»   »  ರೇಡಿಯೋ ಮಿರ್ಚಿಯಲ್ಲಿ ಗಣೇಶನ ಸರ್ಕಸ್!

ರೇಡಿಯೋ ಮಿರ್ಚಿಯಲ್ಲಿ ಗಣೇಶನ ಸರ್ಕಸ್!

Subscribe to Filmibeat Kannada
Ganesh in Circus
ಎಫ್ ಎಂ ರೇಡಿಯೊ ಕೇಳುಗರಿಗೊಂದು ಸಂತಸದ ಸುದ್ದಿ. ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ'ಸರ್ಕಸ್' ಚಿತ್ರದಹಾಡುಗಳು ಬೆಂಗಳೂರಿನ ಸಖತ್ ಹಾಟ್ ರೇಡಿಯೊ ಕೇಂದ್ರ 'ರೇಡಿಯೊ ಮಿರ್ಚಿ 98.3 ಎಫ್ ಎಂ'ನಲ್ಲಿ ತೇಲಿ ಬರಲಿವೆ!

'ರೇಡಿಯೊ ಮಿರ್ಚಿ 98.3 ಎಫ್ ಎಂ' ಕೇಂದ್ರ ಸರ್ಕಸ್ ಚಿತ್ರದ ಸುಮಧುರಗೀತೆಗಳನ್ನು ಶ್ರೋತೃಗಳಿಗೆ ಕೇಳಿಸಲು ಒಪ್ಪಂದ ಮಾಡಿಕೊಂಡಿದೆ. ರೇಡಿಯೊ ಮಿರ್ಚಿಯಲ್ಲಿ 'ಸರ್ಕಸ್' ಚಿತ್ರದ ಗೀತೆಗಳನ್ನು ಆಲಿಸುವುದರ ಜತೆಗೆ ಚಿತ್ರತಂಡದೊಂದಿಗೆ ಸಂವಾದ, ಆನ್ ಏರ್ ಸ್ಪರ್ಧೆಯಲ್ಲಿ ಪಾಲ್ಗೊಂಡು ಆಕರ್ಷಕ ಬಹುಮಾನಗಳನ್ನು ಗೆಲ್ಲಬಹುದು.

ದಯಾಳ್ ಪದ್ಮನಾಭನ್ ನಿರ್ದೇಶನದ 'ಸರ್ಕಸ್' ಚಿತ್ರಕ್ಕೆ 'ನಂದ ನಂದಿತಾ' ಖ್ಯಾತಿಯ ಎಮಿಲ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಅರ್ಚನಾ ಗುಪ್ತ ಚಿತ್ರದ ಮುಖ್ಯ ಪಾತ್ರಧಾರಿಗಳು. ಹೆಚ್ಚಿನ ಮಾಹಿತಿಗಾಗಿ ನಿಮ್ಮ ರೇಡಿಯೊವನ್ನು 98.3 ಎಫ್ ಎಂಗೆ ಟ್ಯೂನ್ ಮಾಡಿಕೊಳ್ಳಿ!

(ದಟ್ಸ್ ಕನ್ನಡ ಚಿತ್ರವಾರ್ತೆ)

ಪೂರಕ ಓದಿಗೆ
ಸರ್ಕಸ್‌ನಲ್ಲಿ ಸಖತ್ತಾಗಿ 'ರೈಲು' ಬಿಟ್ಟಿರುವ ದಯಾಳ್
ದಯಾಳ್ ನಿರ್ದೇಶನದ ಸರ್ಕಸ್ ಚಿತ್ರದ ಟ್ರೈಲರ್
ರಜನಿ ಪುತ್ರಿಯ ಗಮನ ಸೆಳೆದ ದಯಾಳ್ ಸರ್ಕಸ್

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada