»   »  ಆಪ್ತಮಿತ್ರ ನಾಗವಲ್ಲಿ ಪಾತ್ರದ ಬಗ್ಗೆ 'ಸಂಧ್ಯಾ'ರಾಗ

ಆಪ್ತಮಿತ್ರ ನಾಗವಲ್ಲಿ ಪಾತ್ರದ ಬಗ್ಗೆ 'ಸಂಧ್ಯಾ'ರಾಗ

Subscribe to Filmibeat Kannada
ವಿಷ್ಣುವರ್ಧನ್ ಅವರ 200ನೇ ಚಿತ್ರ 'ಆಪ್ತ ರಕ್ಷಕ'ದ ನಾಯಕಿಯಾಗಿ ಸ್ನೇಹಾ ಆಯ್ಕೆಯಾಗಿದ್ದರು. ಈಗ ಆಕೆಯ ಸ್ಥಾನಕ್ಕೆ ಸಂಧ್ಯಾ ನಾಯಕಿಯಾಗಿ ಆಗಮಿಸಿದ್ದಾರೆ. ಆಪ್ತಮಿತ್ರ ಚಿತ್ರದಲ್ಲಿ ನಾಗವಲ್ಲಿಯಾಗಿ ಸೌಂದರ್ಯ ಅದ್ಭುತವಾಗಿ ನಟಿಸಿದ್ದರು. ಆ ಪಾತ್ರಕ್ಕೆ ಸಂಧ್ಯಾ ಎಷ್ಟರ ಮಟ್ಟಿಗೆ ನ್ಯಾಯ ಒದಗಿಸುತ್ತಾರೆ? ಈ ಕುರಿತು ಸಂಧ್ಯಾ ಹೇಳುವುದೇನು...

''ನಟಿ ಸ್ನೇಹಾ ಅವರ ಡೇಟ್ಸ್ ಸಿಕ್ಕದ ಕಾರಣ ಆಪ್ತ ರಕ್ಷಕ ಚಿತ್ರಕ್ಕೆ ನನ್ನನ್ನು ಆಯ್ಕೆ ಮಾಡಲಾಯಿತು. ಆಪ್ತಮಿತ್ರ ಮೂಲ ಚಿತ್ರವನ್ನು ನಾನು ಮಲೆಯಾಳಂನಲ್ಲಿ ನೋಡಿದ್ದೇನೆ. ಆದರೆ ಕನ್ನಡದಲ್ಲಿ ನೋಡಿಲ್ಲ. ಸೌಂದರ್ಯ ನಟನೆ ಮೆಚ್ಚುವವರಲ್ಲಿ ನಾನು ಒಬ್ಬಳು. ಆಕೆ ಅಭಿನಯಿಸಿದ ಬಹಳಷ್ಟು ಚಿತ್ರಗಳನ್ನು ನೋಡಿದ್ದೇನೆ. ಚಂದ್ರಮುಖಿ ಚಿತ್ರದಲ್ಲಿ ಜ್ಯೋತಿಕಾ ಅಭಿನಯ ಸಹ ಅದ್ಭುತವಾಗಿತ್ತು. ಆ ರೀತಿಯ ಪಾತ್ರ ಮಾಡಲು ಎಲ್ಲರಿಂದಲೂ ಸಾಧ್ಯವಾಗುವುದಿಲ್ಲ.ಈ ಅವಕಾಶ ನನಗೆ ಸಿಕ್ಕಿರುವುದು ನಿಜಕ್ಕೂ ನನ್ನ ಅದೃಷ್ಟ'' ಎನ್ನುತ್ತಾರೆ ಸಂಧ್ಯಾ.

''ನಾಗವಲ್ಲಿ ಪಾತ್ರದ ಕಾರಣ ಆಪ್ತಮಿತ್ರ ಚಿತ್ರಎಲ್ಲ ಭಾಷೆಗಳಲ್ಲಿ ಹಿಟ್ ಆಯಿತು. ಆ ಪಾತ್ರ ಪೋಷಣೆಗೆ ನೃತ್ಯ ಕೌಶಲ್ಯ ಬೇಕಾಗುತ್ತದೆ. ಒಂದು ವರ್ಷದಿಂದ ನೃತ್ಯ ತರಬೇತಿಯನ್ನು ಪಡೆಯುತ್ತಿದ್ದೇನೆ. ಖಂಡಿತ ನಾನು ಈ ಪಾತ್ರಕ್ಕೆ ನ್ಯಾಯ ಸಲ್ಲಿಸುತ್ತೇನೆ ಎಂಬ ವಿಶ್ವಾಸ ನನಗಿದೆ. ಸೌಂದರ್ಯ ಪಾತ್ರದ ಗುಂಗಿನಿಂದ ಪ್ರೇಕ್ಷಕರು ಇನ್ನೂ ಹೊರಬಂದಿಲ್ಲ. ನನ್ನದೇ ಆದ ಶೈಲಿಯಲ್ಲಿ ಆ ಪಾತ್ರವನ್ನು ನಿರ್ವಹಿಸುತ್ತೇನೆ'' ಎನ್ನುತ್ತಾರೆ ಸಂಧ್ಯಾ. ಕನ್ನಡಲ್ಲಿ ಸಂಧ್ಯಾ ನಟಿಸುತ್ತಿರುವ ಎರಡನೇ ಚಿತ್ರ ಇದು. ಶಿವರಾಜ್ ಕುಮಾರ್ ಅವರೊಡನೆ ನಟಿಸಿದ್ದ 'ನಂದ' ಅವರ ಮೊದಲ ಚಿತ್ರ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಆಪ್ತರಕ್ಷಕ ವಿಷ್ಣುವರ್ಧನ್ ಗೆ ಜತೆಯಾದ ನಿಖಿತಾ
ಅಂದು ಆಪ್ತಮಿತ್ರ ಇಂದು ಆಪ್ತರಕ್ಷಕನಾದ ವಿಷ್ಣು
ಎಲೆಮರೆಯ ಹಾಡು ಹಕ್ಕಿಗಳಿಗೆ ವಿಷ್ಣು ಆಹ್ವಾನ!
ವಿಷ್ಣುವರ್ಧನ್ ಪ್ರಶ್ನೆಗೆ ಜಯಮಾಲಾ ನೇರ ಉತ್ತರ

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada