»   » ಜೋಶ್ ರಾಕೇಶ್ 'ಡವ್' ಮಾಡ್ತಾರಂತೆ ನೋಡ್ರೀ!

ಜೋಶ್ ರಾಕೇಶ್ 'ಡವ್' ಮಾಡ್ತಾರಂತೆ ನೋಡ್ರೀ!

Posted By:
Subscribe to Filmibeat Kannada

ಅಲೆಮಾರಿ ಚಿತ್ರ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ, ನಿರ್ಮಾಪಕ ಬೆಂಕೋಶ್ರೀ ಹಾಗೂ ನಿರ್ದೇಶಕ ಸಂತು ಮುಂದಿನ ಚಿತ್ರಕ್ಕೆ ಸ್ಕೆಚ್ ಹಾಕಿದ್ದಾರೆ. ಚಿತ್ರದ ಹೆಸರು 'ಡವ್'. ಚಿತ್ರತಂಡ ಚಿತ್ರಕಥೆಯನ್ನು ಸಿದ್ಧಪಡಿಸುತ್ತಿದೆ. ಅದಕ್ಕಾಗಿ ಆರು ತಿಂಗಳು ಕಾಲಾವಕಾಶ ನಿಗದಿ ಮಾಡಿಕೊಂಡಿದೆ.

ಚಿತ್ರತಂಡ ನಾಯಕನನ್ನು ಅಳೆದು ತೂಗಿ ಆಯ್ಕೆ ಮಾಡಿಕೊಂಡಿದೆ. ಕಾರಣ ಚಿತ್ರತಂಡವೇ ಹೇಳಿಕೊಂಡಂತೆ, ಕಥೆ ಸಿದ್ಧವಾಗುವ ಆರು ತಿಂಗಳೂ ಚಿತ್ರತಂಡದ ಜೊತೆಗೇ ಇರಲು ಸಾದ್ಯವಿರುವ ನಾಯಕನೇ ಅವರ 'ಡವ್'ಗೆ ಬೇಕಂತೆ. ಇದೀಗ ಅಷ್ಟು ವೇಳೆ ಇರುವ ನಾಯಕ 'ಡವ್'ಗೆ ದೊರಕಿದ್ದಾರೆ. ಅವರು ಜೋಶ್ ಚಿತ್ರದಲ್ಲಿ ನಾಯಕರಾಗಿದ್ದು ಅಲೆಮಾರಿಯಲ್ಲಿ ವಿಲನ್ ಆಗಿ ಮಿಂಚಿರುವ ರಾಕೇಶ್ ಅಡಿಗ.

ಅಲೆಮಾರಿಯಲ್ಲಿ ಖಳನಾಯಕನ ಪಾತ್ರಕ್ಕೆ ಸಂಪೂರ್ಣ ಜೀವತುಂಬಿ ನಟಿಸಿ ಪ್ರೇಕ್ಷಕರ ಮನಗೆದ್ದಿರುವ ರಾಕೇಶ್, ಈಗ ಚಾಕ್ಲೇಟ್ ಬಾಯ್ ಇಮೇಜಿನಿಂದ ಹೊರಬಂದಿದ್ದಾರೆ. ಅಲೆಮಾರಿಯಲ್ಲಿ ರಾಕೇಶ್ ಅಭಿನಯ ನಿರ್ದೇಶಕ ಸಂತೂಗೆ ಇಷ್ಟವಾಗಿದೆಯಂತೆ. ಹಾಗಾಗಿ, ರಾಕೇಶ್ ಗೆ ಮಣೆ ಹಾಕಲಾಗಿದೆ. ನಾಯಕಿ ಆಯ್ಕೆ ಇನ್ನಷ್ಟೇ ನಡೆಯಬೇಕಿದೆ. (ಒನ್ ಇಂಡಿಯಾ ಕನ್ನಡ)

English summary
Josh Fame actor Rakesh acts in the movie Dove. Alemari director Santhu Directs this. 
 

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X