Just In
Don't Miss!
- News
ಕೆಂಪೇಗೌಡ ಏರ್ಪೋರ್ಟ್ಗೆ ಆರೋಗ್ಯ ಮಾನ್ಯತೆ ಪ್ರಮಾಣಪತ್ರ
- Lifestyle
"ಗುರುವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್ಯ"
- Sports
ಐಎಸ್ಎಲ್: ಬೆಂಗಳೂರಿಗೆ ಸೋಲಿನ ಆಘಾತ ನೀಡಿದ ಕೇರಳ ಬ್ಲಾಸ್ಟರ್ಸ್
- Education
WAPCOS Recruitment 2021: 11 ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಇಪ್ಪತ್ತು ದಿನದಲ್ಲಿ 47 ಪರ್ಸೆಂಟ್ ನಷ್ಟು ಏರಿಕೆ ಕಂಡ ಟಾಟಾ ಮೋಟಾರ್ಸ್ ಷೇರು
- Automobiles
ಡ್ಯುಯಲ್ ಟೋನ್ ಬಣ್ಣದ ಆಯ್ಕೆಯೊಂದಿಗೆ ರೋಡ್ ಟೆಸ್ಟಿಂಗ್ ನಡೆಸಿದ ಸಿಟ್ರನ್ ಸಿ5 ಏರ್ಕ್ರಾಸ್ ಕಾರು
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ತಮಿಳು 'ಮೈನಾ' ಹಿಡಿದ ಗೋಲ್ಡನ್ ಸ್ಟಾರ್ ಗಣೇಶ್
ಸದ್ಯಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ಸಖತ್ 'ಕೂಲಾ'ಗಿದ್ದಾರೆ. ಕಾರಣ ಅವರ ಸ್ವಂತ ನಿರ್ಮಾಣದ 'ಕೂಲ್... ಸಖತ್ ಹಾಟ್ ಮಗಾ' ಚಿತ್ರ ಇನ್ನೇನು ಬಿಡುಗಡೆಯಾಗಬೇಕಿದೆ. ಈ ಚಿತ್ರ ಹೊರತುಪಡಿಸಿದರೆ ಗಣೇಶ್ ಕೈಯಲ್ಲಿ ಯಾವುದೇ ಚಿತ್ರವಿಲ್ಲ. ಈಗವರು ತಮಿಳಿನ 'ಮೈನಾ' ಚಿತ್ರವನ್ನು ಕನ್ನಡಕ್ಕೆ ತರುತ್ತಿದ್ದಾರೆ. ಗಣೇಶ್ ಕೈಗೆತ್ತಿಕೊಂಡಿರುವ ಮತ್ತೊಂದು ರೀಮೇಕ್ ಚಿತ್ರವಿದು ಎಂದು ಬಿಡಿಸಿ ಹೇಳಬೇಕಾಗಿಲ್ಲ.
ಈ ಚಿತ್ರವನ್ನು ನಿರ್ಮಿಸುತ್ತಿರುವುದು ಗಂಡುಗಲಿ ಕೆ ಮಂಜು ಅರ್ಥಾತ್ ಕೊಬ್ಬರಿ ಮಂಜು. ತಮಿಳು 'ಮೈನಾ' ಚಿತ್ರಕ್ಕೆ ಆಕ್ಷನ್, ಕಟ್ ಹೇಳಿದ್ದ ಪ್ರಭು ಸೋಲೋಮನ್ ಕನ್ನಡ ಮೈನಾವನ್ನು ನಿರ್ದೇಶಿಸುತ್ತಿರುವುದು ವಿಶೇಷ. ಇನ್ನು ಮಂಜು ಕೈಯಲ್ಲಿ ಎರಡು ಚಿತ್ರಗಳಿವೆ, ಒಂದು 'ಹ್ಯಾಪಿ ಹಸ್ಬೆಂಡ್' ಹಾಗೂ ಮತ್ತೊಂದು 'ಶಿಕಾರಿ'. ಇದರ ಜೊತೆಗೆ ಈಗ ತಮಿಳಿನ ಮೈನಾವನ್ನು ಹಿಡಿದಿರುವುದು ವಿಶೇಷ.
ಈ ಚಿತ್ರದಲ್ಲಿ ಅಂಥಹದ್ದೇನಿದೆ ಎಂದರೆ, ಇದು ಕೂಡ ಒಂದು ಸೀದಾಸಾದಾ ಪ್ರೇಮಕತೆಯಷ್ಟೆ. ಈ ಹಿಂದೆ ಗಣೇಶ್ ಅಭಿನಯಿಸಿದ್ದ 'ಚೆಲುವಿನ ಚಿತ್ತಾರ', 'ಕೃಷ್ಣ' ಚಿತ್ರಗಳಂತೆ ಇಲ್ಲೂ ನವಿರಾದ ಪ್ರೇಮಕತೆಯಿದೆ. ಗಣೇಶ್ ಜೊತೆ ಕೆ ಮಂಜು ಈ ಹಿಂದೆ 'ಅರಮನೆ' ಚಿತ್ರವನ್ನು ನಿರ್ಮಿಸಿದ್ದರು. ಆ ಚಿತ್ರ ಶತಕ ಬಾರಿಸಿತ್ತು. 'ಮೈನಾ' ಚಿತ್ರದ ಮೇಲೂ ಕೆ ಮಂಜು ಅವರಿಗೆ ಅದೇ ವಿಶ್ವಾಸವಿದೆ.
ಕನ್ನಡ ಚಿತ್ರಗಳು : ಆರಿಸಿನೋಡು ಬೀಳಿಸಿನೋಡು
ನಿರ್ದೇಶಕ ಗುರುಪ್ರಸಾದ್ ಅವರ ಸಂಭಾಷಣೆ 'ಮೈನಾ' ಚಿತ್ರಕ್ಕಿದೆ. ಚಿತ್ರದ ನಾಯಕಿ ಸೇರಿದಂತೆ ಉಳಿದ ಪಾತ್ರವರ್ಗದ ಆಯ್ಕೆ ಇನ್ನಷ್ಟೆ ನಡೆಯಬೇಕಿದೆ. 'ಮೈನಾ' ಚಿತ್ರದ ರೀಮೇಕ್ ಹಕ್ಕುಗಳಿಗೆ ನಿರ್ದೇಶಕ ಪ್ರೇಮ್, ಇಂದ್ರಜಿತ್ ಸೇರಿದಂತೆ ನಿರ್ಮಾಪಕರಾದ ಕೆಸಿಎನ್ ಕುಮಾರ್ ಮತ್ತು ದಿನಕರ್ ಪ್ರಯತ್ನಿಸಿದ್ದರು. ಆದರೆ ಕಡೆಗೆ ರೀಮೇಕ್ ಹಕ್ಕುಗಳು ಕೆ ಮಂಜು ಪಾಲಾಗಿವೆ. [ಗಣೇಶ್]