For Quick Alerts
  ALLOW NOTIFICATIONS  
  For Daily Alerts

  ಕೋ ಕೋ ಚಿತ್ರ ನೋಡಿದ ಹ್ಯಾಟ್ರಿಕ್ ಹೀರೋ ಶಿವಣ್ಣ

  By Rajendra
  |

  ಸಾಮಾನ್ಯವಾಗಿ ಒಬ್ಬರ ಚಿತ್ರವನ್ನು ಇನ್ನೊಬ್ಬ ನಟ ನೋಡಿ ಸಂಭ್ರಮಿಸುವುದು ಅಪರೂಪದ ಸಂಗತಿ. ಆದರೆ ಇತ್ತೀಚೆಗೆ ತೆರೆಕಂಡು ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವ 'ಕೋ ಕೋ' ಚಿತ್ರವನ್ನು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಶನಿವಾರ (ಜ.21) ಬೆಂಗಳೂರಿನ ರಿಜಾಯ್ಸ್ ಚಿತ್ರಮಂದಿರದಲ್ಲಿ ನೋಡಿ ಆನಂದಿಸಿದರು.

  ಶ್ರೀನಗರ ಕಿಟ್ಟಿ, ಪ್ರಿಯಾಮಣಿ ಅಭಿನಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಶಿವಣ್ಣ ಜೊತೆ ಚಿತ್ರದ ನಿರ್ದೇಶಕ ಆರ್.ಚಂದ್ರು, ಗೀತ ಸಾಹಿತಿ ಚಿ ಗುರುದತ್ ಸೇರಿದಂತೆ ಮುಂತಾದವರು ಇದ್ದರು. ಬಾಕ್ಸಾಫೀಸ್ ಕಲೆಕ್ಷನ್‌ನಲ್ಲಿ ಕೋ ಕೋ ಚಿತ್ರ ಮುನ್ನುಗ್ಗುತ್ತಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.

  ತಾಜ್ ಮಹಲ್, ಪ್ರೇಂ ಕಹಾನಿ ಮತ್ತು ಮೈಲಾರಿ ಚಿತ್ರ ನಿರ್ದೇಶಿಸಿದ ಆರ್ ಚಂದ್ರು ಕೋ.ಕೋ ಬಗ್ಗೆ ಪ್ರೇಕ್ಷಕರಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. 200ಕ್ಕೂ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಲು ಉದ್ದೇಶಿಸಿದ್ದ ಈ ಚಿತ್ರಕ್ಕೆ ಕೊನೆ ಕ್ಷಣದಲ್ಲಿ ಅಂದರೆ ಪರಭಾಷಾ ಚಿತ್ರಗಳ ಹಾವಳಿಗಳ ನಡುವೆ ಚಿತ್ರಮಂದಿರದ ಸಮಸ್ಯೆ ಎದುರಾಗಿತ್ತು. (ಏಜೆನ್ಸೀಸ್)

  English summary
  Hat Trick Hero Shivarajkumar watches Kannada movie Ko Ko on Saturday January 21 in Bangalore. He lauds the making of the movie. Ko Ko director R Chandru, lyricist Chi Gurudutt are present at the time.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X