»   » ಕೋಮಲ್ ಗೂ ತುಂಡುಬಟ್ಟೆಗೂ ಅದೇನು ಸಂಬಂಧ?

ಕೋಮಲ್ ಗೂ ತುಂಡುಬಟ್ಟೆಗೂ ಅದೇನು ಸಂಬಂಧ?

Posted By:
Subscribe to Filmibeat Kannada
Komal kumar
ಕೋಮಲ್ ನಾಯಕತ್ವದ ಚಿತ್ರಗಳಿಗೂ ತುಂಡುಡುಗೆಗೂ ಅದೇನು ನಂಟೋ! ಅವರ ಚಿತ್ರಗಳ ನಾಯಕಿಯರು ಈ ತುಂಡು ಬಟ್ಟೆಯ ಬಗ್ಗೆ ದೂರು ಹೇಳುವುದು ಮಾಮೂಲಿ ಆಗುತ್ತಿದೆ. ಚಮ್ಕಾಯ್ಸಿ ಚಿಂದಿ ಉಡಾಯ್ಸಿ ಚಿತ್ರದಲ್ಲಿ ವಿಷಯಕ್ಕೆ ನಿಧಿ ಸುಬ್ಬಯ್ಯ ಕೋಪ ಮಾಡಿಕೊಂಡಿದ್ದರು. ಇದೀಗ ಕರೋಡ್ ಪತಿ ಚಿತ್ರದ ನಾಯಕಿಯರಲ್ಲೊಬ್ಬರಾದ ಪ್ರಿಯಾ ಸರದಿ. ಇದಕ್ಕೆ ಕಾರಣ ಕೋಮಲ್ ಅಲ್ಲವೇ ಅಲ್ಲ. ಆದರೆ ಅವರ ಚಿತ್ರಗಳಿಗೇ ಯಾಕೆ ಹೀಗೆ?

"ನನಗೆ ಮಿನಿ ಸ್ಕರ್ಟ್ ಮತ್ತು ಹಾಟ್ ಪ್ಯಾಂಟುಗಳನ್ನು ಹಾಕಿ ಅಂತ ಬಲವಂತ ಮಾಡಲಾಯ್ತು. ಕೌಟುಂಬಿಕ ಪಾತ್ರ ಅಂತ ಹೇಳಿದ್ದ ನಿರ್ದೇಶಕರು, ಚಿತ್ರೀಕರಣ ಸಂದರ್ಭದಲ್ಲಿ ಬಣ್ಣ ಬದಲಾಯಿಸಿದರು. ನನಗೆ ಸೆಕ್ಸಿ ಪಾತ್ರಗಳನ್ನು ಮಾಡಲು ಆಸಕ್ತಿಯಿಲ್ಲ. ಅಲ್ಲದೆ, ಈ ಚಿತ್ರದಲ್ಲಿ ನಾನೊಬ್ಬಳೇ ನಾಯಕಿ ಅಂತ ಹೇಳಲಾಗಿತ್ತು. ಆದರೆ ಬಂದು ನೋಡಿದರೆ, ಎಲ್ಲವೂ ಉಲ್ಟಾ-ಪಲ್ಟಾ" ಎಂದಿದ್ದಾರೆ ಪ್ರಿಯಾ.

ನಿಮಗ್ಯಾಕೆ ತುಂಡುಬಟ್ಟೆ ಮೋಹ ಎಂದು ನಿರ್ದೇಶಕ ಶ್ರೀ ರಮೇಶ್‌ರನ್ನು ಕೇಳಿದರೆ " ಹಾಗೇನೂ ಇಲ್ಲ. ಚಿತ್ರದ ಕಥೆಗೆ ಅದು ಅಗತ್ಯವಿದೆ, ಮೊದಲೇ ಪಾತ್ರದ ಬಗ್ಗೆ ವಿವರಿಸಲಾಗಿತ್ತು. ಈ ಪಾತ್ರ ಆಧುನಿಕ ದಿರಿಸುಗಳನ್ನು ತೊಡಬೇಕಾಗುತ್ತದೆ ಎಂದು ಹೇಳಿದ್ದೆವು. ಅದಕ್ಕೆ ಪ್ರಿಯಾ ಒಪ್ಪಿಕೊಂಡಿದ್ದರು. ಆದರೆ ಸೆಟ್‌ಗೆ ಬಂದ ಮೇಲೆ ನಿರಾಕರಿಸಿದರು" ಎಂದು ವಾದ ಮಂಡಿಸಿದರು.

ನಿರ್ದೇಶಕ ಶ್ರೀ ರಮೇಶ್, "ಪ್ರಿಯಾಗೆ ತುಂಡು ಬಟ್ಟೆಗಳನ್ನು ಹಾಕಲು ಯಾವುದೇ ಆಕ್ಷೇಪಗಳಿರಲಿಲ್ಲ. ಆಕೆಯ ಹೆತ್ತವರಿಂದ ಆಕ್ಷೇಪ ಎದುರಾಯ್ತು. ಅವರು ಒಪ್ಪಿಗೆ ಸೂಚಿಸದೇ ಇದ್ದುದರಿಂದ ಪ್ರಿಯಾ ಚಿತ್ರದಿಂದ ಹಿಂದಕ್ಕೆ ಸರಿದರು. ಹಾಗಂತ ಸ್ವತಃ ಪ್ರಿಯಾ ಅವರೇ ನನಗೆ ಹೇಳಿಕೊಂಡರು" ಎಂದು ಸೀಕ್ರೆಟ್ ಹೇಳುವಂತೆ ಮೆಲ್ಲನೆ ಉಸುರುತ್ತಾರೆ. ಇಬ್ಬರಲ್ಲಿ ಯಾರು ಊಸರವಳ್ಳಿ ಎಂಬುದು ಗೊತ್ತಾಗುತ್ತಿಲ್ಲ. (ಒನ್ ಇಂಡಿಯಾ ಕನ್ನಡ)

English summary
Actor Komal Kumar movie 'Karodpati' has big hot controversy news. That is complaint of actress Priya for given Mini Dress to her for shooting. 
 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada