»   » ನಿರ್ದೇಶನಕ್ಕೆ ನೋ, ನಟನೆಗೆ ಯಸ್; ನಾರಾಯಣ್

ನಿರ್ದೇಶನಕ್ಕೆ ನೋ, ನಟನೆಗೆ ಯಸ್; ನಾರಾಯಣ್

Posted By:
Subscribe to Filmibeat Kannada
<ul id="pagination-digg"><li class="next"><a href="/news/22-s-narayan-son-pankaj-movie-career-aid0172.html">Next »</a></li></ul>
S Narayan
ನಿರ್ದೇಶಕ, ನಿರ್ಮಾಪಕ ಹಾಗೂ ನಟ ಎಸ್ ನಾರಾಯಣ್ ಕನ್ನಡ ಚಿತ್ರಗಳ ನಿರ್ಮಾಣ ಹಾಗೂ ನಿರ್ದೇಶನಕ್ಕೆ ಗುಡ್ ಬೈ ಹೇಳಿರುವ ಹಿನ್ನೆಲೆಯಲ್ಲಿ ವಿಭಿನ್ನ ಪ್ರತಿಕ್ರಿಯೆಗಳು ಗಾಂಧಿನಗರದಲ್ಲಿ ವ್ಯಕ್ತವಾಗುತ್ತಿವೆ. ಈಗಾಗಲೇ ನಾರಾಯಣ್ ಸಮಯಪಾಲನೆ ಹಾಗೂ ಶಿಸ್ತಿಗೆ ಹೆಸರಾದ ವ್ಯಕ್ತಿ. ಅವರಿಗೆ ಪಾತ್ರ ಕೊಟ್ಟು ಬೈಸಿಕೊಳ್ಳುವವರು ಯಾರಿದ್ದಾರೆ ಎಂದು ಕುಹಕವಾಡುತ್ತಿರುವ ಸುದ್ದಿ ಬಂದಿದೆ.

ಮೊದಲೆಲ್ಲ ನಾರಾಯಣ್ ನಟನೆ ಮಾಡಿದ್ದಿದೆ. ಅವರದೇ ನಿರ್ದೇಶನ ಕೆಲವು ಚಿತ್ರಗಳಲ್ಲೂ ನಾರಾಯಣ್ ಪಾತ್ರ ಮಾಡಿದ್ದಾರೆ. ಆದರೆ ಇತ್ತೀಚಿಗೆ ಮಾಡಿರುವುದೆಲ್ಲ ಸಣ್ಣಪುಟ್ಟ ಪಾತ್ರಗಳೇ. ಅವರು ನಟರೆಂಬುದು ಜನಕ್ಕೆ ಬಹುಶಃ ಮರೆತೇ ಹೋಗಿದೆ. ಹೀಗಿರುವಾಗ ಬೇರೆ ನಿರ್ದೇಶಕರು ಅವರಿಗೆ ಪಾತ್ರ ಕೊಡಲು ಮುಂದೆ ಬರುತ್ತಾರೆಯೇ ಎಂಬುದು ಈಗಿರುವ ಪ್ರಶ್ನೆ. 

ರಿಮೇಕ್ ಚಿತ್ರಗಳನ್ನು ನಿರ್ದೇಶಿಸಿಯೂ ಗೆಲ್ಲದ ನಾರಾಯಣ್ ಅವರ "ಕೇವಲ ನಟನೆ ನಂಬಿಕೊಂಡು ಚಿತ್ರರಂಗದಲ್ಲಿರುತ್ತೇನೆ" ಎಂಬ ಮಾತನ್ನು ಗಾಂದಿನಗರ ನಂಬಲಿಕ್ಕೆ ತಯಾರಿಲ್ಲ. ಸದ್ಯವೇ ಅವರು ಈ ಮಾತನ್ನು ಮುರಿಯುವುದು ಗ್ಯಾರಂಟಿ ಎನ್ನಲಾಗುತ್ತಿದೆ. ಆದರೆ ಈ ಮೊದಲೆಲ್ಲ ಮಾತು ತಪ್ಪದ ನಾರಾಯಣ್ ಮುಂದಿನ ನಡೆಯ ಬಗ್ಗೆ ಯಾವುದನ್ನು ನಂಬುವುದು, ಯಾವುದನ್ನು ಬಿಡುವುದು ಎಂಬ ಗೊಂದಲದಲ್ಲಿ ಬಿದ್ದು ಗಾಂಧಿ ನಗರ ಒದ್ದಾಡುತ್ತಿದೆ ಎನ್ನಲಾಗಿದೆ. ಮುಂದಿನ ಪುಟ ನೊಡಿ...

<ul id="pagination-digg"><li class="next"><a href="/news/22-s-narayan-son-pankaj-movie-career-aid0172.html">Next »</a></li></ul>

English summary
Kannada Director S Narayan has announced he doesn't plan to work as a director and producer in future. Narayan retires from direction and production will focus solely on his work as actor.&#13; &#13;

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X