ಜೀವ ಇರುವವರೆಗೆ ಕರ್ನಾಟಕಕ್ಕೆ ದುಡಿಯಲು ಸಿದ್ಧ
ನಮ್ಮ ಕುಟುಂಬದ ಪ್ರತಿಯೊಬ್ಬರು ತಮ್ಮ ಜೀವ ಇರುವವರೆಗೆ ಕರ್ನಾಟಕ್ಕೆ ದುಡಿಯಲು ಸಿದ್ಧ ಎಂದಿದ್ದಾರೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್. ಅವರು ಬೆಂಗಳೂರಿನ ಜನಯನಗರ 9ನೇ ಬ್ಲಾಕ್‌ನಲ್ಲಿ ಕನ್ನಡ ಅಭಿಮಾನಿಗಳ ಸಂಘ ಹಮ್ಮಿಕೊಂಡಿದ್ದ ಡಾ.ರಾಜ್ ಕುಮಾರ್ ಕಂಚಿನ ಪುತ್ತಳಿ ಅನಾವರಣ ಸಂದರ್ಭದಲ್ಲಿ ಮಾತನಾಡುತ್ತಿದ್ದರು.
ಈ ಸಂದರ್ಭದಲ್ಲಿ ಶಿವಣ್ಣ ಮಾತನಾಡುತ್ತಾ, ಜನರ ಪ್ರೀತಿ, ವಿಶ್ವಾಸ ಅಪ್ಪಾಜಿ ಅವರ ಕುಟುಂಬಕ್ಕೆ ಸಿಕ್ಕಿರುವುದು ಪುಣ್ಯ ಎಂದರು. ಕನ್ನಡ ಚಿತ್ರರಂಗ, ಸಿನಿಮಾಗಳು ಮತ್ತು ಕಲಾವಿದರ ಮೇಲೆ ಅಭಿಮಾನಿಗಳ ವಿಶ್ವಾಸವಿರಲಿ. ಹೆಚ್ಚುಹೆಚ್ಚು ಕನ್ನಡ ಚಿತ್ರಗಳನ್ನು ವೀಕ್ಷಿಸುವ ಮೂಲಕ ಕನ್ನಡ ಚಿತ್ರರಂಗವನ್ನು ಬೆಳಸಬೇಕೆಂದು ಮನವಿ ಮಾಡಿದರು.
ಹಿರಿಯ ನಟಿ ತಾರಾ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಶಾಸಕ ಬಿಎನ್ ವಿಜಯ್ ಕುಮಾರ್, ಬಿಬಿಎಂಪಿ ಸದಸ್ಯರಾದ ಬಿ ಸೋಮಶೇಖರ್, ಮುನಿ ಸಂಜೀವಯ್ಯ, ಬಿಕೆ ರಾಮಮೂರ್ತಿ ಹಾಗೂ ತಾರಾ ಅವರನ್ನು ಸನ್ಮಾನಿಸಲಾಯಿತು. (ಏಜೆನ್ಸೀಸ್)
More from Filmibeat
English summary
Hat Trick Hero Shivarajkumar said that, my family members are ready to serve Karnataka till their last breath. He is speaking in an inaugural function of Dr.Rajkumar bronze statue in Jayanagar 9th block Bangalore.


Click it and Unblock the Notifications











