For Quick Alerts
  ALLOW NOTIFICATIONS  
  For Daily Alerts

  ದರ್ಶನ್, ಪುನೀತ್ ಜೊತೆ ಮತ್ತೆ 'ರಮ್ಯಾ' ನಟಿಸುತ್ತಾರಾ?

  |

  ಸದ್ಯ ಕನ್ನಡ ಚಿತ್ರರಂಗದಲ್ಲಿ ಬಾಕ್ಸ್ ಆಫೀಸ್ ಕಿಂಗ್ ಎನಿಸಿಕೊಂಡಿರುವವರು ಚಾಲೆಂಜಿಂಗ್ ಸ್ಟಾರ್ ದರ್ಶನ್. ಜೊತೆಗೆ ಪುನೀತ್ ರಾಜ್ ಕುಮಾರ್ ಮೊದಲಿನಿಂದಲೂ ಗೆಲ್ಲುತ್ತಿರುವ ಕುದುರೆ. ಇವರಿಬ್ಬರ ಜೊತೆ ಸ್ಯಾಂಡಲ್ ವುಡ್ ಲಕ್ಕಿ ಸ್ಟಾರ್ ರಮ್ಯಾ ನಟಿಸಿರುವುದು ಕ್ರಮವಾಗಿ ಒಂದು ಮತ್ತು ಎರಡು ಚಿತ್ರಗಳಲ್ಲಿ ಮಾತ್ರ. ದರ್ಶನ್ ಜತೆ ದತ್ತ ಹಾಗೂ ಪುನೀತ್ ಜೊತೆ ಅಭಿ, ಅರಸು.

  ರಮ್ಯಾ ಯಾಕೆ ದರ್ಶನ್ ಹಾಗೂ ಪುನೀತ್ ಜೊತೆ ಅಭಿನಯಿಸುತ್ತಿಲ್ಲ? ಸಿನಿಪ್ರೇಕ್ಷಕರನ್ನು ಮಾತ್ರವಲ್ಲದೇ ಗಾಂಧಿನಗರದ ಪಂಡಿತರನ್ನು ಕಾಡುತ್ತಿರುವ ಪ್ರಶ್ನೆಯಿದು. ರಮ್ಯಾ ಈನಡುವೆ ಹೊಸ ನಾಯಕನಟರ ಚಿತ್ರಗಳಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರಿಗಿಂತ ತುಂಬಾ ಕಿರಿಯರ ಜೊತೆಗೇ ಕಾಣಿಸಿಕೊಳ್ಳುತ್ತಿರುವುದು ಹೆಚ್ಚು. ಯಾಕೆ ಹೀಗೆ? ಇದಕ್ಕೆ ರಮ್ಯಾ ಉತ್ತರಿಸಿದ್ದಾರೆ.

  ರಮ್ಯಾ ಹೇಳುವ ಪ್ರಕಾರ "ನನಗೆ ಚಿತ್ರದ ಕಥೆ ಮತ್ತು ನನ್ನ ಪಾತ್ರ ಮಾತ್ರ ಮುಖ್ಯ. ನಾನು ಯಾವ ನಾಯಕನಟರ ಜೊತೆ ಅಭಿನಯಿಸುತ್ತೇನೆ ಎಂಬುದಲ್ಲ. ನನ್ನ ಕಾಲ್ ಶೀಟ್ ಕೇಳಿಕೊಂಡು ಬರುವ ನಿರ್ಮಾಪಕರು, ನಿರ್ದೇಶಕರ ಚಿತ್ರಗಳಲ್ಲಿ ಈಗೀಗ ನಾಯಕನಟರು ಹೊಸಬರಾಗಿರುವುದು ಹೆಚ್ಚು. ಕಥೆ ಚೆನ್ನಾಗಿದೆ, ನನ್ನ ಪಾತ್ರ ಚೆನ್ನಾಗಿದೆ ಎಂಬ ಕಾರಣಕ್ಕೆ ನಾನು ಒಪ್ಪಿಕೊಳ್ಳುತ್ತಿದ್ದೇನೆ ಅಷ್ಟೆ.

  "ನನಗೆ ದರ್ಶನ್ ಹಾಗೂ ಪುನೀತ್ ಅವರುಗಳ ಜೊತೆ ಮತ್ತೆ ನಟಿಸಲು ತುಂಬಾ ಇಷ್ಟ. ಆದರೆ ಅಂತಹ ಆಫರ್ ಬರಬೇಕಷ್ಟೇ. ಕಥೆ ಉತ್ತಮವಾಗಿರಬೇಕು, ಅದು ನನ್ನ ಕಂಡೀಷನ್. ಇತರ ಸಂಗತಿಗಳು ನನಗೆ ನಗಣ್ಯ. ಭಾರೀ ಬಜೆಟ್, ಅದ್ಧೂರಿ ಲೊಕೇಶನ್ನುಗಳು ಅಥವಾ ರಿಮೇಕ್ ಚಿತ್ರಗಳೇ ಪ್ರೇಕ್ಷಕರನ್ನು ಚಿತ್ರಮಂದಿರದತ್ತ ತರುವುದಿಲ್ಲ. ಪ್ರಯೋಗಾತ್ಮಕ ಚಿತ್ರಗಳೂ ಜನರನ್ನು ಸೆಳೆಯುತ್ತವೆ" ಎಂದಿದ್ದಾರೆ ರಮ್ಯಾ. (ಒನ್ ಇಂಡಿಯಾ ಕನ್ನಡ)

  English summary
  Recently, actress Ramya is acting more and more with upcoming Hero's movie. The question is that why Ramya chooses new Hero? But, Ramya rejects this and tells, I choice story and my role, not the Hero. Coming offers are like that. But I have wish to act with Darshan and Puneeth again. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X