»   » ತೆಲುಗು, ತಮಿಳು ಬಾಗಿಲು ತಟ್ಟಿದ ದೀಪಾ ಸನ್ನಿಧಿ

ತೆಲುಗು, ತಮಿಳು ಬಾಗಿಲು ತಟ್ಟಿದ ದೀಪಾ ಸನ್ನಿಧಿ

Posted By:
Subscribe to Filmibeat Kannada

ಕನ್ನಡ ಚಿತ್ರರಂಗದಲ್ಲಿ ಕಂಪು ಬೀರುತ್ತಿರುವ ಮಲೆನಾಡ ಮಲ್ಲಿಗೆ ದೀಪಾ ಸನ್ನಿಧಿ ಈಗ ಆಂಧ್ರ ಹಾಗೂ ತಮಿಳುನಾಡಿನಲ್ಲೂ ಪರಿಮಳ ಬೀರಲು ಹೊರಟಿದ್ದಾರೆ. ಈಗಾಗಲೆ ಹೈದರಾಬಾದ್ ಹಾಗೂ ಚೆನ್ನೈಗೆ ಭೇಟಿ ನೀಡಿ ಅಲ್ಲಿನ ನಿರ್ಮಾಪಕರೊಂದಿಗೆ ಮಾತನಾಡಿಕೊಂಡು ಬಂದಿದ್ದಾರೆ. ಅಲ್ಲಿಂದ ಯಾವಾಗ ಕರೆ ಬರುತ್ತದೋ ಗೊತ್ತಿಲ್ಲ.

ಸದ್ಯಕ್ಕೆ ಅವರು ಕರೆಯ ನಿರೀಕ್ಷೆಯಲ್ಲಿದ್ದು ತೆಲುಗು, ತಮಿಳು ಚಿತ್ರಗಳಿಗೆ ಸಹಿ ಹಾಕುವ ಉತ್ಸಾಹದಲ್ಲಿದ್ದಾರೆ. ಇಷ್ಟಕ್ಕೂ ಆಕೆ ಪರಭಾಷಾ ಚಿತ್ರಗಳಿಗೆ ಜಿಗಿಯಲು ಕಾರಣ ಏನು? ಇಲ್ಲಿ ಅವಕಾಶಗಳಿಗೇನು ಆಕೆಗೆ ಬರವಿಲ್ಲ. ಆದರೆ ಅವಕಾಶಗಳನ್ನು ಇನ್ನಷ್ಟು ಬಾಚಿಕೊಳ್ಳುವ ಸಲುವಾಗಿ ತೆಲುಗು, ತಮಿಳು ಚಿತ್ರರಂಗದ ಬಾಗಿಲು ತಟ್ಟಿದ್ದಾರೆ ಅಷ್ಟೇ.

ದೀಪಾ ಅಭಿನಯದ ಎರಡು ಬಿಗ್ ಬಜೆಟ್ ಚಿತ್ರಗಳು ಬಾಕ್ಸಾಫೀಸಲ್ಲಿ ಸಕ್ಸಸ್ ಆಗಿದ್ದು ಗೊತ್ತೇ ಇದೆ. ಅವುಗಳಲ್ಲಿ ಪುನೀತ್ ಜೊತೆಗಿನ 'ಪರಮಾತ್ಮ' ಹಾಗೂ ದರ್ಶನ್ ಜೊತೆಗಿನ 'ಸಾರಥಿ' ಚಿತ್ರಗಳು. ಯಶ್ ಜೊತೆ 'ಜಾನೂ' ಮುಗಿಸಿದ ಬಳಿಕ ಇದೀಗ ಸುದೀಪ್ ಜೊತೆಗಿನ ಬಚ್ಚನ್ ಚಿತ್ರಕ್ಕೂ ದೀಪಾ ಆಯ್ಕೆಯಾಗಿದ್ದಾರೆ. ಒಟ್ಟಿನಲ್ಲಿ ಸ್ಯಾಂಡಲ್‌ವುಡ್‌ನಲ್ಲಿ 'ಲಕ್ಕಿ' ಸ್ಟಾರ್ ಎಂದು ಗುರುತಿಸಿಕೊಂಡಿದ್ದಾರೆ. (ಏಜೆನ್ಸೀಸ್)

English summary
Kannada actress Deepa Sannidhi is looking at trying her hand in Tamil and Telugu cinema too. “I recently went to Hyderabad and Chennai to audition. If they like my performance, they will call me. I will wait for that.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada