»   » ಮೈಲಾರಿಗೆ ಜೊತೆಯಾದ ಗಂಡಹೆಂಡತಿ ಸಂಜನಾ

ಮೈಲಾರಿಗೆ ಜೊತೆಯಾದ ಗಂಡಹೆಂಡತಿ ಸಂಜನಾ

Posted By:
Subscribe to Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಾಯಕ ನಟನಾಗಿ ಅಭಿನಯಿಸುತ್ತಿರುವ 'ಮೈಲಾರಿ' ಚಿತ್ರಕ್ಕೆ 'ಗಂಡಹೆಂಡತಿ' ಖ್ಯಾತಿಯ ಸಂಜನಾ ಆಯ್ಕೆಯಾಗಿದ್ದಾರೆ. ಶಿವಣ್ಣನ ಜೊತೆ ಮೋಹಕ ತಾರೆ ಸದಾ ನಟಿಸಲಿದ್ದಾರೆ ಎಂಬ ಸುದ್ದಿ ಸದ್ಯಕ್ಕೆ ಸುಳ್ಳಾಗಿದೆ. ಮೈಲಾರಿ ಚಿತ್ರದಲ್ಲಿ ನಟಿಸಲು ಅವಕಾಶ ಸಿಕ್ಕಿದ್ದಕ್ಕೆ ಸಂಜನಾ ಸಂತಸ ವ್ಯಕ್ತಪಡಿಸಿದ್ದಾರೆ.

ಚಿತ್ರದಲ್ಲಿ ಸಂಜನಾ ಪತ್ರಕರ್ತೆಯಾಗಿ ಕಾಣಿಸಲಿದ್ದಾರೆ. ಆರ್ ಎಸ್ ಪ್ರೊಡಕ್ಷನ್ಸ್ ಕಂಪನಿ ಎಂಟರ್ ಪ್ರೈಸಸ್ ಲಾಂಛನದಲ್ಲಿ ಚಿತ್ರವನ್ನು ನಿರ್ಮಿಸಲಾಗುತ್ತಿದೆ. ಚಿತ್ರಕ್ಕೆ ಆಕ್ಷನ್, ಕಟ್ ಹೇಳುತ್ತಿರುವವರು ತಾಜ್ ಮಹಲ್ ಖ್ಯಾತಿಯ ಆರ್ ಚಂದ್ರು. ಗುರುಕಿರಣ್ ಸಂಗೀತ ಚಿತ್ರಕ್ಕಿದೆ.

'ಗಂಡ ಹೆಂಡತಿ' ಚಿತ್ರದಲ್ಲಿ ಹಿಂದಿಯ 'ಮರ್ಡರ್' ಚಿತ್ರದ ಮಲ್ಲಿಕಾ ಶೇರಾವತ್‌ಳನ್ನೂ ನಾಚಿಸುವಂತೆ ನಟನಾವರಸೆಗಳನ್ನು 'ತೆರೆದಿಟ್ಟಿದ್ದ'ರು ಸಂಜನಾ. ಗಂಡ ಹೆಂಡತಿ ತಮಿಳಿಗೂ ಡಬ್ ಆಗಿ ಅಲ್ಲಿಯೂ ಸಂಜನಾರಿಗೆ ಸಾಕಷ್ಟು 'ಹೆಸರು' ತಂದುಕೊಂಟ್ಟಿತ್ತು.

ಸಂಜನಾ ಅಪ್ಪಟ ಕನ್ನಡತಿ. ಅರಳುಹುರಿದಂತೆ ಕನ್ನಡದಲ್ಲಿ ಮಾತನಾಡುತ್ತಾರೆ. ಕನ್ನಡ ಬರೆಯಲು, ಓದಲು ಕೂಡ ಗೊತ್ತು. ಜಾಹಿರಾತು ಜಗತ್ತಿನ ಎಬಿಸಿಡಿಯೂ ಗೊತ್ತು ಆದರೆ ಗೊತ್ತಿಲ್ಲದಿರುವುದು ನಟನೆ ಅಂತ ಅವರೇ ಒಪ್ಪಿಕೊಳ್ಳುತ್ತಾರೆ. ಶಿವಣ್ಣನ ಜೊತೆ ಸಂಜನಾ ಅಭಿನಯ ಹೇಗಿರುತ್ತದೆ ಎಂಬುದನ್ನು ಕಾದುನೋಡಬೇಕು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada