»   »  ಬ್ರೇಕಿಂಗ್ ನ್ಯೂಸ್! ಕನ್ನಡಕ್ಕೆ ನಾನಾ ಪಾಟೇಕರ್!

ಬ್ರೇಕಿಂಗ್ ನ್ಯೂಸ್! ಕನ್ನಡಕ್ಕೆ ನಾನಾ ಪಾಟೇಕರ್!

Subscribe to Filmibeat Kannada

ಕನ್ನಡ ಚಿತ್ರರಂಗಕ್ಕೊಂದು ಬ್ರೇಕಿಂಗ್ ನ್ಯೂಸ್! ರಾಷ್ಟ್ರ ಪ್ರಶಸ್ತಿ ವಿಜೇತ ಬಾಲಿವುಡ್ ನಟ ನಾನಾ ಪಾಟೇಕರ್ ಕನ್ನಡದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ನಿಜವಾಗಿದೆ. ಇದೇ ಮೊದಲ ಬಾರಿಗೆ ಅವರು ಕನ್ನಡದ 'ಯಕ್ಷ' ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ. ಈ ಮೂಲಕ ನಾನಾ ಪಾಟೇಕರ್ ನಟಿಸಲಿರುವ ಮೊದಲ ಕನ್ನಡಚಿತ್ರ 'ಯಕ್ಷ' ಆಗಲಿದೆ.

ದಕ್ಷಿಣ ಭಾರತದಲ್ಲಿ ನಾನಾ ಪಾಟೇಕರ್ ನಟಿಸುತ್ತಿರುವ ಎರಡನೇ ಚಿತ್ರ ಇದಾಗಲಿದೆ. ಸಾಮಿ ಅಸೋಸಿಯೇಟ್ಸ್ ನ ಟಿ ಪಿ ಸಿದ್ಧರಾಜು(ನಟ ಯೋಗೇಶ್ ತಂದೆ) ಈ ಚಿತ್ರದ ನಿರ್ಮಾಪಕರು. ಯಕ್ಷ ಚಿತ್ರಕ್ಕೆ ನಿರ್ದೇಶನದ ಜತೆಗೆ ರಮೇಶ್ ಆರ್ ಭಾಗವತ್ ಅವರು ಕತೆ, ಚಿತ್ರಕತೆಯನ್ನು ರಚಿಸಿದ್ದಾರೆ.

ಯೋಗೀಶ್, ನಾನಾ ಪಾಟೇಕರ್, ಅತುಲ್ ಕುಲಕರ್ಣಿ, ಕಲಾಭವನ್ ಮಣಿ ತಾರಾಗಣದ ಈ ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ಸಂಯೋಜಿಸುತ್ತಿದ್ದಾರೆ. ಗಾಂಧಿ ಜಯಂತಿ (ಅಕ್ಟೋಬರ್ 2)ಯಂದು ಯಕ್ಷ ಚಿತ್ರ ಸೆಟ್ಟೇರಲಿದೆ ಎಂದು ಚಿತ್ರದ ನಿರ್ದೇಶಕ ರಮೇಶ್ ಆರ್ ಭಾಗವತ್ ತಿಳಿಸಿದ್ದಾರೆ.

ಈ ಹಿಂದೆ 'ಪೆರೋಲ್' ಚಿತ್ರಕ್ಕೆ ನಾನಾ ಪಾಟೇಕರ್ ಅವರನ್ನು ಕರೆತರುವ ಪ್ರಯತ್ನ ನಡೆದಿತ್ತು. ಪೆರೋಲ್ ಚಿತ್ರವನ್ನು ಸಂಕಲನಕಾರ ಸುರೇಶ್ ಅರಸ್ ನಿರ್ಮಿಸುತ್ತಿರುವುದು ಗೊತ್ತೇ ಇದೆ. ನಾನಾ ಪಾಟೇಕರ್ ತಮ್ಮ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಆಶಾಭಾವವನ್ನು ಅವರು ವ್ಯಕ್ತಪಡಿಸಿದ್ದರು. ಇದೀಗ ನಾನಾ ಅವರು 'ಪೆರೋಲ್' ಮೂಲಕ ಅಲ್ಲದಿದ್ದರೂ 'ಯಕ್ಷ'ನಾಗಿ ಕನ್ನಡಕ್ಕೆ ಆಗಮಿಸುತ್ತಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada