For Quick Alerts
  ALLOW NOTIFICATIONS  
  For Daily Alerts

  ರಾಮನಗರದಲ್ಲಿ ಶಿವಣ್ಣನೊಂದಿಗೆ ಮಾರಾಮಾರಿ!

  By Staff
  |
  ಪಾತ್ರ ನಿರ್ವಹಣೆಯಲ್ಲಿ ಶಿವರಾಜಕುಮಾರ್ ತಂದೆಯನ್ನೇ ಹೋಲುತ್ತಾರೆ. ವಾತ್ಸಲ್ಯಮಯಿ ಚಿತ್ರಗಳಲ್ಲಿ ಪ್ರೇಕ್ಷಕರ ಮನಸೂರೆಗೊಂಡ ಶಿವಣ್ಣ 'ಜೋಗಿ'ಯಾಗೂ ಗೆದ್ದವರು. ಪ್ರಸ್ತುತ ಅವರ ಅಭಿನಯದ 'ಭಾಗ್ಯದ ಬಳೆಗಾರ' ಚಿತ್ರಕ್ಕೆ ರಾಮನಗರದ ಸುತ್ತಮುತ್ತ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ.

  ಖಳನಟ ಆದಿಲೋಕೇಶ್ ತನ್ನ ಸಹಚರ ಮಳವಳ್ಳಿ ಸಾಯಿಕೃಷ್ಣರೊಟ್ಟಿಗೆ ಸಾಗಿ ಬರುತ್ತಿದ್ದಾಗ ಹಳ್ಳಿಯ ಚೆಲುವೆಯೊಬ್ಬಳು ಎದುರಾಗುತ್ತಾಳೆ. ಅವಳ ಮೇಲೆ ಮೋಹಿತನಾದ ಆದಿಲೋಕೇಶ್ ಆಕೆ ನನ್ನವಳಾಗಬೇಕು ಎಂಬ ಅಭಿಲಾಷೆಯನ್ನು ಸಾಯಿಕೃಷ್ಣ ಬಳಿ ಹೇಳಿಕೊಳ್ಳುತ್ತಿದ್ದಾಗ ಬಳೆಗಾರ ಶಿವಣ್ಣ ಅವರಿಗೆ ಎದುರಾಗುತ್ತಾನೆ. ಸಾಯಿಕೃಷ್ಣನ ಸಲಹೆಯಂತೆ ಶಿವಣ್ಣನನ್ನು ಹತ್ತಿರ ಕರೆದ ಆದಿಲೋಕೇಶ್ ನೂರುರೂಪಾಯಿ ಕೊಡುತ್ತೇನೆ ಆ ಹುಡುಗುಯನ್ನು ನನ್ನವಳಾಗಿಸು ಎಂದು ಹೇಳುತ್ತಾನೆ. ಈ ಮಾತನ್ನು ಕೇಳಿ ಕುಪಿತನಾದ ಬಳೆಗಾರ ನಾನು ಹೆಣ್ಣುಮಕ್ಕಳಿಗೆ ಬಳೆ ತೊಡಿಸುವಾಗ ಅವರಲ್ಲಿ ನನ್ನ ತಾಯಿ ತಂಗಿಯರನ್ನು ಕಾಣುತ್ತೇನೆ. ನಿಮ್ಮಂಥ ನೀಚ ಬುದ್ಧಿ ನನ್ನಗಿಲ್ಲ ಎಂದು ಹೇಳುವುದ್ದಲ್ಲದೆ ಇಬ್ಬರನ್ನೂ ಥಳಿಸಿ ಬುದ್ದಿ ಹೇಳುವ ಸನ್ನಿವೇಶವನ್ನು ರಾಮನಗರದ ಬಳಿಯಿರುವ ದೇಗುಲದ ಬಳಿ ನಿರ್ದೇಶಕ ಸಾಯಿಪ್ರಕಾಶ್ ಚಿತ್ರೀಕರಿಸಿಕೊಂಡರು. ಡಿಫರೆಂಟ್‌ಡ್ಯಾನಿ ಈ ಮೇಲಿನ ಸನ್ನಿವೇಶಕ್ಕೆ ಸಾಹಸ ಸಂಯೋಜಿಸಿದ್ದಾರೆ.

  ರಮೇಶ್‌ಕಶ್ಯಪ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಇಳಯರಾಜ ಸಂಗೀತ ಸಂಯೋಜಿಸುತ್ತಿದ್ದಾರೆ. ಪಿ.ಕೆ.ಎಚ್ ದಾಸ್ ಕ್ಯಾಮೆರಾ, ಮಳವಳ್ಳಿ ಸಾಯಿಕೃಷ್ಣ ಸಂಭಾಷಣೆ, ನಾಗೇಂದ್ರಪ್ರಸಾದ್, ಆನಂದ್ ಗೀತರಚನೆ, ಲಿಂಗರಾಜ್ ಕಗ್ಗಲ್ ಸಹನಿರ್ದೇಶನ, ಪಿ.ಆರ್.ಸೌಂದರರಾಜ್ ಸಂಕಲನ, ಮಧುಗಿರಿಪ್ರಕಾಶ್ ನಿರ್ಮಾಣನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ಶಿವರಾಜಕುಮಾರ್, ಆದರ್ಶ, ಆದಿಲೋಕೇಶ್, ಸತ್ಯಜಿತ್, ಸುಮಿತ್ರ, ಅಮೃತ, ಪದ್ಮಾವಾಸಂತಿ, ರಮೇಶ್‌ಭಟ್, ಶೋಭಾರಾಘವೇಂದ್ರ, ಪ್ರಕಾಶ್‌ಹೆಗ್ಗೋಡು, ಸುರೇಶ್ಚಂದ್ರ, ಮಳವಳ್ಳಿಸಾಯಿಕೃಷ್ಣ, ಸುರೇಶ್‌ಮಂಗಳೂರು ಅಭಿನಯಿಸುತ್ತಿರುವುದು ಗೊತ್ತೇ ಇದೆ. ಬೆಡಗಿ ನವ್ಯಾನಾಯರ್ ಬಳೆಗಾರನ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

  (ದಟ್ಸ್ ಕನ್ನಡ ಚಿತ್ರವಾರ್ತೆ)
  ರೇಷ್ಮೆ ನಗರದಲ್ಲಿ ಭಾಗ್ಯದ ಬಳೆಗಾರನ ಸಂಚಾರ

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X