For Quick Alerts
  ALLOW NOTIFICATIONS  
  For Daily Alerts

  ರಂಗನಾಯಕಿ ಮೆಚ್ಚಿದ ಮಂಡ್ಯದ ಗಂಡು ಅಂಬರೀಷ್

  |

  ಮಂಡ್ಯದ ಗಂಡು, ರೆಬೆಲ್ ಸ್ಟಾರ್ ಅಂಬರೀಷ್ ಮನದಲ್ಲಿ ಇಷ್ಟೂ ದಿನ ಅವಿತುಕೊಂಡಿದ್ದ ಗುಟ್ಟೊಂದು ಇದೀಗ ಜಗಜ್ಜಾಹೀರಾಗದೆ. 200 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಅಂಬಿಗೆ ಇಷ್ಟವಾದ ಚಿತ್ರ ಯಾವುದೆಂದು ಯಾರಿಗೂ ಇಷ್ಟು ದಿನ ಗೊತ್ತಿರಲಿಲ್ಲ. ತಮ್ಮ ಮೆಚ್ಚಿನ ಚಿತ್ರ 'ರಂಗನಾಯಕಿ' ಎಂಬುದನ್ನು ಪತ್ರಕರ್ತರೊಬ್ಬರ ಪ್ರಶ್ನೆಗೆ ಉತ್ತರವಾಗಿ ಅಂಬರೀಷ್ ಹೇಳಿದ್ದಾರೆ.

  Ambarish

  ಆರತಿ, ಅಶೋಕ್ ಹಾಗೂ ಅಂಬರೀಷ್ ತಾರಾಗಣದ ಈ ಚಿತ್ರದಲ್ಲಿ ಮಾಡಿದ ಪಾತ್ರ, ಸ್ವತ ಅಂಬರೀಷ್ ಅವರಿಗೆ ತುಂಬಾ ಇಷ್ಟವಾಗಿದೆ. ಪ್ರೇಕ್ಷಕರಂತೂ ಈ ಚಿತ್ರದಲ್ಲಿ ಅಂಬಿಯ ಅಭಿನಯಕ್ಕೆ ಮಾರುಹೋಗಿದ್ದರು. ಪುಟ್ಟಣ್ಣ ಕಣಗಾಲ್ ನಿರ್ದೇಶನದ ರಂಗನಾಯಕಿ ಚಿತ್ರ ಆ ಕಾಲದ ಸೂಪರ್ ಹಿಟ್ ಚಿತ್ರ. ಅಷ್ಟೇ ಅಲ್ಲ, ಕನ್ನಡ ಚಿತ್ರರಂಗ ಎಂದೂ ಮರೆಯಲಾಗದ ಚಿತ್ರವೂ ಹೌದು. 40 ವರ್ಷಗಳ ಅಂಬರೀಷ್ ವೃತ್ತಿಜೀವನದಲ್ಲಿ ರಂಗನಾಯಕಿ ಒಂದು ಮೈಲಿಗಲ್ಲು ಕೂಡ ಹೌದು.

  ಅಂದಹಾಗೆ, ಕನ್ನಡದ ಈ ರೆಬೆಲ್ ಸ್ಟಾರ್ ಇಷ್ಟಪಟ್ಟ ಚಿತ್ರಗಳ ಪಟ್ಟಿಯಲ್ಲಿ ಮಸಣದ ಹೂವುಗಳು, ಮೋಹಕ ತಾರೆ ಮಾಲಾಶ್ರೀ, ಭವ್ಯ ಜೊತೆ ಅಭಿನಯಿಸಿದ 'ಹೃದಯ ಹಾಡಿತು ಹಾಗೂ ಸುಧಾರಾಣಿ ಜೋಡಿಯ 'ಮಣ್ಣಿನ ದೋಣಿ' ಚಿತ್ರಗಳು ಕೂಡ ಸೇರಿವೆ. ಹೃದಯ ಹಾಡಿತು ಚಿತ್ರದಲ್ಲಿಯ ಅಂಬಿ ನಟನೆಗೆ ಪ್ರೇಕ್ಷಕರಿಂದಲೂ ಪ್ರಶಂಸೆಯ ಸುರಿಮಳೆಯಾಗಿದೆ. (ಒನ್ ಇಂಡಿಯಾ ಕನ್ನಡ)

  English summary
  Actor Rebel Star Ambarish told that his favorite movie is 'Ranganayaki'. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X