದೀಪ್ ನಟನೆ ಬಗ್ಗೆ ಅಮಿತಾಬ್ ಪ್ರಮಾಣ ಪತ್ರ!
ದಿನೇಶ್, ಸುದೀಪ್ ಸ್ನೇಹದ ಕಡಲಲ್ಲಿ ಹಾಲಾಹಲ
ಬಳ್ಳಾರಿ ರೆಡ್ಡಿಗಳ ವಿರುದ್ಧ ನಟ ಸುದೀಪ್ ಸ್ಪರ್ಧೆ!?
ಮಂಡ್ಯ ಲೋಕಸಭೆಯಿಂದ ನಟಿ ರಮ್ಯಾ ಸ್ಪರ್ಧೆ?
ನಂ.1 ಪಟ್ಟಕ್ಕಾಗಿ ನಟಿ ರಮ್ಯಾ ಹಾರಾಟ,ಹೋರಾಟ!
ಕೋಮಲ್ ಜೊತೆಗಿನ ಸಿನಿಮಾಕ್ಕೆ ರಮ್ಯಾ ನಕಾರ?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada