For Quick Alerts
ALLOW NOTIFICATIONS  
For Daily Alerts

ಯೋಗರಾಜ ಬಟ್ ಕ್ಲೈಮ್ಯಾಕ್ಸ್ ಒಂದು ಹೊಸ ಪ್ರಯತ್ನ

By * ವಿಜಿ ಪಾಟೀಲ, ದಾವಣಗೆರೆ
|

ಯೋಗರಾಜ... ಬಟ್ ಚಿತ್ರದ ಕ್ಲೈಮ್ಯಾಕ್ಸ್ ಕನ್ನಡ ಚಿತ್ರರಂಗದಲ್ಲೊಂದು ಹೊಸ ರೀತಿಯ ಪ್ರಯತ್ನಕ್ಕೆ ಸಾಕ್ಷಿಯಾಗಲಿದ್ದು, ಇದನ್ನು ಪ್ರೇಕ್ಷಕರು ಸಹ ಒಪ್ಪುತ್ತಾರೆ ಎಂಬ ಭರವಸೆ ಇದೆ ಎಂದು ಚಿತ್ರದ ನಾಯಕ ನಟ ನವೀನ ಕೖಷ್ಣ ಭರವಸೆ ವ್ಯಕ್ತಪಡಿಸಿದರು.

ದಾವಣಗೆರೆ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯೋಗರಾಜ ಭಟ್ ಜು.22ಕ್ಕೆ ತೆರೆ ಕಾಣಲಿದೆ. ಈ ಚಿತ್ರವನ್ನು ದಯಾಳ್ ಪದ್ಮನಾಭ ನಿರ್ದೇಶಿಸಿದ್ದು, ಇದೊಂದು ಸೈಕಾಲಜಿ ಓದಿದ ಆಸ್ಟ್ರಾಲಜಿ ವೖತ್ತಿ ನಂಬಿಕೊಂಡ ಹುಡುಗ ಹಾಗೂ ಸಿದ್ಧಗಂಗ ಮಠದಲ್ಲಿ ಓದುತ್ತಿದ್ದ ಅನಾಥೆ ಯುವತಿಯೊಬ್ಬಳ ನಡುವೆ ನಡೆಯುವ ಪ್ರೇಮಕಥೆ. ಈ ಚಿತ್ರದ ಅಂತಿಮ 18 ನಿಮಿಷದವರೆಗೆ ಒಂದು ಸಾಧಾರಣ ಪ್ರೇಮಕಥೆಯಂತೆ ಇರುತ್ತದೆ ಎಂದರು.

ಅಂತಿಮ 18 ನಿಮಿಷದ ಕಥೆ ಇಡೀ ಚಿತ್ರದ ದಿಕ್ಕನ್ನು ಬದಲಿಸಿಬಿಡುತ್ತದೆ. ನಮ್ಮ ತಂದೆ ಶ್ರೀನಿವಾಸ ಮೂತಿ೯ ಒಬ್ಬ ಅವಧೂತನ ಪಾತ್ರ ಮಾಡಿದ್ದಾರೆ. ಅವರ ಪಾತ್ರ, ನನ್ನ ಪಾತ್ರ, ಸುಚೇಂದ್ರ ಪ್ರಸಾದರ ಪಾತ್ರಗಳು ಆ ಅಂತಿಮ 18 ನಿಮಿಷದಲ್ಲಿ ಕಾಣಿಸಿಕೊಳ್ಳುತ್ತವೆ.

ಸುಚೇಂದ್ರಪ್ರಸಾದರ ಲವಲವಿಕೆಯುಕ್ತ ನಟನೆ, ನಮ್ಮ ತಂದೆಯವರ ಮನೋಜ್ಞ ಅಭಿನಯ ಹಾಗೂ ನನ್ನ ಪಾತ್ರದ ಫಮಾ೯ಮೆನ್ಸ್ ಪ್ರೇಕ್ಷಕರಿಗೆ ಒಂದು ರೀತಿಯ ಹೊಸ ಅನುಭವ ನೀಡುತ್ತದೆ ಎಂದು ಹೇಳಿದರು.

ದಯಾಳ ಪದ್ಮನಾಭ ಈ ಹಿಂದೆ ಗಾಳಿಪಟ, ಸಖ ಸಖಿಯಂತಹ ಚಿತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಈ ಚಿತ್ರವನ್ನು ನಿದೇ೯ಶಿಸುವುದರ ಜೊತೆಗೆ ನಿಮಾ೯ಣ ಸಹ ಮಾಡಿದ್ದಾರೆ.

ನಾನು ದಿಮಾಕು ಚಿತ್ರದ ನಂತರ ಅಂತಹುದ್ದೇ ಒಂದು ಪಾತ್ರದಲ್ಲಿ ಕಾಣಸಿಕೊಂಡಿದ್ದೇನೆ. ದಿಮಾಕಿನಲ್ಲಿ ನಾಡಿನ ಸಾಹಿತಿಗಳ ಹೆಸರು ಹೇಳಿದಂತೆ ಈ ಚಿತ್ರದಲ್ಲಿ ಇಡೀ ಕನ್ನಡ ಚಿತ್ರರಂಗದ ದಿಗ್ಗಜರ ಹೆಸರುಗಳನ್ನು ಪಟ ಪಟನೇ ಹೇಳಿದ್ದಾರೆ. ಭವಿಷ್ಯ ಅದು ಸಹ ಚಿತ್ರದ ಹೈಲೆಟ್ ಆಗಲಿದೆ.

ನಾಯಕಿ ನೀತೂ ಸಹ ಅದ್ಭುತವಾಗಿ ಅಭಿನಯಿಸಿದ್ದಾರೆ. ಒಂದು ದಿನ ಮಾತ್ರ ಭೇಟಿಯಾಗುವ ನಾಯಕಿ, ನಾಯಕನೊಂದಿಗೆ ಒಂದು ಬಾಂಧವ್ಯ ಬೆಳಿಸಿಕೊಳ್ಳುತ್ತಾಳೆ. ಆ ಬಾಂಧವ್ಯ, ಪ್ರೀತಿ ಎಂದು ತಿಳಿಯುತ್ತಲೇ ಅದನ್ನು ಹೇಳಲು ಹಿಂಜರಿಯುತ್ತಾಳೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಅದರಲ್ಲಿ ಎರಡಕ್ಕೆ ನಾನು ಸಾಹಿತ್ಯ ಒದಗಿಸಿದ್ದೇನೆ. ಸುನಕ, ಸುನನ ಹಾಡನ್ನು ಗೋವಾದಲ್ಲಿ ಚಿತ್ರೀಕರಿಸಿದೆ ಎಂದು ತಿಳಿಸಿದರು.

English summary
Yograj Kannada Movie Press Meet held in Davangere. Actor Naveen Krishna praised director Dayal Padmanabha's skills and said final 18 mins of the movie climax is very different and will enthrill audience.

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more