»   » 'ಹನುಮ'ನ ಜಿಗಿತದಂತಾದ ರಾಗಿಣಿ ಸಂಭಾವನೆ

'ಹನುಮ'ನ ಜಿಗಿತದಂತಾದ ರಾಗಿಣಿ ಸಂಭಾವನೆ

Posted By:
Subscribe to Filmibeat Kannada
Ragini Dwivedi
ಕನ್ನಡ ನಟಿಯರಿಗೆ ಸಿಹಿಸುದ್ದಿ. ಕೇವಲ ಮೂರು ವರ್ಷಗಳಲ್ಲಿ ಕನ್ನಡ ಸಿನಿಮಾಗಳಲ್ಲಿ ನಟಿಸಿ ಎತ್ತರೆತ್ತರಕ್ಕೆ ಏರಬಹುದು ಹಾಗೂ ಬರೋಬ್ಬರಿ 30 ಲಕ್ಷ ಸಂಭಾವನೆ ಎಣಿಸಬಹುದು. ಹೊಸದಿಲ್ಲಿ ಮೂಲದ ರಾಗಿಣಿ ದ್ವಿವೇದಿ, ಕನ್ನಡದಲ್ಲಿ ನಟಿಸಿದ ಮೊದಲ ಚಿತ್ರ 'ಹೋಳಿ' ಅದನ್ನು ಜನ ಹೋಗಲಿ ಎಂದು ಕಳಿಸಿದರೂ ನಾಯಕಿ ರಾಗಿಣಿ ಕನ್ನಡದಲ್ಲಿ ನಟಿಯಾಗಿ ನೆಲೆಕಂಡರು.

ಇದೀಗ ಕನ್ನಡದ ಮೂರು ನಾಯಕಿಯರು ಎರಡಂಕಿ ಸಂಭಾವನೆ ದಾಟಿದಂತಾಗಿದೆ. ಈ ಮೊದಲು ಆ ಲಿಸ್ಟ್ ನಲ್ಲಿ ರಮ್ಯಾ ಹಾಗೂ ಐಂದ್ರಿಯಾ ರೇ ಆಸೀನರಾಗಿದ್ದರು. ಕನ್ನಡದ ವೀರ ಮದಕರಿ, ಶಂಕರ್ ಐಪಿಎಸ್ ಹಾಗೂ ಕೆಂಪೇಗೌಡ ಚಿತ್ರಗಳಲ್ಲಿ ನಟಿಸರುವ ರಾಗಿಣಿಯನ್ನು ಕನ್ನಡದ ಜನ ಮೆಚ್ಚಿದ್ದಾರೆ. ಈಕೆಗೆ ಅವಕಾಶಗಳ ಬಾಗಿಲು ಸಾಕಷ್ಟು ಹೆಚ್ಚಾಗಿದೆ.

ತೀರಾ ಇತ್ತೀಚಿಗೆ 'ಕಳ್ಳ ಮಳ್ಳ ಸುಳ್ಳ' ಚಿತ್ರದಲ್ಲಿ 'ತುಪ್ಪ ಬೇಕೆ ತುಪ್ಪ' ಎಂದು ಕುಣಿದ ರಾಗಿಣಿ ಸ್ಯಾಂಡಲ್ ವುಡ್ ನಲ್ಲಿ ಸಖತ್ ಫೇಮಸ್. ಇದೀಗ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಸಂಬಂಧಿ ಅರ್ಜುನ್ ನಾಯಕತ್ವದ ಚಿತ್ರ 'ಹನುಮ'ದಲ್ಲಿ ಬರೋಬ್ಬರಿ ರು. 30 ಲಕ್ಷ ಪಡೆಯುವದರೊಂದಿಗೆ ಕನ್ನಡದ ಟಾಪ್ ನಟಿಯರ ಸಾಲಿಗೆ ಸೇರಿದ್ದಾರೆ. (ಒನ್ ಇಂಡಿಯಾ ಕನ್ನಡ)

English summary
Ragini Dwivedi the New Delhi based actress who made debut in 2009 'Holi' in less than three years has secured the top position in remuneration. She is Ragini is paid Rs.30 lakhs plus at 20 plus age for 'Hanuma' Kannada film in which Arjun a relative of former chief minister HD Kumaraswamy plays the lead.
 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada