»   » ಇಲಿಯಾನಾ ನಿಮ್ಮ ಮೈಮಾಟಕ್ಕೆ 1.25 ಕೋಟಿ ಕಮ್ಮೀನಾ?

ಇಲಿಯಾನಾ ನಿಮ್ಮ ಮೈಮಾಟಕ್ಕೆ 1.25 ಕೋಟಿ ಕಮ್ಮೀನಾ?

Posted By:
Subscribe to Filmibeat Kannada

ಗೋವಾ ಬೆಡಗಿ ಇಲಿಯಾನಾ ಡಿ"ಕ್ರೂಜ್ ಕಂಡರೆ ಓ ಅವಳಾ ಎಂದು ಎಲ್ಲರೂ ಉದ್ಗಾರ ತೆಗೆಯುವವರೆ, ಹಠಮಾರಿ ಹೆಣ್ಣು, ಜಂಭದ ಕೋಳಿ ಎಂದೆಲ್ಲಾ ದಕ್ಷಿಣ ಭಾರತದಲ್ಲಿ ಫೇಮಸ್ ಆಗಿದ್ದರೂ, ಸಂಭಾವನೆ ವಿಷಯದಲ್ಲಿ ಆಕೆಯನ್ನು ಮೀರಿಸುವವರು ಇನ್ನೂ ಯಾರಿಲ್ಲ. ತ್ರಿಶಾ, ಅನುಷ್ಕಾ ಶೆಟ್ಟಿ ಅಲ್ಲದೆ ಇತ್ತೀಚೆಗೆ ಬಂದ ಕಾಜಲ್ ಅಗರ್ ವಾಲ್, ತಮನ್ನಾರನ್ನು ಹಿಂದಿಕ್ಕಿ ಕೋಟಿ ಬೆಲೆ ಬಾಳುವ ನಟಿಮಣಿ ಎಂಬ ಮುಕುಟವನ್ನು ಇಲಿಯಾನಾ ಧರಿಸಿದ್ದಾರೆ.

ಇಲಿಯಾನಾ: ಇತ್ತೀಚೆಗೆ ಈಕೆ ಚಿತ್ರಗಳು ಸೋತಿದ್ದರೂ, ಬೇಡಿಕೆ ಒಂಚೂರು ಕಮ್ಮಿಯಾಗಿಲ್ಲ. ಕನಿಷ್ಠವೆಂದರೂ 1.25 ಕೋಟಿ ರು ಪ್ರತಿ ಚಿತ್ರಕ್ಕೆ ಪಡೆಯುತ್ತಿದ್ದಾಳೆ. ಇದರ ಜೊತೆಗೆ 25 ರಿಂದ 40 ಲಕ್ಷ ಇತರೆ ವೆಚ್ಚಗಳ ಪಟ್ಟಿಯಲ್ಲಿ ಸೇರುತ್ತದೆ. ತಮಿಳಿನ ನನ್ಬನ್ ಹಾಗೂ ಬಾಲಿವುಡ್ ನಲ್ಲಿ ಬರ್ಫಿ ಚಿತ್ರದ ಗೆಲುವಿಗಾಗಿ ಇಲಿಯಾನಾ ಕಾದಿದ್ದಾರೆ. ಇಲಿಯಾನಾ ಸಪೂರ ಸೊಂಟ ಹಾಗೂ ಹಾವ ಭಾವಕ್ಕೆ ಹೆಚ್ಚು ಸಂಭಾವನೆ, ನಟನೆಯಲ್ಲಿ ಇನ್ನೂ ಪಳಗಬೇಕಿದೆ ಎಂಬ ಸುದ್ದಿಯಿದೆ.

ತ್ರಿಶಾ ಕೃಷ್ಣನ್: ಬಾಲಿವುಡ್ ನಲ್ಲಿ ಕಟ್ಟಾ ಮಿಟ್ಟಾ ಸೋಲಿನ ನಂತರ ಮತ್ತೆ ಕಾಲಿವುಡ್ ಕಡೆ ತಿರುಗಿದ ಮತ್ತೊಬ್ಬ ಸಪೂರ ಸುಂದರಿ ತ್ರಿಶಾ, ಕೂಡಾ 1 ಕೋಟಿ ಆಸು ಪಾಸಿನಲ್ಲಿ ಸಂಭಾವನೆ ಪಡೆಯುತ್ತಿದ್ದಾಳೆ. ರಿಮೇಕ್ ಕ್ವಿನ್ ಎಂದು ಖ್ಯಾತಿಯಾಗಿದ್ದ ತ್ರಿಶಾ, ಆ ಟ್ಯಾಕ್ ನಿಂದ ಇನ್ನೂ ಹೊರ ಬಂದಿಲ್ಲ. ಲವ್ ಆಜ್ ಕಲ್ ತೆಲುಗು ರಿಮೇಕ್ ತೀನ್ ಮಾರ್, ಮಲೆಯಾಳಂ ಬಾಡಿಗಾರ್ಡ್ ತೆಲುಗು ರಿಮೇಕ್ ಚಿತ್ರಗಳಲ್ಲದೆ ಅಜಿತ್ ಅವರ ಮಹತ್ವಾಕಾಂಕ್ಷೆ ಚಿತ್ರ ಮಂಗಾಥದಲ್ಲಿ ನಟಿಸುತ್ತಿದ್ದಾರೆ.

ಅನುಷ್ಕಾ ಶೆಟ್ಟಿ: ಇತ್ತೀಚೆಗೆ ಗಾಸಿಪ್ ಕಾಲಂನಲ್ಲಿ ಹೆಚ್ಚು ಓಡಾಡುತ್ತಿರುವ ಬೆಂಗಳೂರು ಬೆಡಗಿ, ಬಾಲಿವುಡ್ ಅವಕಾಶ ನಿರಾಕರಿಸಿ ತೆಲುಗು, ತಮಿಳಿನಲ್ಲಿ ಉಳಿದಿದ್ದಾರೆ. ಮೂಲಗಳ ಪ್ರಕಾರ 1 ಕೋಟಿ ರು ಸಂಭಾವನೆ ಸಿಗುತ್ತಿದೆ. ಪ್ರಭಾಸ್ ಜೊತೆ ರೆಬೆಲ್ ಹಾಗೂ ವಿಕ್ರಮ್ ಜೊತೆ ದೈಅ ತಿರುಮಗಳ್ ಚಿತ್ರದ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಕಾಜಲ್ ಅಗರ್ ವಾಲ್: ಮಗಧೀರ ಹಾಗೂ ಆರ್ಯ 2 ಚಿತ್ರಗಳ ಮೂಲಕ ಭರ್ಜರಿ ಪ್ರವೇಶ ಪಡೆದ ಕಾಜಲ್, ನಂತರ ಮಿಂಚಲಿಲ್ಲ. ಡಾರ್ಲಿಂಗ್, ಬೃಂದಾವನಂ ಅಲ್ಲದೆ ನಾನ್ ಮಹಾನ್ ಅಲ್ಲ ಸಾಧಾರಣ ಯಶಸ್ಸು ಹೆಚ್ಚಿನ ಲಾಭ ತರಲಿಲ್ಲ. ಮಿ. ಫರ್ಫೆಕ್ಟ್ ನಲ್ಲಿ ಉತ್ತಮ ನಟನೆ ಮೂಲಕ ಮಿಂಚಿದ ಕಾಜಲ್ ನಂ.1 ಸ್ಥಾನದ ಮೇಲೆ ಕಣ್ಣಿಟ್ಟಿದ್ದಾಳೆ. ಅನುಷ್ಕಾ ಕೈ ತಪ್ಪಿದ ಅವಕಾಶ ಬಾಚಿಕೊಂಡು ಅಜಯ್ ದೇವಗನ್ ಜೊತೆ ಸಿಂಗಂ ಚಿತ್ರದಲ್ಲಿ ಕುಣಿಯುತ್ತಿದ್ದಾಳೆ. ಪವನ್ ಕಲ್ಯಾಣ್ ಜೊತೆ ಗಬ್ಬರ್ ಸಿಂಗ್, ಮಹೇಶ್ ಬಾಬು ಜೊತೆ ದ ಬಿಸಿನೆಸ್ ಮ್ಯಾನ್ ಚಿತ್ರಗಳು ಕೈಲಿದ್ದು, 90 ಲಕ್ಷದಿಂದ 1 ಕೋಟಿಗೆ ರೇಟ್ ಏರಿಸಿದ್ದಾಳೆ.

ತಮನ್ನಾ ಭಾಟಿಯಾ: ಭವಿಷ್ಯದ ತಾರೆ ಎಂದು ಎಲ್ಲರಿಂದ ಹೊಗಳಿಸಿಕೊಳ್ಳುತ್ತಿರುವ ತಮನ್ನಾಗೆ ಈ ವರ್ಷ ಚೆನ್ನಾಗಿದೆ. ತಮಿಳಿನಲ್ಲಿ ಚಿರುತೈ ಹಾಗೂ ಕೋ ಮತ್ತು ತೆಲುಗಿನಲ್ಲಿ 100% ಲವ್ ಸಕ್ಸಸ್ ಆಗಿದೆ. ಬದ್ರಿನಾಥ್ ವಿಮರ್ಶಕರಿಂದ ಬೈಯಿಸಿಕೊಂಡರೂ ದುಡ್ಡು ಮಾಡುತ್ತಿದೆ. ಜೂ.ಎನ್ ಟಿಆರ್ ಜೊತೆ ಊಸರವಳ್ಳಿ, ರಾಮ್ ಚರಣ್ ತೇಜ ಜೊತೆ ಹೆಸರಿಡದ ಚಿತ್ರ ಅಲ್ಲದೆ ತಮಿಳಿನಲ್ಲಿ ಧನುಷ್ ಜೊತೆ ವೆಂಗೈ ಚಿತ್ರ ಕೈಲಿದೆ. 75 ರಿಂದ 80 ಲಕ್ಷ ಇದ್ದ ರೇಟ್ ಇದ್ದು, 1 ಕೋಟಿ ಮುಟ್ಟುವ ಎಲ್ಲಾ ಲಕ್ಷಣಗಳು ಕಂಡು ಬಂದಿವೆ.

ಉಳಿದಂತೆ ಆಸೀನ್, ಜೆನಿಲಿಯಾ ಡಿ ಸೋಜಾ, ಸಮೀರಾ ರೆಡ್ಡಿ ಬಾಲಿವುಡ್ ನಲ್ಲಿ ನೆಲೆವೂರಿದ್ದಾರೆ. ಹಂಸಿಕಾ ಮೋತ್ವಾನಿ, ತಾಪಸಿ ನಿಧಾನವಾಗಿ ಮೆಟ್ಟಲೇರುತ್ತಿದ್ದು 40 ಲಕ್ಷರು ಆಸು ಪಾಸಿನಲ್ಲಿ ಸಂಭಾವನೆ ಪಡೆಯುತ್ತಿದ್ದಾರೆ. ಕನ್ನಡದ ನಟಿ ಮಣಿಯರ ವಿಷಯಕ್ಕೆ ಬಂದರೆ ಸಂಭಾವನೆ 40 ಕ್ಕಿಂತ ಕಮ್ಮಿ ಇದೆ. ಇಲಿಯಾನಾಗೆ ಕೊಡೋ ದುಡ್ಡಲ್ಲಿ ನಾಲ್ಕು ಅವಾರ್ಡ್ ಮೂವಿ, ಎರಡು ಕಮರ್ಷಿಯಲ್ ಮೂವಿ ಮಾಡ್ಬುದು ಹೋಗ್ರಿ ಎಂದು ಗಾಂಧಿನಗರದ ಮಂದಿ ಗೊಣಗುತ್ತಿದ್ದಾರೆ.

English summary
Ileana D'Cruz has managed to top the remuneration chart. The Goan beauty has overtaken Southern actresses like Trisha Krishnan and Anushka Shetty to become the highest paid lass of the regional film industry

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada