»   » ನಯನತಾರಾ ಕಟ್ಟಕಡೆಯ ಚಿತ್ರ ಉಪೇಂದ್ರ ಸೂಪರ್?

ನಯನತಾರಾ ಕಟ್ಟಕಡೆಯ ಚಿತ್ರ ಉಪೇಂದ್ರ ಸೂಪರ್?

Posted By:
Subscribe to Filmibeat Kannada

ನಯನತಾರಾ ಚಿತ್ರರಂಗಕ್ಕೆ ವಿದಾಯ ಹೇಳಲಿದ್ದಾರೆಯೇ? ರಿಯಲ್ ಸ್ಟಾರ್ ಉಪೇಂದ್ರ ಜೊತೆ ನಟಿಸುತ್ತಿರುವ 'ಸೂಪರ್' ಆಕೆಯ ಕೊನೆಯ ಚಿತ್ರವಾಗಲಿದೆಯೇ? ಹೌದು ಎಂಬ ಅನುಮಾನ ಚಿತ್ರೋದ್ಯಮದಲ್ಲಿ ಕಾಡುತ್ತಿದೆ. ಇದಕ್ಕೆ ನಿದರ್ಶನವೆಂಬಂತೆ ಆಕೆ ಸಹ ಯಾವುದೇ ಹೊಸ ಚಿತ್ರಗಳಲ್ಲಿ ಅಭಿನಯಿಸಲು ಒಪ್ಪಿಕೊಳ್ಳುತ್ತಿಲ್ಲ.

ಭಾರತದ ಮೂಳೆ ರಹಿತ ಮಾನವ ಎಂದೇ ಖ್ಯಾತರಾಗಿರುವ ನೃತ್ಯ ನಿರ್ದೇಶಕ ಪ್ರಭುದೇವ ಅವರನ್ನು ನಯನತಾರಾ ವರಿಸಲಿದ್ದಾರೆ ಎಂಬ ಸುದ್ದಿಯೂ ಇದೆ. ಹಾಗಾಗಿ ಸದ್ಯಕ್ಕೆ ಆಕೆ ಒಪ್ಪಿಕೊಂಡಿರುವ ಚಿತ್ರಗಳನ್ನು ಆದಷ್ಟು ಬೇಗನೆ ಮುಗಿಸಿ ಪ್ರಭುದೇವ ಜೊತೆ ಸೆಟ್ಲ್ ಆಗುವ ಯೋಚನೆ ಆಕೆಯ ಮನಸ್ಸಿನಲ್ಲಿದೆ ಎನ್ನಲಾಗಿದೆ.

ತೆಲುಗು ಚಿತ್ರರಂಗದಲ್ಲಿ ಯಾವುದೇ ಚಿತ್ರವನ್ನು ನಯನತಾರಾ ಒಪ್ಪಿಕೊಂಡಿಲ್ಲ. ಆಕೆ ಅಭಿನಯದ ಇತ್ತೀಚಿನ 'ಸಿಂಹ 'ಹಾಗೂ 'ಅದುರ್ಸ್' ಚಿತ್ರಗಳು ಆಂಧ್ರ ಬಾಕ್ಸಾಫೀಸ್ ಗಳಿಕೆಯಲ್ಲಿ ಸದ್ದು ಮಾಡಿವೆ. ವಿಷಯ ಹೀಗಿದ್ದರೂ ಆಕೆ ತೆಲುಗಿನ ಯಾವುದೇ ಹೊಸ ಚಿತ್ರಕ್ಕೆ ಸಹಿಹಾಕದೆ ಇರುವುದು ಹಲವರ ಹುಬ್ಬೇರಿಸಿದೆ.

ಸದ್ಯಕ್ಕೆ ಮಲಯಾಳಂನ ಒಂದೇ ಒಂದು ಚಿತ್ರದಲ್ಲಿ ನಯನತಾರಾ ಅಭಿನಯಿಸುತ್ತಿದ್ದಾರೆ. ಈಗಾಗಲೆ ಮದುವೆಯಾಗಿರುವ ಪ್ರಭುದೇವ ವಿವಾಹ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಆದಷ್ಟು ಬೇಗ ನಯತಾರಾ ಹಾಗೂ ಪ್ರಭುದೇವ ಮದುವೆ ಮೂಲಕ ಒಂದಾಗಲು ಸಿದ್ಧತೆ ನಡೆಸಿದ್ದಾರೆ ಎಂಬ ಸುದ್ದಿ ಪ್ರಚಾರ ಪಡೆಯುತ್ತಿದೆ.

ಉಪೇಂದ್ರ ಜೊತೆ ನಟಿಸುತ್ತಿರುವ ತ್ರಿಭಾಷಾ ಚಿತ್ರ ಸೂಪರ್ ಬಿಡುಗಡೆಯಾದ ಬಳಿಕ ನಯನತಾರಾ ಚಿತ್ರರಂಗಕ್ಕೆ ವಿದಾಯ ಹೇಳುವ ಸಾಧ್ಯತೆಯಿದೆ. ಪ್ರಭುದೇವ ಚಿತ್ರದ ಕಾರ್ಯಕ್ರಮಗಳಲ್ಲಿ ನಯನತಾರಾ ಹೆಚ್ಚಾಗಿ ಕಾಣಿಸುತ್ತಿದ್ದಾರೆ. ಇತ್ತೀಚೆಗೆ ಕೊಚ್ಚಿಯಲ್ಲಿ ನಡೆದ ಮದುವೆಯೊಂದರಲ್ಲೂ ಈ ಜೋಡಿ ಎಲ್ಲರ ಕಣ್ಣಿಗೆ ಬಿದ್ದಿತ್ತು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada