»   »  ಅಂಬಿಕಾ, ರಾಧಾ ಮತ್ತೀಗ ಕಾರ್ತಿಕಾ ಪ್ರವೇಶ

ಅಂಬಿಕಾ, ರಾಧಾ ಮತ್ತೀಗ ಕಾರ್ತಿಕಾ ಪ್ರವೇಶ

Posted By:
Subscribe to Filmibeat Kannada

80 ರ ದಶಕದಲ್ಲಿ ದಕ್ಷಿಣ ಭಾರತ ಚಿತ್ರರಂಗವನ್ನಾಳಿದ ಅಂಬಿಕಾ, ರಾಧಾ ಸೋದರಿಯರನ್ನು ಯಾರು ಮರೆವರು ಹೇಳಿ. ಈಗ ರಾಧ ಅವರ ಸುಪುತ್ರಿ ಕಾರ್ತಿಕಾ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾಳೆ. ಅಮ್ಮ ಹಾಗೂ ದೊಡ್ಡಮ್ಮರಂತೆ ತಾನು ಚಿತ್ರರಂಗದಲ್ಲಿ ವಿಭಿನ್ನ ಪಾತ್ರಗಳನ್ನು ಮಾಡಿ ಸೈ ಎನಿಸಿಕೊಳ್ಳುವೆ ಎನ್ನುತ್ತಾ ಗ್ಲಾಮರ್ ಜಗತ್ತಿಗೆ ಪ್ರವೇಶಿಸಿದ್ದಾರೆ.

ತೆಲುಗು ಚಿತ್ರರಂಗದ 'ಪ್ರೇಮ'ನಟ ಅಕ್ಕ್ಕಿನೇನಿ ನಾಗೇಶ್ವರ ರಾವ್ ಅವರ ಮೊಮ್ಮಗ ನಾಗ ಚೈತನ್ಯ ಕೂಡ, ಕಾರ್ತಿಕಾ ಜೊತೆಗೆ ಚಿತ್ರರಂಗದ ಕದ ತಟ್ಟುತ್ತಿದ್ದಾರೆ. ಇಬ್ಬರು ನಟಿಸಿರುವ ತೆಲುಗಿನ ಹೊಸ ಚಿತ್ರ 'ಜೋಶ್' ಗೆ ಹೊಸ ನಿರ್ದೇಶಕ ವಾಸು ವರ್ಮಯನ್ನು ಆಯ್ಕೆ ಮಾಡಿದ್ದಾರೆ ಡಬಲ್ ಹ್ಯಾಟ್ರಿಕ್ ನಿರ್ಮಾಪಕದಿಲ್ ರಾಜ್.ಬೊಮ್ಮರಿಲ್ಲು ಮುಂತಾದ ಯಶಸ್ವಿ ಚಿತ್ರಗಳಿಗೆ ಸಹಾಯಕರಾಗಿದ್ದ ವಾಸು ವರ್ಮಸ್ವತಂತ್ರ ನಿರ್ದೇಶಕರಾಗಿ ಪ್ರಥಮ ಅನುಭವ. ಇನ್ನು ಈಗಾಗಲೆ ಬೊಮ್ಮರಿಲ್ಲು ಹ್ಯಾಪಿ ಡೇಸ್ ಮುಂತಾದ ಯಶಸ್ವಿ ಚಿತ್ರ ನಿರ್ಮಿಸಿ ಡಬಲ್ ಹ್ಯಾಟ್ರಿಕ್ ಗಳಿಕೆ ಮಾಡಿರುವ ನಿರ್ಮಾಪಕರ ಇತ್ತೀಚಿನ ಎರಡು ಚಿತ್ರಗಳು ಹಿಟ್ ಆಗಿರುವುದರಿಂದ ಈ ಚಿತ್ರ ಯಶಸ್ವಿ ಆದರೆ ತ್ರಿಬಲ್ ಡಬಲ್ ಹ್ಯಾಟ್ರಿಕ್ ಗಳಿಸಿದ್ದಂತಾಗುತ್ತದೆ.

ನಾಗಚೈತನ್ಯ [ನಾಗಾರ್ಜುನ ಅವರ ಮೊದಲ ಹೆಂಡತಿ ಲಕ್ಷ್ಮಿ ಅವರ ಮಗ. ಲಕ್ಷ್ಮಿ ನಟ ವೆಂಕಟೇಶ್ ಅವರ ಅಕ್ಕ,. ಖ್ಯಾತ ನಿರ್ಮಾಪಕ ಡಿ. ರಾಮನಾಯ್ಡು ಅವರ ಮಗಳು]ಅಕ್ಕಿನೇನಿ ಕುಟುಂಬದ ಮತ್ತೊಂದು ಪ್ರತಿಭೆ. ತಾತಾ ನಾಗೇಶ್ವರ ರಾವ್, ಅಪ್ಪ ನಾಗಾರ್ಜುನ ಅವರ ಹಾರೈಕೆಯಿಂದ ಈ ಚಿತ್ರದಲ್ಲಿ ಅದ್ಭುತ ಅಭಿನಯ ನೀಡಲು ಎಲ್ಲಾ ತಯಾರಿ ನಡೆಸಿದ್ದಾರೆ. ಇತ್ತ ಕಾರ್ತಿಕಾರಿಗೆ ಕೂಡ ತಾಯಿ ರಾಧಾ,ದೊಡ್ಡಮ್ಮ ಅಂಬಿಕಾ ಕೂಡ ನಟನೆಯ ಕಿವಿಮಾತುಗಳನ್ನು ನೀಡಿ ಪ್ರೋತ್ಸಾಹಿಸಿದ್ದಾರಂತೆ. ಈ ಚಿತ್ರದ ಭವಿಷ್ಯದ ಮೇಲೆ ತಮ್ಮ ಮಗಳನ್ನು ಮುಂದೆ ತೆಲುಗು, ತಮಿಳು, ಕನ್ನಡ ಇವುಗಳಲ್ಲಿ ಯಾವ ಚಿತ್ರರಂಗದಲ್ಲಿ ಬೆಳೆಸಬೇಕೆಂದು ರಾಧಾ ನಿರ್ಧರಿಸುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada