»   »  ದುಬೈ ಬಾಬು ಹಾಗೂ ತಾಕತ್ತು ನೋಡಿ ಆನಂದಿಸಿ

ದುಬೈ ಬಾಬು ಹಾಗೂ ತಾಕತ್ತು ನೋಡಿ ಆನಂದಿಸಿ

Subscribe to Filmibeat Kannada
Vijay and Shubha
ಬುದ್ಧಿವಂತ ನಂತರ ಉಪೇಂದ್ರ ಮತ್ತೆ ಚಿತ್ರ ವಿಚಿತ್ರ ವೇಷಭೂಷಣಗಳನ್ನು ತೊಟ್ಟು 'ದುಬಾಯ್ ಬಾಬು ' ಆಗಿ ಪ್ರೇಕ್ಷಕರನ್ನು ರಂಜಿಸಲು ಈ ವಾರ ಬರುತ್ತಿದ್ದಾರೆ. ಇವರ ಜೊತೆಗೆ ಹಳ್ಳಿಹೈದನಾಗಿ ದುನಿಯಾ ಖ್ಯಾತಿಯ ವಿಜಯ್ ತಮ್ಮ 'ತಾಕತ್ತು' ಏನೆಂದು ತೋರಿಸಲು ತುದಿಗಾಲಲ್ಲಿ ನಿಂತಿದ್ದಾರೆ. ಉಪ್ಪಿಗೆ ನಿಖಿತಾ ಜೋಡಿಯಾದರೆ, ವಿಜಿಯ ಅದೃಷ್ಟ ಕನ್ಯೆ ಶುಭಾ ಪೂಂಜಾ ತಾಕತ್ ನಲ್ಲಿ ಸಾಥಿಯಾಗಿದ್ದಾರೆ.

ಕಳೆದವಾರ ಯಾವುದೇ ಹೊಸ ಚಿತ್ರ ನೋಡುವ ಭಾಗ್ಯ ಕನ್ನಡ ಪ್ರೇಕ್ಷಕರಿಗೆ ಸಿಗದ ಕಾರಣ. ಈ ವಾರ ಬಿಡುಗಡೆ ಆಗುವ ಚಿತ್ರಗಳ ಮೇಲೆ ನಿರೀಕ್ಷೆ ಹೆಚ್ಚಿದೆ. ಈ ವಾರ ಮೂರು ಹೊಸ ಚಿತ್ರಗಳು ಬೆಳ್ಳಿತೆರೆಯನ್ನು ಅಲಂಕರಿಸಲಿದೆ. ದುಬಾಯ್ ಬಾಬು, ತಾಕತ್ ಜೊತೆಗೆ ಬಹುದಿನಗಳ ನಂತರ ರಾಮಕುಮಾರ್ ಹಾಗೂ ಅಭಿಜಿತ್ ಅಭಿನಯದ ಜೋಡಿ ನಂಬರ್ 1 ಚಿತ್ರಬಿಡುಗಡೆಯಾಗಲಿದೆ.

ಶೈಲೇಂದ್ರ ಬಾಬು ಪ್ರೊಡಕ್ಷನ್ ಅವರು ಕುಟುಂಬ, ಗೌರಮ್ಮ ನಂತರ ದುಬೈ ಬಾಬು ವನ್ನು ಗೆಲ್ಲಿಸಲು ಹೆಸರಾಂತ ಚಿತ್ರಮಂದಿರಗಳನ್ನು ಹಿಡಿದಿದ್ದಾರೆ. ಬೆಂಗಳೂರಿನ ಕಪಾಲಿ, ನವರಂಗ್, ಪ್ರಸನ್ನ, ಉಮಾ, ಗೋವರ್ಧನ್, ಪಿವಿಆರ್, ವಿಷನ್ ಸಿನಿಮಾಸ್, ಭಾರತಿ, ರಾಜೇಶ್ವರಿ, ವೈಷ್ಣವಿ, ಸಿದ್ದೇಶ್ವರ, ಆದರ್ಶ, ಕೃಷ್ಣ ಇನ್ನಿತರ ಚಿತ್ರಮಂದಿರಗಳು.

ತಾಕತ್ ಚಿತ್ರ, ಸಂತೋಷ್, ಪ್ರಮೋದ್, ನಂದಿನಿ, ನಳಂದಾ, ಈಶ್ವರಿ, ಸಿದ್ದಲಿಂಗೇಶ್ವರ, ಮೋಹನ್, ಬಾಲಾಜಿ, ನರಸಿಂಹ, ಮಾನಸ, ಗಣೇಶ್ , ಪಿವಿಆರ್ ಸೇರಿದಂತೆ ಪ್ರಮುಖ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.

(ದಟ್ಸ್ ಕನ್ನಡ ಸಿನಿವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada