ಈ ವಾರ ಚಿತ್ರಮಂದಿರಗಳಲ್ಲಿ ಕದನ ಕುತೂಹಲ!
ಕಳೆದ ವಾರ ಬಿಡುಗಡೆಯಾದ ಮೂರು ಚಿತ್ರಗಳನ್ನು ಸಹಿಸಿಕೊಳ್ಳುವ ಮುಂಚೆಯೇ ಮತ್ತೊಂದು ಸುದ್ದಿ ಪ್ರೇಕ್ಷಕರಿಗೆ ಹಬ್ಬದೂಟ ಹಾಕಿಸಲು ರೆಡಿಯಾಗಿದೆ. ಪೂಜಾಗಾಂಧಿಯ 'ಆಪ್ತ' ಚಿತ್ರ ಕಳೆದವಾರವೇ ಬರಬೇಕಿತ್ತು. ಅದು ಈ ವಾರ ತೆರೆದುಕೊಳ್ಳುತ್ತಿದೆ. ಮತ್ತೊಂದು ಪದ್ಮನಾಭ ಅವರ 'ಟೇಕ್ ಇಟ್ ಈಜಿ'. ಇದು ಹಾಸ್ಯ ಚಿತ್ರ ಎನ್ನುತ್ತಾರೆ ನಿರ್ದೇಶಕರು.
ಮತ್ತೊಂದು 'ಯುವ' ಚಿತ್ರದಲ್ಲಿ ಫೈಟ್ ಮಾಡಿ ಗಮನ ಸೆಳೆದಿದ್ದ ಕಾರ್ತಿಕ್ ಅಭಿನಯದ 'ಕಾರ್ತಿಕ್'. ಇನ್ನೊಂದು ಹರೀಶ್‌ರಾಜ್ ನಟಿಸಿ, ನಿರ್ದೇಶಿಸಿರುವ 'ಗನ್' ಚಿತ್ರ. ಮತ್ತೊಂದು-ಎರಡೂವರೆ ವರ್ಷದಿಂದ ತೆರೆಕಾಣಲು ತವಕಿಸುತ್ತಿದ್ದ 'ಸಾಚಾ' ಚಿತ್ರ. ನಿರ್ಮಾಪಕ ಮಾದೇಶ್ ಅವರ ಅನಿರೀಕ್ಷಿತ ಸಾವಿನಿಂದಾಗಿ 'ಸಾಚಾ' ಸಾಕ್ಷಾತ್ಕಾರ ಇನ್ನೂ ಆಗಿರಲಿಲ್ಲ.
ಈ ಐದರಲ್ಲಿ ಒಂದು ಅಥವಾ ಎರಡು ಮುಂದಿನ ವಾರಕ್ಕೆ ಜಂಪ್ ಆದರೆ ಆಶ್ಚರ್ಯವಿಲ್ಲ. ಏನೇ ಆದರೂ ಜನಕ್ಕೆ ಮಾತ್ರ ಜಾತ್ರೆ ಗ್ಯಾರಂಟಿ. ವಿಶ್ವಕಪ್ ಬೇರೆ ನಡೆಯುತ್ತಿರುವುದರಿಂದ ಈ ಐವರ ಕತೆ ಏನಾಗುತ್ತೋ ಎನ್ನುವುದು ಗಾಂಧೀನಗರ ಗಾತ್ರದ ಪ್ರಶ್ನೆ!
More from Filmibeat
English summary
This week (Feb 25, 2011) five Kannada films are ready to hit the screen. Aptha (Pooja Gandhi), Karthik (Karthik), Gun (Harish Raj), Saacha (Vicky) and Take It Easy (Ananth Padmanabha direction) were releasing. It is going to be tough competition and majority of them are small films.


Click it and Unblock the Notifications











